Advertisement

ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆ ಸರಿಪಡಿಸಿ

01:14 PM Jan 16, 2021 | Team Udayavani |

ಆಲೂರು: ತಾಲೂಕಿನಲ್ಲಿ ಹಾದುಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಕ್ಕಪಕ್ಕದ ಜಮೀನು, ನಿವೇಶನಕ್ಕೆ ಈಗ ಬಂಗಾರದ ಬೆಲೆ ಬಂದಿದೆ. ಆದರೆ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಾತ್ರ ತೀವ್ರವಾಗಿ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಇತ್ತೀಚೆಗೆ ಹೆದ್ದಾರಿಯಲ್ಲಿನ ತಿರುವುಗಳನ್ನು ನೇರವಾಗಿ ಮಾಡಲಾಗುತ್ತದೆ.

Advertisement

ಅಲ್ಲದೆ, ದ್ವಿಪಥವಾಗಿದ್ದ ಹೆದ್ದಾರಿಯನ್ನು ಚತುಷ್ಪಥ ಮಾಡುತ್ತಿರುವ ಕಾರಣ, ಕೆಲವು ಗ್ರಾಮಗಳು ಹೆದ್ದಾರಿಗೆ ಹತ್ತಿರವಾಗಿದೆ. ಹೀಗಾಗಿ ಆ ಗ್ರಾಮದಲ್ಲಿನ ಜಮೀನಿಗೆ, ಸೈಟುಗಳಿಗೆ ಭಾರೀ ಮೌಲ್ಯ ಬಂದಿದೆ. ಬಾಚನಹಳ್ಳಿ, ಸಿಂಗಾಪುರ, ನೇರಲಕೆರೆ, ಚೌಲಗೆರೆ, ಭರತವಳ್ಳಿ, ಕಂದಲಿ, ಮಾವನೂರು, ಭೈರಾಪುರ, ತಿಮ್ಮನಹಳ್ಳಿ, ಸೇರಿದಂತೆ ಹಲವು ಗ್ರಾಮಗಳ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಈ ಮೊದಲು ಒಂದು ಎಕರೆ ಭೂಮಿಗೆ 20-25 ಲಕ್ಷ ರೂ. ಬೆಲೆ ಇತ್ತು.

ಈಗ ಒಂದು ಎಕರೆ ಭೂಮಿ ಬೆಲೆ 6 ಕೋಟಿ ರೂ.ಗೂ ಹೆಚ್ಚಿದೆ. ಈ ಹಿಂದೆ ಕೇವಲ ಸಾವಿರ ರೂ.ಗೂ ಯೋಚನೆ ಮಾಡುತ್ತಿದ್ದವರು ಈಗ ಕೋಟ್ಯಧಿಪತಿಗಳಾಗಿದ್ದಾರೆ. ಅಲ್ಲದೆ, ರೂಪಾಯಿ ಲೆಕ್ಕದಲ್ಲಿ ಮಾತನಾಡುತ್ತಿದ್ದವರು, ಕೋಟಿ ಲೆಕ್ಕದಲ್ಲಿ ಮಾತನಾಡುತ್ತಿದ್ದಾರೆ. ಈ ಹೆದ್ದಾರಿ ಪಕ್ಕದ ಗ್ರಾಮಗಳ ಜನರ ಜೀವನವೇ ಬದಲಾಗಿದೆ. ನಗರೀಕರಣದ ವಾತಾವರಣ ಬೀರಿದೆ. ರಸ್ತೆಗೆಂದು ಜಮೀನು ಕಳೆದು ಕೊಂಡವರಿಗೂ ಉತ್ತಮ ಪರಿಹಾರ ಸಿಕ್ಕಿರು ವುದರಿಂದ ಇವರೆಲ್ಲರ ಬದುಕು ಬಂಗಾರವಾಗಿದೆ.

ಇದನ್ನೂ ಓದಿ:2ನೇ ಡೋಸ್ ಪಡೆಯಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ಲಕ್ಷ್ಯ ಬೇಡ: ಪ್ರಧಾನಿ

ಮೂಲ ಸೌಲಭ್ಯ ಇಲ್ಲ: ಹೆದ್ದಾರಿಸಮೀಪವಿರುವ ಹಲವು ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವುದು ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದ ಜವಾಬ್ದಾರಿಯಾಗಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಗೆ ಸೇರಿರುವ ಗ್ರಾಮಗಳ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ.

Advertisement

ಹೆದ್ದಾರಿಗೆ ಹೊಂದಿಕೊಂಡ ಭರತವಳ್ಳಿ ಗ್ರಾಮದಲ್ಲಿ 100-120 ಕುಟುಂಬಗಳಿದ್ದು, ಸಾವಿರದಷ್ಟು ಜನಸಂಖ್ಯೆ ಇದೆ. ಗ್ರಾಮಕ್ಕೆ ಅಗತ್ಯವಿರುವ ಕೆಲ ಸೌಲಭ್ಯಗಳಿಂದ ವಂಚಿತವಾಗಿದೆ. ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲಿಂಕ್‌ ರಸ್ತೆಯನ್ನು ಜಲ್ಲಿಯಿಂದ ನಿರ್ಮಾಣ ಮಾಡಿರುವುದರಿಂದ ತಿರುಗಾಡಲು ತೊಂದರೆಯಾಗಿದೆ. ರಸ್ತೆಗೆ ತಕ್ಕಂತೆ ಮೋರಿ ನಿರ್ಮಾಣವಾಗಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಗತ್ಯ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಪುಟ್ಟೇಗೌಡ, ರಮೇಶ್‌ ರವರು.

ಟಿ.ಕೆ.ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next