Advertisement

ಫಿಟ್ನೆಸ್‌ ಪರೀಕ್ಷೆ:ರಾಯುಡು ವಿಫ‌ಲ

06:15 AM Jun 17, 2018 | |

ಬೆಂಗಳೂರು: 2 ವರ್ಷಗಳ ನಂತರ ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದ ಅಂಬಾಟಿ ರಾಯುಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. 

Advertisement

ಬೆಂಗಳೂರಿನಲ್ಲಿ ನಡೆದ ಯೋ ಯೋ ಫಿಟ್ನೆಸ್‌ ಪರೀಕ್ಷೆಯಲ್ಲಿ ವಿಫ‌ಲರಾದ ಪರಿಣಾಮ ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಿರುವ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದಾರೆ.

ವಿಶೇಷವೆಂದರೆ ಈ ಪರೀಕ್ಷೆಯಲ್ಲಿ ಮಾಜಿ ನಾಯಕ ಧೋನಿ, ಹಾಲಿ ನಾಯಕ ವಿರಾಟ್‌ ಕೊಹ್ಲಿ, ವೇಗಿ ಭುವನೇಶ್ವರ್‌ ಕುಮಾರ್‌, ಸುರೇಶ್‌ ರೈನಾ ಉತ್ತೀರ್ಣರಾಗಿದ್ದಾರೆ. ರೈನಾ ಈ ಹಿಂದೆ ಫಿಟ್ನೆಸ್‌‌ ಕೊರತೆಯಿಂದ ತಂಡದಲ್ಲಿ ಸ್ಥಾನ ಗಳಿಸದೇ ಪರದಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಂಬಾಟಿ ರಾಯುಡು ಪ್ರಸ್ತುತ ಮುಗಿದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದರು.

ಅಲ್ಲಿ ಅವರು ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು.ಚೆನ್ನೈ ಚಾಂಪಿಯನ್‌ ಕೂಡ ಆಗಿತ್ತು. ಇದೇ ಆಧಾರದಲ್ಲಿ ಇಂಗ್ಲೆಂಡ್‌ಗೆ ಹೊರಟಿರುವ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. ಈಗವರು ಅನಿವಾರ್ಯವಾಗಿ ಹೊರಗುಳಿಯಬೇಕಾಗಿದೆ. ಕೆಲವು ದಿನಗಳ ಹಿಂದೆ ಎ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‌ ಇದೇ ಪರೀಕ್ಷೆಯಲ್ಲಿ ವಿಫ‌ಲರಾಗಿ ಬೇಸರಗೊಂಡಿದ್ದರು. ಅಂಬಾಟಿ ರಾಯುಡು ಭಾರತದ ಪರ 34 ಏಕದಿನ, 6 ಟಿ20 ಪಂದ್ಯವಾಡಿದ್ದಾರೆ. ಅವರು ಕೊನೆಯ ಬಾರಿಗೆ ಅಂದರೆ 2016ರಲ್ಲಿ ಜಿಂಬಾಬ್ವೆಯಲ್ಲಿ ಟಿ20, ಏಕದಿನವಾಡಿದ್ದರು. ಅಲ್ಲಿಂದ ಸ್ಥಾನ ಕಳೆದುಕೊಂಡಿದ್ದವರು ಮತ್ತೆ ಸ್ಥಾನ ಪಡೆಯಲು ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next