ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಬಗ್ಗೆ ಬೆಂಗಳೂರು ವಾಸಿಗಳು ಹೆಚ್ಚಿನ ಒಲವು ತೋರುತ್ತಿದ್ದಾರೆ. ಬಹುಸಂಖ್ಯೆಯಲ್ಲಿ ಜನರು ಜಿಮ್ ಮತ್ತು ಫಿಟ್‌ನೆಸ್ ಸ್ಟುಡಿಯೋಗಳಿಗೆ ಸೇರಿಕೊಳ್ಳುವುದು, ಆರೋಗ್ಯಕರ ಆಹಾರ ಪದ್ಧತಿಗೆ ಮಾರು ಹೋಗುತ್ತಿರುವುದು ಅದರ ಪರಿಣಾಮವೇ. ದೇಶದಲ್ಲಿ ಫಿಟ್‌ನೆಸ್ ಕಾಳಜಿ ಹೊಂದಿರುವ ನಗರಗಳಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದೆ. ನಂತರ ಮುಂಬೈ, ಬೆಂಗಳೂರು ಮತ್ತಿತರ ನಗರಗಳಿವೆ. ಈ ಅಂತರವನ್ನು ಕಡಿಮೆ ಮಾಡಿ ಬೆಂಗಳೂರನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಫಿಟ್‌ನೆಸ್ ಮೇಳವೊಂದು ಆಯೋಜನೆಗೊಂಡಿದೆ. 6ರಿಂದ 60 ವಯೋಮಾನದವರು ಯಾರು ಬೇಕಾದರೂ ಈ ಫಿಟ್‌ನೆಸ್ ಮೇಳದಲ್ಲಿ ಪಾಲ್ಗೊಳ್ಳಬಹುದು. 22 ಫಿಟ್‌ನೆಸ್ ತರಬೇತುದಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಮೇಳದಲ್ಲಿ ಕಾರ್ಯಾಗಾರಗಳು, ಉಪನ್ಯಾಸ, ಮಕ್ಕಳ ಫಿಟ್‌ನೆಸ್ ಕುರಿತ ಮಾಹಿತಿ, ಸ್ಪರ್ಧೆಗಳು, ಫಿಟ್ ಫುಡ್ ಮಾರ್ಕೆಟ್ ಇರಲಿದೆ.ಕಾರ್ಯಾಗಾರಗಳುವರ್ಕ್ ಔಟ್, ಕಳರಿಪಯಟ್ಟು, ನಿಂಜಾ ಫಿಟ್, ಯೋಗ ಮತ್ತು ಆಕ್ವಾ ಏರೋಬಿಕ್ಸ್, ಕ್ಯಾಲಿಸ್ತೆನಿಕ್ಸ್, ದಿ ಫ್ಯಾಂಟಮ್ ವರ್ಕ್‌ಔಟ್ ಸೇರಿದಂತೆ 30ಕ್ಕೂ ಹೆಚ್ಚಿನ ಸೆಷನ್‌ಗಳಲ್ಲಿ ಮಕ್ಕಳಿಗೆ ಯೋಗ, ಬ್ರೇಕ್ ಫಾÓr್ ಬೌಲ್ ಮಾಸ್ಟರ್ ಕ್ಲಾಸ್, ಮೈಂಡ್ ಫುಲ್ ಈಟಿಂಗ್, ಆಹಾರ ಮತ್ತು ಪೌಷ್ಟಿಕಾಂಶದ ಕುರಿತ ಕಾರ್ಯಗಾರಗಳು ನಡೆಯಲಿವೆ. ಶ್ವೇತಾ ಸುಬ್ಬಯ್ಯ, ಸಿಂಡಿ, ಡೆಲ್ಸನ್, ಜಯಾ ಮತ್ತು ಆಶಿಮಾ ಮುಂತಾದ ಫಿಟ್‌ನೆಸ್ ತರಬೇತುದಾರರು ಪಾಲ್ಗೊಳ್ಳುತ್ತಿದ್ದಾರೆ.ಎಲ್ಲಿ?: ಯು.ಬಿ.ಸಿಟಿ, ವಿಠಲ್ ಮಲ್ಯ ರಸ್ತೆ ಯಾವಾಗ?: ಫೆ. 9- 10, ಬೆಳಗ್ಗೆ 7- ಸಂಜೆ 5.30