Advertisement
ತೊಡುವುದು ಹೇಗೆ?ಪ್ಯಾಂಟ್ ಸೂಟ್ ತೊಡುವವರು ಈ ಫ್ಲೇರ್ಡ್ ಪ್ಯಾಂಟ… ಸ್ಟೆçಲ್ ಅನ್ನು ಅನುಸರಿಸಬಹುದು. ಅಂದರೆ ಒಳ್ಳೆ ಫಿಟ್ಟಿಂಗ್ ಇರುವ ಕೋಟು (ಸ್ಟ್ರಕ್ಚರ್ಡ್ ಬ್ಲೇಝರ್) ಜೊತೆ ಈ ಪ್ಯಾಂಟ್ ಧರಿಸುವುದು. ಈ ಕೋಟಿನ ಕೆಳಗೆ ಶರ್ಟ್ (ಅಂಗಿ) ತೊಡಬೇಕಿಲ್ಲ. ಕೋಟು, ಪ್ಯಾಂಟು ಎಲ್ಲ ಸಾಲಿಡ್ ಕಲರ್ಡ್ ಅಂದರೆ ಒಂದೇ ಬಣ್ಣದ್ದಾಗಿರುತ್ತದೆ. ಪ್ಯಾಂಟ್ ಸೂಟ್ ಜೊತೆ ಫ್ಲೇರ್ಡ್ ಪ್ಯಾಂಟ್ ತೊಡುವ ಈ ಶೈಲಿಯನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಟ್ರೆಂಡ್ ಆಗುವಂತೆ ಮಾಡಿದ್ದರು.
ಕಿತ್ತಳೆ ಬಣ್ಣದ ಸಡಿಲವಾದ ಕೋಟು, ಫ್ಲೇರ್ಡ್ ಪ್ಯಾಂಟು ಮತ್ತು ಕುತ್ತಿಗೆ ಸಂಪೂರ್ಣವಾಗಿ ಮುಚ್ಚುವ ಅಂಗಿಯನ್ನು ಬಾಲಿವುಡ್ ನಟಿ ಸೋನಂ ಕಪೂರ್ ತೊಟ್ಟಿದ್ದೇ ತಡ, ಅಭಿಮಾನಿಗಳೂ ಇದೇ ತರಹದ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲೆಲ್ಲ ತಮ್ಮ ಸೆಲ್ಫಿ ಗಳನ್ನು ಶೇರ್ ಮಾಡುತ್ತಿದ್ದಾರೆ.
Related Articles
Advertisement
ಇವರೆಲ್ಲಾ ಸುದ್ದಿ ಮಾಡುತ್ತಿರುವಾಗ ನಟಿ ಪ್ರಿಯಾಂಕಾ ಚೋಪ್ರಾ ಹಿಂದೆ ಉಳಿಯಲು ಸಾಧ್ಯವೇ! ತಿಳಿ ಹಸಿರು ಬಣ್ಣದ ಬಿಗಿಯಾದ ಅಂಗಿ. ಸಡಿಲವಾದ ಕೋಲ್ಡ… ಶೋಲ್ಡರ್ ತೋಳುಗಳು. ಇದರ ಜೊತೆ ಅದೇ ಬಣ್ಣದ ಫ್ಲೇರ್ಡ್ ಪ್ಯಾಂಟ್ ತೊಟ್ಟು ಪ್ರಿಯಾಂಕಾ ಚೋಪ್ರಾ, ತಾನು ಸ್ಟೈಲ್ ಐಕಾನ್ ಎಂಬುದನ್ನು ದೃಢಪಡಿಸಿ¨ªಾರೆ. ನಿಯಾನ್ (ಕಣ್ಣಿಗೆ ಕುಕ್ಕುವಂಥ ಬಣ್ಣ) ಗುಲಾಬಿ ಬಣ್ಣದ ಅಂಗಿ ಜೊತೆ ಅದೇ ಬಣ್ಣದ ಹೈಹೀಲ್ಸ… ಮತ್ತು ತುದಿಯಲ್ಲಿ ಸ್ವಲ್ಪ ಕಟ್ ಇರುವ ಅದೇ ಬಣ್ಣದ ಫ್ಲೇರ್ಡ್ ಪ್ಯಾಂಟ್ ತೊಟ್ಟು ಕಾಣಿಸಿಕೊಂಡಿದ್ದರು.
ಸಾರಾ ಜಮಾನಬಾಲಿವುಡ್ ನಟ ಸೈಫ್ ಅಲಿ ಖಾನ್‌ನ ಮೊದಲ ಮಗಳು ಸಾರಾ ಅಲಿ ಖಾನ್ ಕೂಡ ಈ ಟ್ರೆಂಡ್‌ಗೆ ತನ್ನ ಕೊಡುಗೆ ನೀಡಿದ್ದಾಳೆ. ಕಸರತ್ತು ಮಾಡಿ, ವಾಶ್ ಬೋರ್ಡ್ ಆಬ್ಸ… ಹೊಂದಿರುವ ಕಾರಣ ಅವುಗಳನ್ನು ತೋರಿಸಲು ಕಪ್ಪು ಬಣ್ಣದ ಉದ್ದ ತೋಳಿನ ಬಿಗಿಯಾಗಿ ಕ್ರಾಪ್ ಟಾಪ್ (ಹೊಟ್ಟೆ ಕಾಣುವಂಥ ಅಂಗಿ) ಜೊತೆ ಪಳ-ಪಳ ಹೊಳೆಯುವ ಅನಿಮಲ್ ಪ್ರಿಂಟ್ ಇರುವ ಗುಲಾಬಿ ಹಾಗು ಗೋಲ್ಡ… (ಸ್ವರ್ಣ) ಬಣ್ಣದ ಫ್ಲೇರ್ಡ್ ಪ್ಯಾಂಟ್ ತೊಟ್ಟಿರುವುದು ಫ್ಯಾಷನ್ ಲೋಕದಲ್ಲಿ ಸುದ್ದಿಯಾಗುತ್ತಿದೆ. ಅದಿತಿಮಾನಸ ಟಿ. ಎಸ್.