Advertisement

ಗ್ರಾಹಕರಿಗೆ ಮೆಟಾವರ್ಸ್ ಸೌಲಭ್ಯ ಪರಿಚಯಿಸಿದ ಫ್ಲಿಪ್ ಕಾರ್ಟ್

02:01 PM Oct 18, 2022 | Team Udayavani |

ಬೆಂಗಳೂರು: ಭಾರತದ ಪ್ರಮುಖ ಇ-ಕಾಮರ್ಸ್ ಮಾರ್ಕೆಟ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರು ಶಾಪಿಂಗ್‍ ಮಾಡುವ ಸಂದರ್ಭದಲ್ಲಿ ವಸ್ತುಗಳ ನೈಜ ಅನುಭವವನ್ನು ವರ್ಚುವಲ್‍ ಮೂಲಕ ಪಡೆಯಲು eDAO ಸಹಭಾಗಿತ್ವದಲ್ಲಿ ಮೆಟಾವರ್ಸ್ ಸೌಲಭ್ಯವನ್ನು ಕಲ್ಪಿಸಿದೆ.

Advertisement

ಇದಕ್ಕೆ ಸಂಬಂಧಿಸಿದಂತೆ ಫ್ಲಿಪ್ ಕಾರ್ಟ್ ಇಂದು ಘೋಷಣೆ ಮಾಡಿದ್ದು, ಗ್ರಾಹಕರು ಮಾಡಬಹುದಾದ ಮೆಟಾವರ್ಸ್ ಸ್ಪೇಸ್ ಫೋಟೋರಿಯಲಿಸ್ಟಿಕ್ ವರ್ಚುವಲ್ ಡೆಸ್ಟಿನೇಷನ್ ನಲ್ಲಿ ಉತ್ಪನ್ನಗಳನ್ನು ಅನ್ವೇಷಣೆ ಮಾಡಿ ಫ್ಲಿಪ್ ಕಾರ್ಟ್ ಅಪ್ಲಿಕೇಶನ್ ನಲ್ಲಿ ಶಾಪಿಂಗ್ ಮಾಡಬಹುದಾಗಿದೆ. eDAO ನ ಪ್ರವರ್ತಕ ವೆಬ್3 ಟೆಕ್ ಸ್ಟಾಕ್ ಅನ್ನು ಬಳಸಿಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಸೇವೆಯನ್ನು ಆರಂಭಿಸುವ ಉದ್ದೇಶವೆಂದರೆ ಶಾಪಿಂಗ್ ನಿರೂಪಣೆಯನ್ನು ‘ಫ್ಲಿಪ್’ ಮಾಡುವುದು, ಗ್ರಾಹಕರು ತಮ್ಮ ನೆಚ್ಚಿನ ಬ್ರ್ಯಾಂಡ್ ಗಳಿಗೆ ಹತ್ತಿರವಾಗಲು ಅವಕಾಶ ಮಾಡಿಕೊಡುವ ಮೆಟಾವರ್ಸ್ ನಲ್ಲಿ ಸಂವಹನವು ಎರಡು ರೀತಿಯಲ್ಲಿ ಚಾಲನೆಗೊಳ್ಳುತ್ತದೆ. ಫ್ಲಿಪ್ ವರ್ಸ್ ಫ್ಲಿಪ್ ಕಾರ್ಟ್ ನ ಹೊಸದಾಗಿ ಆರಂಭಿಸಲಾದ ಪ್ಲಾಟ್ ಫಾರ್ಮ್, ಫೈರ್ ಡ್ರಾಪ್ಸ್ ನಲ್ಲಿ ಲಭ್ಯವಾಗಲಿದೆ. ಇದನ್ನು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನ ಅಪ್ಲಿಕೇಶನ್ ನಿಂದ ಪ್ರವೇಶಿಸಬಹುದಾಗಿದೆ.

ಕ್ರೀಡಾ ಉಡುಪುಗಳು, ವೇರೇಬಲ್ ಎಲೆಕ್ಟ್ರಾನಿಕ್ಸ್, ಫ್ಯಾಶನ್ ನಿಂದ ಹಿಡಿದು ಗೃಹೋಪಯೋಗಿ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕಗಳವರೆಗೆ ಫ್ಲಿಪ್ ವರ್ಸ್ ನ ಈ ಮೊದಲ ಪುನರಾವರ್ತನೆಯಲ್ಲಿ ಉತ್ಪನ್ನಗಳು ಮತ್ತು ಕೊಡುಗೆಗಳನ್ನು ಪ್ರದರ್ಶಿಸಲು ವರ್ಚುವಲ್ ಥಿಯೇಟರ್ ನ ಕಲ್ಪನೆಯನ್ನು ವ್ಯಾಪಕ ಶ್ರೇಣಿಯ ಬ್ರ್ಯಾಂಡ್ ಗಳು ಸ್ವೀಕರಿಸುತ್ತವೆ. ಪೂಮಾ, ನಾಯ್ಸ್, ಲ್ಯಾವಿಯಾ, ನಿವ್ಯಾ, ಟೊಕೊಯೋ ಟಾಕೀಸ್, ಕ್ಯಾಂಪಸ್, ವಿಐಪಿ, ಅಜ್ಮಲ್ ಪರ್ಫ್ಯೂಮ್, ಹಿಮಾಲಯ, ಬಟರ್ ಫ್ಲೈ ಇಂಡಿಯಾ ಸೇರಿದಂತೆ ಹಲವು ಬ್ರ್ಯಾಂಡ್ ಗಳು ಈ ಆವೃತ್ತಿಯಲ್ಲಿ ಇರಲಿವೆ. ಫ್ಲಿಪ್ ವರ್ಸ್ ನ ಮೊದಲನೆಯ ಹಂತವು ಆ್ಯಂಡ್ರಾಯ್ಡ್ ಗೆ ಮಾತ್ರ ಅನುಭವವಾಗಿದ್ದು, ಇದು ಒಂದು ವಾರದವರೆಗೆ ಲೈವ್ ಆಗಿರುತ್ತದೆ.

ನಾಯ್ಸ್ ನ ಸಹಸಂಸ್ಥಾಪಕ ಗೌರವ್ ಖಾತ್ರಿ ಅವರು ಮಾತನಾಡಿ, ”ಭವಿಷ್ಯದ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ಹೊಸ ಯುಗದಲ್ಲಿ ಬಳಕೆದಾರರಿಗೆ ಹೊಸ ಮತ್ತು ಆಕರ್ಷಕವಾದ ಅನುಭವಗಳನ್ನು ಹೊತ್ತು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವೀನ್ಯತೆಯ ಬ್ರ್ಯಾಂಡ್ ನಂತೆ ನಾವು ಫ್ಲಿಪ್ ಕಾರ್ಟ್ ವರ್ಚುವಲ್ ವರ್ಲ್ಡ್ ನ ಭಾಗವಾಗಲು ತೀವ್ರ ಉತ್ಸುಕರಾಗಿದ್ದೇವೆ ಹಾಗೂ ನಮ್ಮ ಶ್ರೇಣಿಯನ್ನು ಪ್ರದರ್ಶಿಸಲು ವರ್ಚುವಲ್ ಸ್ಟೋರ್ ಗಳನ್ನು ಸ್ಥಾಪಿಸುತ್ತೇವೆ. ನಮ್ಮ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ರೂಪಗಳಲ್ಲಿ ವಿಶ್ವದಾದ್ಯಂತ ನ್ಯಾವಿಗೇಟ್ ಮಾಡುವ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ಈ ದಿಸೆಯಲ್ಲಿ ನಾಯ್ಸ್ ತನ್ನ ಕೇಂದ್ರದಲ್ಲಿ ಗ್ರಾಹಕ-ಕೇಂದ್ರಿತ ಚಾಲಿತ ಹಾಗೂ ಗ್ರಾಹಕರ ಎಂಗೇಜ್ಮೆಂಟ್ ಪಟ್ಟಿಯನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಸಹಾಯ ಮಾಡುವ ಮಾರ್ಗಗಳ ಆವಿಷ್ಕಾರದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದೇವೆ. ಫ್ಲಿಪ್ ಕಾರ್ಟ್ ವರ್ಚುವಲ್ ವರ್ಲ್ಡ್ ಗ್ರಾಹಕರ ಖರೀದಿ ಪ್ರಯಾಣಕ್ಕೆ ಹೊಸ ಅರ್ಥವನ್ನು ಕೊಡುಗ ನಿಟ್ಟಿನಲ್ಲಿ ಇದು ಸಹಾಯ ಮಾಡುತ್ತದೆ ಹಾಗೂ ಫ್ಲಿಪ್ ಕಾರ್ಟ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ನಾಯ್ಸ್ ಡಿವೈಸ್ ಗಳಿಗಾಗಿ ಶಾಪಿಂಗ್ ಮಾಡುವಾಗ ಅವರ ಅನುಭವವನ್ನು ಹೆಚ್ಚಿಸುತ್ತದೆ ಎಂಬುದು ನಮಗೆ ಖಚಿತವಾಗಿದೆ’ ಎಂದರು.

Advertisement

ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಕಾರ್ಯಕ್ರಮದಲ್ಲಿ ಡಿಜಿಟಲ್ ಟ್ರೆಸರ್ ಹಂಟ್ ಅನುಷ್ಠಾನದಲ್ಲಿ ಫ್ಲಿಪ್ ಕಾರ್ಟ್ ಮತ್ತು eDEO ಸಹಭಾಗಿತ್ವ ಮಾಡಿಕೊಂಡಿವೆ. 10 ದಿನಗಳ ಕಾಲ ನಡೆದ ಈ ಬಿಗ್ ಬಿಲಿಯನ್ ಡೇಸ್ ನ ಕೊನೆಯಲ್ಲಿ ಶಾಪರ್ ಗಳು  ‘ದಿ ಸ್ಟ್ರಾಂಡ್’ ಡಿಜಿಟಲ್ ಸಂಗ್ರಹಕ್ಕೆ ಪ್ರವೇಶವನ್ನು ಪಡೆದರು. ಜಾಗತಿಕ ಪಾಪ್ ಸಂಸ್ಕೃತಿ ಪರಿಸರ ವ್ಯವಸ್ಥೆಗೆ eDEO ನ ಎಲ್ಲಾ ಪ್ರವೇಶ ಪಾಸ್ ಪೋರ್ಟ್, ವ್ಯಾಪಕವಾದ ಕಲೆ, ಕ್ರೀಡೆ, ಗೇಮಿಂಗ್, ಮನರಂಜನೆ ಮತ್ತು ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next