Advertisement

ನಾಗ್ಪುರ: ಹರಿತ ಆಯುಧದಿಂದ ಒಂದೇ ಕುಟುಂಬದ ಐವರ ಹತ್ಯೆ

04:25 PM Jun 11, 2018 | Team Udayavani |

ನಾಗ್ಪುರ : ಇಲ್ಲಿನ ಆರಾಧನಾ ನಗರದಲ್ಲಿ ಒಂದೇ ಕುಟುಂಬದ ಐವರನ್ನು ಇಂದು ನಸುಕಿನ ವೇಳೆ ಹರಿತವಾದ ಆಯುಧದಿಂದ ಇರಿದು ಕೊಂದ ಘಟನೆ ವರದಿಯಾಗಿದೆ.

Advertisement

ಕೊಲೇಗೀಡಾದವರೆಂದರೆ ಕಮಲಾಕರ್‌ ಪೋಹಣ್‌ಕರ್‌, ಅವರ ಪತ್ನಿ, ತಾಯಿ, ಪುತ್ರಿ ಮತ್ತು ಸೋದರ ಸಂಬಂಧಿ. ಪೋಹಣ್‌ಕರ್‌ ಅವರ ಕಿರಿಯ ಪುತ್ರಿ ಮತ್ತು ಇನ್ನೋರ್ವ ಸೋದರ ಸಂಬಂಧಿ ಪಕ್ಕದ ಕೋಣೆಯಲ್ಲಿ ಮಲಗಿಕೊಂಡಿದ್ದರಿಂದ ಅವರು ಹತ್ಯೆಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೋಹಣ್‌ಕರ್‌ ಅವರಿಗೆ ಆರಾಧನಾ ನಗರದ ಹೊರ ವಲಯದಲ್ಲಿ ಇಲೆಕ್ಟ್ರಿಕ್‌ ಶಾಪ್‌ ಇದೆ. ಮನೆಯವರೆಲ್ಲ ನಿದ್ರಿಸಿಕೊಂಡಿದ್ದಾಗ ಇಂದು ನಸುಕಿನ 1 ಗಂಟೆಯ ವೇಳೆಗೆ ಈ ಹತ್ಯಾ ಘಟನೆ ನಡೆದಿದೆ ಎಂದು ಪೊಲೀಸ್‌ ಉಪಾಯುಕ್ತ ನೀಲೇಶ್‌ ಭರಣೆ ತಿಳಿಸಿದ್ದಾರೆ. 

ಪೋಹಣ್‌ಕರ್‌ ಅವರ ಯಾರೋ ನಿಕಟ ಸಂಬಂಧಿಯೇ ಈ ಸಾಮೂಹಿಕ ಕೊಲೆ ಕೃತ್ಯ ನಡೆಸಿರಬೇಕೆಂದು ಅವರು ಶಂಕಿಸಿದ್ದಾರೆ. 

ಪೊಲೀಸರರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next