Advertisement

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

12:33 AM Oct 03, 2023 | Team Udayavani |

ಲಕ್ನೋ: ಭಗವಾನ್‌ ಶ್ರೀರಾಮ ವನವಾಸಕ್ಕೆ ತೆರಳಿದ ಮಾರ್ಗಗಳೆಂದು ಗುರುತಿಸಲಾಗಿರುವ “ರಾಮ್‌ ವನ್‌ ಗಮನ್‌ ಮಾರ್ಗ’ಗಳಲ್ಲಿ ಪ್ರತಿಷ್ಠಾಪಿ ಸಲು ಯೋಜಿಸಿರುವ ರಾಮಸ್ತಂಭಗಳ ಪೈಕಿ ಮೊದಲ ಸ್ತಂಭವು ಸೋಮವಾರ ಉತ್ತರ ಪ್ರದೇಶದ ಅಯೋಧ್ಯೆಯ ಕರಸೇವಕಪುರಕ್ಕೆ ತಲುಪಿದೆ.

Advertisement

40 ವರ್ಷಗಳ ಸುದೀರ್ಘ‌ ಸಂಶೋಧನೆಯ ಬಳಿಕ ಅಯೋಧ್ಯೆ ಯಿಂದ – ರಾಮೇಶ್ವರದ ವರೆಗೆ ರಾಮ ಸಂಚರಿಸಿದ 290 ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಎಲ್ಲ ಪ್ರದೇಶಗಳಲ್ಲೂ ಒಂದೊಂದು ರಾಮಸ್ತಂಭವನ್ನು ಪ್ರತಿಷ್ಠಾಪಿಸಲು ಯೋಜಿಸಲಾಗಿದೆ.

ಇದಕ್ಕಾಗಿ ರಾಜಸ್ಥಾನದ ಗುಲಾಬಿ ಮರಳುಗಲ್ಲಿನಲ್ಲಿ ಈ ಸ್ತಂಭಗಳನ್ನು ಕೆತ್ತನೆ ಮಾಡಿ ತರಲಾಗುತ್ತಿದೆ. ಅಂಥ ಮೊದಲನೇ ಸ್ತಂಭ ಕರಸೇವಕಪುರಕ್ಕೆ ಆಗಮಿಸಿದೆ. ಶೀಘ್ರದಲ್ಲೇ ಅಯೋ ಧ್ಯೆಯ ಮಣಿ ಪರ್ವತದಲ್ಲಿ ಈ ಸ್ತಂಭವನ್ನು ಸ್ಥಾಪಿಸಲಾಗುತ್ತದೆ. ಈ ರೀತಿಯ ಸ್ತಂಭಗಳು ಪ್ರತಿಷ್ಠಾಪಿಸ ಲ್ಪಡುವ ಪ್ರದೇಶಗಳಲ್ಲಿ ಕರ್ನಾಟಕದ ಹಂಪಿಯೂ ಸೇರಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next