ದೀರ್ಘ ಬಾಳಿಕೆ ಬೇಕೆಂದರೆ, ಫ್ಲಾಸ್ಕ್‌ಗೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ಎಚ್ಚರವಹಿಸಿ. ಬೀಳಿಸುವು ದಾಗಲಿ, ಫ್ಲಾಸ್ಕ್‌ಗೆ ಜಖಂ ಆಗುವ ಯಾವುದೇ ಚಟುವಟಿಕೆ ಯನ್ನಾಗಲಿ ಮಾಡ ಬೇಡಿ. ಫ್ಲಾಸ್ಕ್ ಏನಾದರೂ ಬಿದ್ದರೆ, ಅದರ ಒಳಪದರಗಳಿಗೆ ಹಾನಿಯುಂಟಾಗಿ, ಶಾಖ ಹಿಡಿದಿಡುವ ಸಾಮರ್ಥ್ಯವೇ ಇಲ್ಲವಾಗುತ್ತದೆ. ಮೈಕ್ರೊ ವೇವ್ ಓವೆನ್, ಎಲೆಕ್ಟ್ರಾನಿಕ್ ಡ್ರೈಯರ್ ಮುಂತಾದ ಹೀಟಿಂಗ್ ಉಪಕರಣಗಳನ್ನು ಬಳಸಿ, ಫ್ಲಾಸ್ಕ್ ಅನ್ನು ಬಿಸಿ ಮಾಡುವ ದುಸ್ಸಾಹಸಕ್ಕೆ ಕೈಹಾಕಬಾರದು.
ಫ್ಲಾಸ್ಕ್ ತುಂಬಿ ತುಳುಕುವಂತೆ ಬಿಸಿನೀರು ತುಂಬಬಾರದು. ಮುಚ್ಚಳವನ್ನು ಹಾಕಿದ ಮೇಲೂ ಚೂರು ಜಾಗ ಉಳಿಯವಂತೆ, ನೀರನ್ನು ತುಂಬಬೇಕು. ಕುತ್ತಿಗೆ ಮಟ್ಟಕ್ಕೆ ನೀರು ತುಂಬುವುದರಿಂದ, ಫ್ಲಾಸ್ಕ್‌ನ ಏರ್ ಟೈಟ್ ಗುಣಕ್ಕೆ ಹಾನಿಯಾಗುತ್ತದೆ. ಡ್ರೈ ಐಸ್ ಅಥವಾ ಕಾಬೊನೇಟೆಡ್ (ಗ್ಯಾಸ್ ತುಂಬಿದ) ಪೇಯವನ್ನು ಫ್ಲಾಸ್ಕ್ ಒಳಗೆ ಹಾಕುವುದು ಅಪಾಯಕಾರಿ. ಏಕೆಂದರೆ, ಅವು ಗ್ಯಾಸನ್ನು ಉತ್ಪತ್ತಿ ಮಾಡುತ್ತವೆ.
ಹೀಗಾಗಿ, ಮುಚ್ಚಳ ಹಾಕಿದಮೇಲೆ ಫ್ಲಾಸ್ಕ್ ಒಳಗೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಶುಚಿಗೊಳಿಸುವಾಗ, ಫ್ಲಾಸ್ಕನ್ನು ನೀರಿನಲ್ಲಿ ದೀರ್ಘ ಕಾಲ ಮುಳುಗಿಸಿಡುವು ದು ಸರಿಯಲ್ಲ. ಬ್ಲೀಚ್, ವಯರ್ ಬ್ರಶ್, ಡಿಟರ್ಜೆಂಟ್‌ಗಳನ್ನು ಬಳಸುವುದರಿಂದ, ಫ್ಲಾಸ್ಕ್‌ನ ಹೊರ ಮೈಯಲ್ಲಿ ಗೀರುಗಳು ಉಂಟಾಗಬಹುದು. ಶುಚಿಗೊಳಿಸಿದನಂತರ, ಅದರಲ್ಲಿನ ಸೀಲ್ ರಿಂಗ್ ಅದರ ಸ್ಥಾನದಲ್ಲೇ ಇರುವುದನ್ನು ಖಚಿತಪಡಿಸಿ ಕೊಳ್ಳಬೇಕು.ಸಾಮಾನ್ಯವಾಗಿ, ತೊಳೆಯುವ ಭರದಲ್ಲಿ ಸೀಲ್ ರಿಂಗನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಅದಿಲ್ಲದೆ ಹೋದರೆ, ಫ್ಲಾಸ್ಕ್ ಬಿಸಿಯನ್ನು ಕಾಪಾಡಿ ಕೊಳ್ಳದು.ಫ್ಲಾಸ್ಕನ್ನು ರೆಫ್ರೀಜರೇಟರ್ ಒಳಗಡೆ ಇಡಬಾರದು. ಹಾಗೆ ಮಾಡುವುದರಿಂ ದಲೂ ಫ್ಲಾಸ್ಕ್‌ನ ಇನ್ಸುಲೇಷನ್ ಪದರ ಹಾಳಾಗುವುದು. ಒಳಗೆ ಹಾಕಿಟ್ಟ ಬಿಸಿ ದ್ರವ, ತುಂಬಾ ಸಮಯದ ನಂತರ ತಾಪಮಾನ ಕಳೆದು ಕೊಳ್ಳುತ್ತದೆ. ಆಗ ಒತ್ತಡದಲ್ಲಿನ ವ್ಯತ್ಯಾಸದಿಂದಾಗಿ, ಸುಲಭ ವಾಗಿ ಮುಚ್ಚಳ ತೆರೆಯಲು ಬರುವು ದಿಲ್ಲ. ಸ್ವಲ್ಪ ಸ್ವಲ್ಪ ವಾಗಿಯೇ ಬಲಪ್ರಯೋಗಿಸುತ್ತಾ ನಿಧಾನವಾಗಿ ಮುಚ್ಚಳ ತೆರೆಯಬೇಕು.