ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ರೂಪಾಂತರಿ ಸೋಂಕು ಭೀತಿ ಹೆಚ್ಚಿದೆ. ಎರಡು ದಿನದ ಹಿಂದಷ್ಟೇ ಮಂಗಳೂರಿನಲ್ಲಿ ಆರು ಪ್ರಕರಣಗಳು ಪತ್ತೆಯಾಗಿತ್ತು, ಇದೀಗ ಮತ್ತೆ ಐದು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪತ್ರೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಡಿ.19ರಂದು ಈ ಹೊಸ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡದಲ್ಲಿ 54 ವರ್ಷದ ಪುರುಷ, ಭದ್ರಾವತಿಯಲ್ಲಿ 20 ವರ್ಷದ ಯುವತಿ, ಉಡುಪಿಯಲ್ಲಿ 82 ವರ್ಷದ ಪುರುಷ ಮತ್ತು 72 ವರ್ಷದ ಮಹಿಳೆ ಹಾಗೂ ಮಂಗಳೂರಿನಲ್ಲಿ 19 ವರ್ಷದ ಯುವತಿಗೆ ಓಮಿಕ್ರಾನ್ ತಗುಲಿದೆ ಎಂಬ ಮಾಹಿತಿಯನ್ನು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್: ಜಿಲ್ಲೆಯಲ್ಲಿ ಗರಿಷ್ಠ ಎಚ್ಚರಿಕೆ ಕ್ರಮ; ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.
Related Articles
ರಾಜ್ಯದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಇದೀಗ 19ಕ್ಕೆ ಏರಿಕೆಯಾಗಿದೆ. ದೇಶದ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳು ರಾಜ್ಯದಲ್ಲೇ ಪತ್ತೆಯಾಗಿತ್ತು.