Advertisement

ಮೊದಲ ಟೆಸ್ಟ್‌ ಪಂದ್ಯ : ಹೋಲ್ಡರ್‌ ದಾಳಿಗೆ ಕುಸಿದ ಲಂಕಾ

11:34 PM Mar 22, 2021 | Team Udayavani |

ನಾರ್ತ್‌ಸೌಂಡ್‌ (ಆ್ಯಂಟಿಗುವಾ): ಜಾಸನ್‌ ಹೋಲ್ಡರ್‌ ಬೌಲಿಂಗ್‌ ದಾಳಿಗೆ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿದ ಶ್ರೀಲಂಕಾ, ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ 169 ರನ್ನುಗಳಿಗೆ ಪ್ರಥಮ ಇನ್ನಿಂಗ್ಸ್‌ ಮುಗಿಸಿದೆ. ಹೋಲ್ಡರ್‌ ಕೇವಲ 27 ರನ್‌ ನೀಡಿ 5 ವಿಕೆಟ್‌ ಕಿತ್ತರು. ವಿಂಡೀಸ್‌ 2ನೇ ದಿನದ ಭೋಜನ ವಿರಾ ಮದ ವೇಳೆ 2 ವಿಕೆಟ್‌ಗೆ 72 ರನ್‌ ಮಾಡಿದೆ.

Advertisement

ಆರಂಭಕಾರ ಲಹಿರು ತಿರಿಮನ್ನೆ ಹೊರತುಪಡಿಸಿ ಲಂಕೆಯ ಯಾವುದೇ ಆಟಗಾರನಿಗೂ ವಿಂಡೀಸ್‌ ಆಕ್ರಮಣವನ್ನು ತಡೆದು ನಿಲ್ಲಲಾಗಿಲ್ಲ. ತಿರಿಮನ್ನೆ 180 ಎಸೆತ ಎದುರಿಸಿ 70 ರನ್‌ ಮಾಡಿದರು. ಕೀಪರ್‌ ನಿರೋಷನ್‌ ಡಿಕ್ವೆಲ್ಲ 32 ರನ್‌ ಹೊಡೆದರು. ವಿಂಡೀಸ್‌ ಸರದಿಯಲ್ಲಿ ಮಿಂಚಿದ ಮತ್ತೋರ್ವ ಬೌಲರ್‌ ಕೆಮರ್‌ ರೋಚ್‌ (47ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next