Advertisement

Five states ಚುನಾವಣೆ: ಪ್ರಮುಖರಿಗೆ ಅಳಿವು ಉಳಿವಿನ ಪ್ರಶ್ನೆ

12:35 AM Nov 07, 2023 | Team Udayavani |

ಛತ್ತೀಸ್‌ಗಢ ವಿಧಾನಸಭೆಯ 20, ಮಿಜೋರಾಂನ 40 ಕ್ಷೇತ್ರಗಳಲ್ಲಿ ಮತದಾನ ಮಂಗಳವಾರ ನಡೆಯಲಿದೆ. ಈ ಮೂಲಕ ಪಂಚರಾಜ್ಯ ಚುನಾವಣೆ ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಅದರ ಫ‌ಲಿತಾಂಶದಲ್ಲಿ ಪ್ರಮುಖ ನಾಯಕರ ಭವಿಷ್ಯವೂ ನಿರ್ಧಾರವಾಗಲಿದೆ.

Advertisement

ಅಶೋಕ್‌ ಗೆಹ್ಲೋಟ್‌
3 ಬಾರಿ ರಾಜಸ್ಥಾನ ಸಿಎಂ ಗಾದಿ ಅಲಂಕರಿಸಿರುವ ಗೆಹೊÉàಟ್‌ಗೆ ಈ ಚುನಾವಣೆ ಸವಾಲಿನದ್ದಾಗಿದೆ. ಸಚಿನ್‌ ಪೈಲಟ್‌ ಜತೆಗೆ ಇರುವ ಮುನಿಸು, ಭ್ರಷ್ಟಾಚಾರದ ಆರೋಪ ಕಠಿನ ದಾರಿಯನ್ನು ಸೃಷ್ಟಿಸಿದೆ. ರಾಜಸ್ಥಾನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಂಡರೆ, ದಾಖಲೆ ಆಗಲಿದೆ.

ವಸುಂಧರಾ ರಾಜೇ
ಎರಡು ಬಾರಿ ರಾಜಸ್ಥಾನದ ಸಿಎಂ ಆಗಿರುವ ರಾಜೇ, ಬಿಜೆಪಿ ಗೆದ್ದರೆ ಮೂರನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರುತ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ನಿವೃತ್ತಿಗೆ ಮನಸ್ಸಾಗುತ್ತಿದೆ ಎಂದಿದ್ದರು. 70 ವರ್ಷದ ನಾಯಕಿಗೆ ಇದು ಕೊನೆಯ ಅವಕಾಶ ಎನ್ನಲಾಗುತ್ತಿದೆ.

ಸಚಿನ್‌ ಪೈಲಟ್‌
ಪ್ರಸಕ್ತ ಸರಕಾರದ ಆರಂಭದಲ್ಲಿ ಡಿಸಿಎಂ ಆಗಿದ್ದವರು. 2018ರಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದಿದ್ದವರೇ ಅವರು. ಸಿಎಂ ಹುದ್ದೆ ವಿಚಾರಕ್ಕೆ ಬಂಡಾಯ ಎದ್ದರೂ ಅನಂತರ ತಣ್ಣಗಾದರು. ಇದರ ಹೊರತಾಗಿಯೂ ಕೂಡ ಅವರಿಗೆ ಈ ಬಾರಿ ಕಠಿನ ಸ್ಪರ್ಧೆ ಇದೆ.

ಶಿವರಾಜ್‌ ಸಿಂಗ್‌ ಚೌಹಾಣ್‌
ಪ್ರಸಕ್ತ ಸಾಲಿನ ಚುನಾವಣೆ ಇವರ ಪಾಲಿಗೆ ಮಾಡು ಇಲ್ಲವೇ ಮಡಿ ಆಗುತ್ತದೆ ಎಂಬ ಮಾತು ಗಳಿವೆ. ಬಿಜೆಪಿ ವತಿ ಯಿಂದ ಸಾಮೂಹಿಕ ನಾಯಕತ್ವದ ಹೆಸರಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುತ್ತಿದೆ. ಉತ್ತಮ ಆಡಳಿತ ನೀಡಿದ್ದರೂ, ಚೌಹಾಣ್‌ ವಿರುದ್ಧ ಆಡಳಿತ ವಿರೋಧಿ ಅಲೆ ಕಾಣುತ್ತಿದೆ.

Advertisement

ಕಮಲ್‌ನಾಥ್‌
ಮಧ್ಯಪ್ರದೇಶದಲ್ಲಿ 15 ವರ್ಷಗಳ ಬಳಿಕ 2018ರಲ್ಲಿ ಕಾಂಗ್ರೆಸ್‌ ನೇತೃತ್ವದ ಅಲ್ಪಮತದ ಸರಕಾರದ ನೇತೃತ್ವ ವಹಿಸಿಕೊಂಡಿದ್ದರು ಬಳಿಕ ಕಳೆದುಕೊಂಡಿ ದ್ದರು. ಈ ಬಾರಿ ಪಕ್ಷ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಈ ಬಾರಿ ಸೋತರೆ ಕಮಲ್‌ನಾಥ್‌ ತೆರೆಯ ಮರೆಗೆ ಸರಿಯುವ ಸಾಧ್ಯತೆಗಳಿವೆ.

ಜ್ಯೋತಿರಾದಿತ್ಯ ಸಿಂಧಿಯಾ
ಮಧ್ಯಪ್ರದೇಶ ಸಿಎಂ ಹುದ್ದೆ ವಿಚಾರಕ್ಕಾಗಿ ಕುಪಿತರಾಗಿ 2020ರಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ ವತಿಯಿಂದ ಸಿಎಂ ಯಾರು ಎಂದು ಘೋಷಣೆಯಾಗದೇ ಇರುವ ಹಿನ್ನೆಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮುಂದಿನ ಸಿಎಂ ಎಂದು ಹೇಳಲಾಗುತ್ತಿದೆ.

ಭೂಪೇಶ್‌ ಬಘೇಲ್‌
2018ರಲ್ಲಿ ಛತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತಿದ್ದಂತೆಯೇ ಭೂಪೇಶ್‌ ಬಘೇಲ್‌ ಸಿಎಂ ಆದರು. 508 ಕೋಟಿ ರೂ. ಲಂಚ ಆರೋಪದ ನಡುವೆಯೇ ಅವರು ಚುನಾವಣೆ ಎದುರಿಸುತ್ತಿದ್ದಾರೆ.
ಕಾಂಗ್ರೆಸ್‌ ಗೆದ್ದರೆ ಛತ್ತೀಸ್‌ಗಢದ ಮಟ್ಟಿಗೆ ದಾಖಲೆಯಾಗಲಿದೆ.

ಡಾ| ರಮಣ್‌ ಸಿಂಗ್‌
15 ವರ್ಷಗಳ ಕಾಲ ಛತ್ತೀಸ್‌ಗಢದ ಸಿಎಂ ಆಗಿ ದಾಖಲೆ ಸ್ಥಾಪಿಸಿದವರು. ಹಾಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅವರೇ ಸಿಎಂ ಆಗಲಿದ್ದಾರೋ ಯುವ ನಾಯಕರಿಗೆ ಅವಕಾಶವೋ ಇನ್ನೂ ಸ್ಪಷ್ಟವಾಗಿಲ್ಲ. 71 ವರ್ಷ ವಯಸ್ಸಿನ ಅವರಿಗೇ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.

ಕೆ.ಚಂದ್ರಶೇಖರ ರಾವ್‌
ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಹಂಬಲದಲ್ಲಿ ಇದ್ದಾರೆ. 2014ರ ಜೂ.2ರಂದು ಅಧಿಕಾರಕ್ಕೆ ಬಂದ ಅನಂತರ ಹಿಂದಿರುಗಿ ನೋಡಿದ್ದಿಲ್ಲ. ವಿಪಕ್ಷಗಳಾಗಿರುವ ಕಾಂಗ್ರೆಸ್‌, ಬಿಜೆಪಿಯಲ್ಲಿ ಅವರಿಗೆ ಸವಾಲು ಹಾಕುವ ನಾಯಕರು ಇಲ್ಲದೇ ಇರುವುದು ಅವರಿಗೆ ಧನಾತ್ಮಕವಾಗಿದೆ.

ಕೆ.ಟಿ.ರಾಮ ರಾವ್‌
ತಂದೆ ಕೆ.ಚಂದ್ರಶೇಖರ ರಾವ್‌ ವರ್ಚಸ್ಸಿನಿಂದ ಪುತ್ರ ಬೆಳೆದಿರುವುದು ಹೌದಾದರೂ, ತೆಲುಗು, ಇಂಗ್ಲಿಷ್‌ ಮೇಲಿನ ಭಾಷಾ ಪ್ರಭುತ್ವದಿಂದ ವರ್ಚಸ್ವೀ ನಾಯಕರಾದದ್ದು ಸುಳ್ಳಲ್ಲ. ಹಾಗೆಂದು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸುಲಭವಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next