ನವದೆಹಲಿ: ಫ್ಲಿಫ್ ಕಾರ್ಟ್ “ಬಿಗ್ ದಿವಾಲಿ ಸೇಲ್” ಆರಂಭವಾಗುತ್ತಿದ್ದು ಅಕ್ಟೋಬರ್ 29 ರಿಂದ ನವೆಂಬರ್ 4 ರವರೆಗೂ ಗ್ರಾಹಕರಿಗೆ ಭರ್ಜರಿ ಆಫರ್ ದೊರಕುತ್ತಿದೆ.
ಇತ್ತೀಚಿಗಷ್ಟೇ ಬಿಗ್ ಬಿಲಿಯನ್ ಡೇ (ಅ. 17- 21) ಸೇಲ್ ಫೂರ್ಣಗೊಳಿಸಿದ್ದ ಫ್ಲಿಫ್ ಕಾರ್ಟ್, ಇದೀಗ ಗ್ರಾಹಕರಿಗೆ ಹಲವು ವಸ್ತುಗಳ ಮೇಲೆ ದಸರಾ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಬಿಗ್ ಬಿಲಿಯನ್ ಮಾದರಿಯಲ್ಲೇ ‘ಬಿಗ್ ದಿವಾಲಿ’ ಸೇಲ್ ಕೂಡ ಆರಂಭವಾಗುತ್ತಿದ್ದು, ಫ್ಲಿಫ್ ಕಾರ್ಟ್ ಪ್ಲಸ್ ಹೊಂದಿರುವವರಿಗೆ ಮುಂಚಿತವಾಗಿ ಆಫರ್ ಗಳು ದೊರಕುತ್ತಿದೆ. ಮಾತ್ರವಲ್ಲದೆ ಹಲವಾರು ಬ್ಯಾಂಕ್ ಗಳು ಕೂಡ ಆಫರ್ ನೀಡುತ್ತಿವೆ. ನೋ ಕಾಸ್ಟ್ ಇಎಂಐ ಆಯ್ಕೆಯೂ ಇದ್ದು, ಹಲವು ವಸ್ತುಗಳಿಗೆ ಡಿಸ್ಕೌಂಟ್ ದೊರಕುತ್ತಿದೆ.
ಫ್ಲಿಫ್ ಕಾರ್ಟ್ ಬಿಗ್ ದಿವಾಲಿ ಸೇಲ್: ಫ್ಲಿಫ್ ಕಾರ್ಟ್ ಪ್ಲಸ್ ಅಕೌಂಟ್ ಹೊಂದಿರುವವರಿಗೆ ಅಕ್ಟೋಬರ್ 29ರ ಮಧ್ಯರಾತ್ರಿಯಿಂದ ಆಫರ್ ಗಳು ದೊರಕುತ್ತಿದ್ದು, ನಂತರದಲ್ಲಿ ಉಳಿದ ಗ್ರಾಹಕರಿಗೆ ಲಭ್ಯವಾಗಲಿದೆ. ಸುಮಾರು 7 ದಿನಗಳ ಕಾಲ ಈ ದಿವಾಲಿ ಸೇಲ್ ನಡೆಯಲಿದ್ದು ನವೆಂಬರ್ 4ರಂದು ಕೊನೆಗೊಳ್ಳುತ್ತಿದೆ. ಇದಕ್ಕಾಗಿ Axis bank ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ 10 % ಡಿಸ್ಕೌಂಟ್ ದೊರಕುತ್ತಿದೆ. ಮಾತ್ರವಲ್ಲದೆ ಬಜಾಜ್ ಫೈನಾನ್ಸ್, ಹೆಚ್ ಡಿಎಫ್ ಸಿ, ಐಸಿಐಸಿಐ, ಎಸ್ ಬಿಐ, ಮತ್ತು ಇತರ ಬ್ಯಾಂಕ್ ಗಳಿಂದ ನೋ ಕಾಸ್ಟ್ ಇಎಂಐ ದೊರಕುತ್ತಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
Related Articles
ದಿವಾಲಿ ಸೇಲ್ ನಲ್ಲಿ ಸ್ಯಾಮ್ ಸಂಗ್ ನ, ಗ್ಯಾಲಕ್ಷಿ F41, ಗ್ಯಾಲಕ್ಷಿ S20+, ಗ್ಯಾಲಕ್ಷಿ A50s, ಮುಂತಾದ ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಆಫರ್ ದೊರಕುತ್ತಿದೆ. ಮಾತ್ರವಲ್ಲದೆ ಪೋಕೋ M2, ಪೋಕೋ M2 Pro, ಪೋಕೋ C3, ಒಪ್ಪೋ ರೆನೋ 2F, ಒಪ್ಪೋ A52, ಒಪ್ಪೋ F15, ರಿಯಲ್ ಮೀ ಸೀರಿಸ್ ಸ್ಮಾರ್ಟ್ ಪೋನ್ ಗಳೂ ಕೂಡ ರಿಯಾಯಿತಿ ದರದಲ್ಲಿ ದೊರಕುತ್ತಿದೆ,
ಇದನ್ನೂ ಓದಿ: 14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ
ಗಮನಾರ್ಹ ಸಂಗತಿಯೆಂದರೇ ಕ್ಯಾಮಾರಾ, ಸ್ಮಾರ್ಟ್ ವಾಚ್, ಹೆಡ್ ಫೋನ್ಸ್, ಸ್ಪೀಕರ್ಸ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳಿಗೆ 80% ನಷ್ಟು ಡಿಸ್ಕೌಂಟ್ ನಿರೀಕ್ಷಿಸಬಹುದು. ಮಾತ್ರವಲ್ಲದೆ ಆಯ್ದ ಲ್ಯಾಪ್ ಟಾಪ್ ಗಳಿಗೆ 50% ಡಿಸ್ಕೌಂಟ್ ಗಳಿವೆ. ಸುಮಾರು 3 ಕೋಟಿಗಿಂತ ಅಧಿಕ ವಸ್ತುಗಳು ಮಾರಾಟಕಿದ್ದು, ಪ್ರತಿದಿನ ಹೊಸತನದಿಂದ ಕೂಡಿರಲಿದೆ ಎಂದು ಫ್ಲಿಫ್ ಕಾರ್ಟ್ ತಿಳಿಸಿದೆ.
ಟಿವಿ, ರೆಫ್ರಿಜರೇಟರ್, ಮೈಕ್ರೋ ವೇವ್ಸ್, ವಾಷಿಂಗ್ ಮೆಷಿನ್, ಮುಂತಾದವುಗಳಿಗೂ ಕೂಡ 80% ಡಿಸ್ಕೌಂಟ್ ದೊರೆಯುತ್ತದೆ. ಮಾತ್ರವಲ್ಲದೆ ಎಕ್ಸ್ ಚೇಂಜ್ ಆಫರ್ ಗಳು ಕೂಡ ಆದ್ದು, ಆಯ್ದು ಫ್ಲಿಫ್ ಕಾರ್ಟ್ ಬ್ರಾಂಡೆಡ್ ವಸ್ತುಗಳು ಕೂಡ 80% ರಿಯಾಯಿತಿಯಲ್ಲಿ ಸಿಗುವುದು. ಪ್ರತಿದಿನ ಹೊಸ ಆಫರ್ ಗಳಿದ್ದು, 12AM, 8AM, 4PM ಗೆ ಮೊಬೈಲ್, ಟಿವಿ ಹಾಗೂ ಇತರ ವಸ್ತುಗಳು ಮಾರಾಟಕ್ಕಿರುತ್ತದೆ. ಕಡಿಮೆ ಬೆಲೆಯ ವಸ್ತುಗಳನ್ನು ಪ್ರತಿದಿನ 2AM ವರೆಗೂ ಆರ್ಡರ್ ಮಾಡಬಹುದು.
ಇದನ್ನೂ ಓದಿ: ವಿದೇಶಿ ಸ್ಕಾಚ್ ಗೆ ನಿಷೇಧ? ಭಾರತದ ಸೇನಾ ಕ್ಯಾಂಟಿನ್ ನಲ್ಲಿ ಆಮದು ವಸ್ತು ಖರೀದಿಸುವಂತಿಲ್ಲ…