ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ತಾರಗೊಂಡಿರುವ ಅನ್ನಪೂರ್ಣದ ಮೇಲಂತಸ್ತಿನ ಸುಸಜ್ಜಿತ ಆಸನದ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯವನ್ನು ನ.14ರಂದು ಉದ್ಘಾಟಿಸಿ, ಅಮೃತವರ್ಷಿಣಿಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವದಿಸಿದರು.
Advertisement
ಭಾರತೀಯ ಸಂಸ್ಕೃತಿಯಲ್ಲಿ ಅಧ್ಯಯನ, ಅಭಿಯಾನ, ಆಚಾರ ಮತ್ತು ಅನ್ನದಾನ ವಿಶೇಷವಾದದ್ದು. ವಿಶ್ವದಲ್ಲಿ ದೇಶ ಆರ್ಥಿಕವಾಗಿ 3ನೇ ಸ್ಥಾನಕ್ಕೇರಲು ಗ್ರಾಮೀಣ ಭಾಗದ ಸ್ವ ಉದ್ಯೋಗದಿಂದ ಸಾಧ್ಯ. ಅದನ್ನು ಡಾ| ಹೆಗ್ಗಡೆ ಹಲವು ದಶಕಗಳಿಂದಲೇ ಕೈಗೂಡಿಸಿದ್ದಾರೆ. ಹಾಗಾಗಿ ದೇಶದ ವಿಕಾಸಕ್ಕೆ ನಾವೆಲ್ಲ ಆರ್ಥಿಕ ದಾರಿದ್ರ್ಯ, ಮನೋದಾರಿದ್ರ್ಯವನ್ನು ನಿರ್ಮೂಲ ಗೊಳಿಸಬೇಕು. ಉತ್ಸಾಹ ಮತ್ತು ಉದ್ಯಮದ ಮೂಲಕ, ಪ್ರಯತ್ನ ಮತ್ತು ಪ್ರಾರ್ಥನೆ ಮೂಲಕ ಜವಾಬ್ದಾರಿಯುತ ದೇಶಭಕ್ತರಾಗಿ ಎಂದು ಹೇಳಿದರು.
ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಅನ್ನದಾನ ಎಂದರೆ ನೆನಪಾಗುವುದೇ ಧರ್ಮಸ್ಥಳ. ಕ್ಷೇತ್ರವು ಡಾ| ಹೆಗ್ಗಡೆ ಮಾರ್ಗದರ್ಶನ ಹಾಗೂ ಬದ್ಧತೆಯಿಂದ ಸಾಮಾಜಿಕವಾಗಿ ರಾಜ್ಯದ ದೇಶದ ಪ್ರಸಿದ್ಧ ಕ್ಷೇತ್ರವಾಗಿ ಬೆಳಗಿದೆ. ಕ್ಷೇತ್ರವು ಸನಾತನ ಧರ್ಮಕ್ಕೆ ಗಟ್ಟಿಯಾಗಿ ಪುಣ್ಯಕೋಟಿಯಂತೆ ಆಶ್ರಯಿಸಿದೆ ಎಂದದರು. ಮಂಜುನಾಥ ಸ್ವಾಮಿಯ ಇಚ್ಛೆ ಈಡೇರಿದೆ: ಡಾ| ಹೆಗ್ಗಡೆ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಚತುರ್ದಾನದಲ್ಲಿ ಅನ್ನದಾನ ಶ್ರೇಷ್ಠವಾದುದು. ಭಕ್ತರ ಆರೋಗ್ಯ ದೃಷ್ಟಿಕೋನವನ್ನರಿತು ಆರಾಮದಾಯಕ ಭೋಜನಕ್ಕೆ ಆಸನದ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದನ್ನು ಕಾಂಚಿಶ್ರೀಗಳ ಹಸ್ತದಿಂದಲೇ ಉದ್ಘಾಟಿಸಬೇಕೆಂಬ ಮಂಜುನಾಥ ಸ್ವಾಮಿಯ ಇಚ್ಛೆ ಈಡೇರಿದೆ ಎಂದು ಹೇಳಿದರು.
Related Articles
Advertisement
ಉಜಿರೆ ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅನ್ನಪೂರ್ಣ ಭೋಜನಾಲಯದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ವಂದಿಸಿದರು. ಡಾ| ಶ್ರೀಧರ ಭಟ್ ಮತ್ತು ಸುನಿಲ್ ಪಂಡಿತ್ ನಿರೂಪಿಸಿದರು.
ಏಕಕಾಲದಲ್ಲಿ 3 ಸಾವಿರ ಮಂದಿಗೆ ಅನ್ನದಾನಧರ್ಮಸ್ಥಳದಲ್ಲಿ ಕಳೆದ ವರ್ಷ 75,11,500 ಲಕ್ಷ ಮಂದಿ ಭೋಜನ ಸ್ವೀಕರಿಸಿದ್ದಾರೆ. 240 ಮಂದಿ ಸಿಬಂದಿ ದಿನದ 24 ತಾಸು ಕರ್ತವ್ಯ ನಿರ್ವ ಹಿಸುತ್ತಿದ್ದು, 1 ತಾಸಿನಲ್ಲಿ ತಯಾರಾದ ಭೋಜನದಿಂದ 12,000 ಮಂದಿಗೆ ಬಡಿಸುವಷ್ಟು ಸಾಮರ್ಥ್ಯದ ಆಧುನಿಕ ವ್ಯವಸ್ಥೆಯಿದೆ. ದಿನಕ್ಕೆ ಸರಾಸರಿ 20ರಿಂದ 22 ಸಾವಿರ ಭಕ್ತರು ಭೋಜನ ಸ್ವೀಕರಿಸುತ್ತಿದ್ದು, 24 ಕ್ವಿಂಟಾಲ್, ವಾರ್ಷಿಕವಾಗಿ 8,448 ಕ್ವಿಂಟಾಲ್ ಅಕ್ಕಿ ವಿನಿಯೋಗವಾಗುತ್ತದೆ. ಹಾಗಾಗಿ ಈಗ 1,170 ಆಸನವುಳ್ಳ ನೂತನ ಭೋಜನಾಲಯ ಹಾಗೂ ಈ ಹಿಂದಿನ ಕೆಳ ಅಂತಸ್ತು ಸೇರಿ ಏಕಕಾಲದಲ್ಲಿ ಒಟ್ಟು 3 ಸಾವಿರ ಮಂದಿ ಭೋಜನ ಸ್ವೀಕರಿಸಬಹುದಾದ ಅಚ್ಚುಕಟ್ಟಿನ ಭೋಜನಾಲಯ ಅನ್ನಪೂರ್ಣದಲ್ಲಿ ಸಿದ್ಧವಾಗಿದೆ. ಡಾ| ಹೆಗ್ಗಡೆಗೆ ಮಲೆನಾಡ ರತ್ನ ಬಿರುದು
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಏಳು ತಿಂಗಳ ಬೇಡಿಕೆಯಂತೆ ನಾನು ಕರ್ನಾಟಕಕ್ಕೆ ಬಂದಿರುವೆ. ಭಕ್ತಿ ಮತ್ತು ಧರ್ಮದ ವಿಚಾರದಲ್ಲಿ ವಿಶ್ವಾಸ ಮುಖ್ಯ. ದೇಶದ ಸಂಸ್ಕೃತಿ ವಿಕಾಸ, ಕುಟುಂಬದ ವಿಕಾಸ, ಗ್ರಾಮೀಣ ವಿಕಾಸದ ಮೂಲಕ ಪ್ರಜಾಹಿತಕ್ಕಾಗಿ ರಾಜನೀತಿ ಬೇಕು. ಕರ್ನಾಟಕದ ಪ್ರಜೆಗಳಿಗೆ ಡಾ| ಹೆಗ್ಗಡೆಯೇ ಭರವಸೆ, ಅದಕ್ಕಾಗಿ ಅವರಿಗೆ ಮಲೆನಾಡ ರತ್ನ ಬಿರುದು ನೀಡಿ ಕಾಂಚಿ ಶ್ರೀಗಳು ಡಾ| ಹೆಗ್ಗಡೆಯವರನ್ನು ಗೌರವಿಸಿದರು.