Advertisement

ಶಾಲೆಗೆ ರಜೆ-ಮನೆಯಲ್ಲೇ ಮಕ್ಕಳಿಂದ ಧ್ವಜಾರೋಹಣ!

03:03 PM Jan 27, 2021 | Team Udayavani |

ಬೆಳಗಾವಿ: ಕೋವಿಡ್ ಹಾವಳಿಯಿಂದಾಗಿ ಶಾಲೆಗಳಿಗೆ ರಜೆ ಇದ್ದಿದ್ದರಿಂದ ಪುಟ್ಟ ಪುಟ್ಟ ಮಕ್ಕಳು ತಮ್ಮ ಮನೆ ಮುಂದೆಯೇ ಗಣರಾಜ್ಯೋತ್ಸವದಂದು ತಿರಂಗಾ ಧ್ವಜಾರೋಹಣ ನೆರವೇರಿಸುವ ಮೂಲಕ ದೇಶ ಪ್ರೇಮ ಮೆರೆದರು.

Advertisement

ಅಥಣಿ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಪುಟ್ಟ ಮಕ್ಕಳು ಸೇರಿ ಮಂಗಳವಾರ ಜನೇವರಿ 26 ಗಣರಾಜ್ಯೋತ್ಸವದಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮಕ್ಕಳು ತಮ್ಮ ಮನೆ ಎದುರಿನ ಶೆಡ್‌ ನಲ್ಲಿ ತಿರಂಗಾ ಧ್ವಜ ಹಾರಿಸಿ, ರಾಷ್ಟ್ರಗೀತೆ ಹೇಳಿ, ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ:ಡಾ| ಬಿ.ಆರ್‌. ಅಂಬೇಡ್ಕರ್ ಪುತ್ಥಳಿ ಅನಾವರಣ

ಚಿಕ್ಕ ಮಕ್ಕಳಾದ ಅಥರ್ವ, ಭೂಮಿಕಾ, ರಿಜ್ವಾನ್‌, ಆರೋಹಿ, ಸಮರ್ಥ, ಸಾನವಿ, ಶ್ರೇಷ್ಠಾ, ಪ್ರೀತಮ್‌, ಮಧುರಾ ಸೇರಿದಂತೆ ಅನೇಕ ಮಕ್ಕಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next