Advertisement
ರಾಜಸ್ಥಾನದಲ್ಲಿ ಮಳೆ, ಪ್ರವಾಹ ಸಂಬಂಧಿ ಘಟನೆಗಳಿಗೆ 7 ಮಂದಿ ಬಲಿಯಾಗಿದ್ದಾರೆ. ಮಂಗಳವಾರವೂ ಇಲ್ಲಿ ಭಾರೀ ಮಳೆಯಾಗಿದ್ದು, ಬುಧವಾರವೂ ಇದೇ ಸ್ಥಿತಿ ಮುಂದುವರಿಯಲಿದೆ. ಆ.20ರವರೆಗೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದಲ್ಲಿ ಪ್ರವಾಹದಿಂದಾಗಿ ಈಗಾಗಲೇ 80 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದು, ಈವರೆಗೆ 25 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಈಶಾನ್ಯ ಭಾಗದ ಅಸ್ಸಾಂನಲ್ಲಿ ಹಲವು ಜಿಲ್ಲೆಗಳು ಈಗಲೂ ಮುಳುಗಡೆಯಾಗಿವೆ.
Related Articles
ಪ್ರಸಕ್ತ ಮುಂಗಾರು ಅವಧಿಯಲ್ಲಿ ಅಂದರೆ ಜೂನ್ 1ರಿಂದ ಈವರೆಗೆ ಮಹಾರಾಷ್ಟ್ರವು ವಾಡಿಕೆಗಿಂತ ಶೇ.16ರಷ್ಟು ಹೆಚ್ಚು ಮಳೆಯನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂ.1ರಿಂದ ಆ.17ರವರೆಗೆ ರಾಜ್ಯದಲ್ಲಿ 826.7 ಮಿ.ಮೀ. ಮಳೆಯಾಗಿದೆ. ಹಿಂದಿನ ವರ್ಷಗಳ ಇದೇ ಅವಧಿಯಲ್ಲಿ ಸರಾಸರಿ 713.7 ಮಿ.ಮೀ. ಮಳೆಯಾಗಿತ್ತು. ಅಂದರೆ, ಸಾಮಾನ್ಯಕ್ಕಿಂತ ಶೇ. 16 ರಷ್ಟು ಹೆಚ್ಚು ಮಳೆ ಬಿದ್ದಿದೆ. ರಾಜ್ಯದ 36 ಜಿಲ್ಲೆಗಳ ಪೈಕಿ 6 ಜಿಲ್ಲೆಗಳು ಹೆಚ್ಚುವರಿ ಮಳೆಯನ್ನು ಕಂಡಿ ದ್ದರೆ, ಯವತ್ಮಾಲ್, ಗೋಂಡಿಯಾ ಮತ್ತು ಅಕೋಲಾಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದೂ ಇಲಾಖೆ ಹೇಳಿದೆ.
Advertisement