Advertisement
2019ರ ಆಗಸ್ಟ್ 9ರ ಪ್ರವಾಹದಿಂದ ಜಿಲ್ಲೆಯಲ್ಲಿ ಎ ವರ್ಗದ 318, ಬಿ ವರ್ಗದ 194, ಸಿ ವರ್ಗದ 286 ಮನೆಗಳಿಗೆ ಹಾನಿಯಾಗಿರುವ ಕುರಿತು ಕಂದಾಯ ಇಲಾಖೆ ವರದಿ ನೀಡಿತ್ತು. ಬೆಳ್ತಂಗಡಿ ತಾಲೂ ಕೊಂದರಲ್ಲೆ ಅತೀ ಹೆಚ್ಚು 289 ಮನೆಗಳು ಹಾನಿಗೀಡಾಗಿದ್ದವು. ಅವುಗಳಲ್ಲಿ ಎ ವರ್ಗದ 203, ಬಿ ವರ್ಗದ 55, ಸಿ ವರ್ಗದ 31 ಮನೆಗಳಿವೆ. ಮುಖ್ಯಮಂತ್ರಿಗಳು ಪ್ರವಾಹ ವೀಕ್ಷಣೆ ನಡೆಸಿ ಅಂದೇರಾಜ್ಯಕ್ಕೆ ಅನ್ವಯವಾಗುವಂತೆ ಪರಿಹಾರ ಘೋಷಿಸಿ ದ್ದರು. ಆದರೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷéದಿಂದ ಅನುದಾನ ವಿಳಂಬ ವಾಗುತ್ತಿದೆ ಎನ್ನುವುದು ಸಂತ್ರಸ್ತರ ಆಕ್ರೋಶ.
ಹಾನಿಗೊಳಗಾದ ಎ ಹಾಗೂ ಬಿ ವರ್ಗದ ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 5 ಕಂತು, ಸಿ ವರ್ಗದ ಮನೆಗಳಿಗೆ 25 ಸಾವಿರ ರೂ.ಗಳಂತೆ 2 ಕಂತು ನೀಡಬೇಕಾಗಿತ್ತು. ಜಿಲ್ಲೆಯಲ್ಲಿ ಸಿ ವರ್ಗದ 286 ಸಂತ್ರಸ್ತರ ಖಾತೆಗೆ 1.43 ಕೋ.ರೂ.ಗಳನ್ನು
ಸರಕಾರವು ಜಿಲ್ಲಾಡಳಿತ ಮೂಲಕ ಜಮೆ ಮಾಡಿದೆ. ಉಳಿದಂತೆ ಎ ವರ್ಗದ 318 ಮನೆಗಳ ಪೈಕಿ 85 ಮನೆಗಳು, ಬಿ ವರ್ಗದ 194 ಮನೆಗಳ ಪೈಕಿ 20 ಮನೆಗಳು ಸೇರಿ 105 ಮಂದಿಗೆ 5ನೇ ಕಂತಿನ ಒಟ್ಟು 1 ಕೋಟಿ 5 ಲಕ್ಷ ರೂ. ಹಣ ಕೈಸೇರಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಎ ವರ್ಗದ 65, ಬಿ ವರ್ಗದ 46 ಸಂತ್ರಸ್ತರಿಗೆ ಸಂಪೂರ್ಣ ಮೊತ್ತ ಪಾವತಿಯಾಗಿದೆ. ವಿಳಂಬ ಆಗಿರುವುದೇಕೆ?
ಬಹುತೇಕರ ಮನೆ ಪೂರ್ಣಗೊಂಡಿದ್ದರೂ ಬಾಡಿಗೆ ಮನೆಯಿಂದ ಸ್ವಂತಮನೆ ಸೇರುವ ಭಾಗ್ಯ ಇನ್ನೂ ಬಂದಿಲ್ಲ. ಸಾಲಸೋಲ ಮಾಡಿ ಗೃಹಪ್ರವೇಶ ಮಾಡಿದವರು ಈಗ ಬಡ್ಡಿಕಟ್ಟುತ್ತ ಜೀವಿಸುವಂತಾಗಿದೆ. ಆಯಾ ಗ್ರಾ.ಪಂ.ನವರು ಹಾಗೋ ಹೀಗೋ ಸಬೂಬು ನೀಡುತ್ತಾ ಜಿಪಿಎಸ್ ಪೂರ್ಣಗೊಳಿಸಿ ಮೂರು ತಿಂಗಳಾಗಿವೆ. ಆದರೆ ಕಂದಾಯ ಇಲಾಖೆಯಿಂದ ಆಡಿಟ್ ಆಗದೆ ತಹಶೀಲ್ದಾರ್ ಬಯೋಮೆಟ್ರಿಕ್ ನೀಡಿ ದೃಢೀಕರಿಸದೆ ಇರುವುದರಿಂದ 5ನೇ ಕಂತು ವಿಳಂಬವಾಗಿದೆ ಎಂದು ಬೆಂಗಳೂರು ರಾಜೀವ್ ಗಾಂಧಿ ವಸತಿ ನಿಗಮದವರು ತಿಳಿಸಿದ್ದಾರೆ.
Related Articles
Advertisement