Advertisement
ಮತದಾನ ಕುರಿತು ಬೀದಿ ನಾಟಕ, ಧ್ಯೇಯ ಗೀತೆ, ಭಿತ್ತಿಪತ್ರದಂತಹ ಸಾಂಪ್ರದಾಯಿಕ ಪ್ರಚಾರ ವಿಧಾನಗಳೊಂದಿಗೆ ಪಾಶ್ಚಿಮಾತ್ಯ ಶೈಲಿಯ ಪ್ರಚಾರದ ಚಟುವಟಿಕೆಗಳನ್ನು ಪಾಲಿಕೆ ನಡೆಸಲಿದ್ದು, ಏ.6 ಮತ್ತು 7ರಂದು ಸಂಜೆ 4ರಿಂದ 7 ಗಂಟೆವರೆಗೆ, ಬಿಎಂಎಸ್ ತಾಂತ್ರಿಕ ವಿದ್ಯಾಲಯದ ಸಹಯೋಗದಲ್ಲಿ ಫ್ಲಾಷ್ ಮಾಬ್ ಹಮ್ಮಿಕೊಳ್ಳಲಾಗಿದೆ.
Related Articles
Advertisement
ಫ್ಲಾಷ್ ಮಾಬ್‌ನಲ್ಲಿ ಏನಿರುತ್ತೆ?: ಇಲ್ಲಿ, ಪ್ರಚಾರ ಗೀತೆ ಹಾಗೂ 2 ದೇಶ ಭಕ್ತಿ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಜತೆಗೆ, ರಾಜ್ಯದ ಚುನಾವಣಾ ಗೀತೆ ಎಂದೇ ಬಿಂಬಿತವಾಗಿರುವ “ಮಾಡಿ ಮಾಡಿ ಮತದಾನ’ ಗೀತೆಗೂ ಹೆಜ್ಜೆ ಹಾಕಲಿದ್ದಾರೆ. ಏ.15ರೊಳಗಾಗಿ ನಗರದಲ್ಲಿರುವ ವಿವಿಧ ಮಾಲ್‌ಗಳಲ್ಲಿ ಫ್ಲಾಷ್ ಮಾಬ್ ನಡೆಸಲು ಪಾಲಿಕೆ ಚಿಂತನೆ ನಡೆಸಿದೆ.
ಫ್ಲಾಷ್ ಮಾಬ್ ಎಂದರೇನು?: ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಜನರು ತಮ್ಮ ಪಾಡಿಗೆ ತಾವು ಚಟುವಟಿಕೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಂಗೀತವೊಂದಕ್ಕೆ ಒಬ್ಬ ವ್ಯಕ್ತಿ ನೃತ್ಯ ಮಾಡಲು ಆರಂಭಿಸುತ್ತಾನೆ. ಸ್ವಲ್ಪ ಸಮಯದ ನಂತರ ಮತ್ತೂಬ್ಬ ವ್ಯಕ್ತಿ ನೃತ್ಯ ಮಾಡಲು ಆರಂಭಿಸುತ್ತಾನೆ. ಹೀಗೆ ಒಬ್ಬೊಬ್ಬರಾಗಿ ನೃತ್ಯ ಮಾಡಲು ಆರಂಭಿಸಿ ಒಂದು ತಂಡವಾಗಿ ಬದಲಾಗುವುದೇ ಫ್ಲಾಷ್ ಮಾಬ್.