Advertisement

ಮೊದಲ ರೋಬೋ ಟೆಲಿಸ್ಕೋಪ್‌

10:14 AM Jul 09, 2018 | Team Udayavani |

ಹೊಸದಿಲ್ಲಿ: ಬೆಂಗಳೂರಿನ ಖಗೋಳವಿಜ್ಞಾನ ಸಂಸ್ಥೆ (ಐಐಎ) ಸಹಭಾಗಿತ್ವದಲ್ಲಿ ಲಡಾಖ್‌ನಲ್ಲಿ ದೇಶದಲ್ಲೇ ಪ್ರಥಮ ರೋಬೋಟಿಕ್‌ ಟೆಲಿಸ್ಕೋಪ್‌ ಅನ್ನು ಸ್ಥಾಪಿಸಲಾಗಿದೆ. ಲಡಾಖ್‌ನ ಹನ್ಲಯಲ್ಲಿ ಸ್ಥಾಪಿಸಲಾಗಿರುವ ಈ ಟೆಲಿಸ್ಕೋಪ್‌ ಗ್ರೋತ್‌ ಎಂಬ ಜಾಗತಿಕ ಟೆಲಿಸ್ಕೋಪ್‌ ನೆಟ್‌ವರ್ಕ್‌ನ ಭಾಗವಾಗಿದೆ. ಅಂದರೆ ಈ ನೆಟ್‌ವರ್ಕ್‌ ಬಳಸಿಕೊಂಡು ಇಡೀ ದಿನ ಆಕಾಶಕಾಯಗಳನ್ನು ವೀಕ್ಷಿಸಬಹುದು.

Advertisement

ಬಾಹ್ಯಾಕಾಶದ ಸ್ಥಿತಿಗೆ ಅನುಗುಣವಾಗಿ ಡೋಮ್‌ ಸ್ವಯಂಚಾಲಿತವಾಗಿ ತೆರೆದು ಕೊಳ್ಳುತ್ತದೆ. ಕ್ಯಾಲಿಬರೇಶನ್‌ ಮಾಡಿ ಅಧ್ಯಯನ ಮಾಡುತ್ತದೆ. ಅಷ್ಟೇ ಅಲ್ಲ ತನ್ನ ವೀಕ್ಷಣೆ ಮುಗಿದ ಅನಂತರ ಡೋಮ್‌ ಮುಚ್ಚಿ ಸುಮ್ಮನಾಗುತ್ತದೆ. ಸಾಮಾನ್ಯವಾಗಿ ವೃತ್ತಿಪರ ಟೆಲಿಸ್ಕೋಪ್‌ಗ್ಳು ಈ ವಿಧಾನದಲ್ಲಿ ಕೆಲಸ ಮಾಡುವುದಿಲ್ಲ. ಎಲ್ಲವನ್ನೂ ಮ್ಯಾನ್ಯುವಲ್‌ ಆಗಿ ನಿರ್ವಹಿಸಬೇಕಿರುತ್ತದೆ.

17 ದೇಶಗಳಲ್ಲಿ ಈ ರೋಬೋಟಿಕ್‌ ಟೆಲಿಸ್ಕೋಪ್‌ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ  ಭಾರತವೂ ಸೇರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next