Advertisement

ನಾಶಿಕ್‌: ಮಳೆ ಸಂಬಂಧಿ ದುರ್ಘ‌ಟನೆಗಳಿಗೆ ಐವರು ಬಲಿ

11:40 AM Jun 04, 2018 | udayavani editorial |

ನಾಶಿಕ್‌, ಮಹಾರಾಷ್ಟ್ರ : ನಾಶಿಕ್‌ ವಿಭಾಗದಲ್ಲಿ ಕಳೆದ ವಾರಾಂತ್ಯ ಮಳೆ ಸಂಬಂಧದ ಎರಡು ಪ್ರತ್ಯೇಕ ದುರ್ಘ‌ಟನೆಗಳಲ್ಲಿ ಒಟ್ಟು ಐವರು ಮೃತಪಟ್ಟ ಘಟನೆ ವರದಿಯಾಗಿದೆ. 

Advertisement

ಧುಳೆ, ಜಳಗಾಂವ್‌, ನಂದೂರ್‌ಬಾರ್‌, ಅಹ್ಮದ್‌ನಗರ್‌ ಮತ್ತು ನಾಶಿಕ್‌ ಸೇರಿದಂತೆ 5 ಜಿಲ್ಲೆಗಳನ್ನು ಒಳಗೊಂಡ ನಾಶಿಕ್‌ ವಿಭಾಗದಲ್ಲಿ ಗುಡುಗು, ಸಿಡಿಲು, ಜಡಿಮಳೆ ಉಂಟಾಗಿತ್ತು. ಧುಳೆ ಜಿಲ್ಲೆಯ ವಾರಖೇಡಿ ಗ್ರಾಮದಲ್ಲಿ ಮರ ಉರುಳಿ ಬಿದ್ದ ದುರ್ಘ‌ಟನೆಯಲ್ಲಿ 32 ವರ್ಷದ ಮಹಿಳೆ ಮತ್ತು ಆಕೆಯ ಮೂವರು ಅಪ್ರಾಪ್ತ ವಯಸ್ಸಿನ ಪುತ್ರಿಯರು ಮೃತಪಟ್ಟರು. 

ನಾಶಿಕ್‌ ಜಿಲ್ಲೆಯ ಇಗತಪುರಿಯ ಅಂಬೇವಾಡಿ ಎಂಬಲ್ಲಿ ಸಿಡಿಲಿನ ಆಘಾತಕ್ಕೆ 27 ವರ್ಷ ಪ್ರಾಯದ ತರುಣನೋರ್ವ ಮೃತಪಟ್ಟ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next