Advertisement

ಲೇಕ್‌ ಮೀಡ್‌, ಕೊಲರಡೊ ನದಿ ನೀರು ಮಾಯ!

08:25 PM Aug 18, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ಬಹುಮುಖ್ಯ ಜಲಮೂಲವಾದ ಲೇಕ್‌ ಮೀಡ್‌ನ‌ಲ್ಲಿ ನೀರಿನ ಪ್ರಮಾಣ ಗಣನೀಯ ರೀತಿಯಲ್ಲಿ ಇಳಿದಿದೆ.

Advertisement

ಈ ಕೆರೆ, ಕೊಲರಡೊ ನದಿಯ ಭಾಗವಾಗಿದ್ದು, ಕೊಲರಡೊ ನದಿಯಲ್ಲೇ ನೀರು ಕಡಿಮೆಯಾಗಿರುವುದರಿಂದ, ಲೇಕ್‌ ಮೀಡ್‌ನ‌ಲ್ಲಿಯೂ ನೀರು ಇಳಿಮುಖವಾಗಿದೆ. ಈ ಬೆಳವಣಿಗೆಗೆ ಜಾಗತಿಕ ತಾಪಮಾನವೇ ಕಾರಣ ಎಂದು ತಜ್ಞರು ಹೇಳಿದ್ದು, ಇದು ಅಲ್ಲಿನ ಸರ್ಕಾರ ಹಾಗೂ ಜಲತಜ್ಞರ ಆತಂಕಕ್ಕೆ ಕಾರಣವಾಗಿದೆ.

ಅಮೆರಿಕದ ಪ್ರಮುಖ ನದಿಗಳಲ್ಲೊಂದಾದ ಕೊಲರಡೊಗೆ ಅಡ್ಡವಾಗಿ ಲಾಸ್‌ವೇಗಾಸ್‌ನಲ್ಲಿ ಹೂವರ್‌ ಡ್ಯಾಂ ಎಂಬ ಅಣೆಕಟ್ಟನ್ನು ಕಟ್ಟಲಾಗಿದೆ. ಆ ಅಣೆಕಟ್ಟನ್ನು ಕಟ್ಟಿದ ನಂತರ, ಲೇಕ್‌ ಮೀಡ್‌ ಕೆರೆಯನ್ನು ಕಟ್ಟಲಾಗಿದೆ. ಆ್ಯರಿಝೋನಾ, ನೇವಡಾ, ಕ್ಯಾಲಿಫೋರ್ನಿಯಾ ಹಾಗೂ ಮೆಕ್ಸಿಕೋ ಜನತೆ, ಈ ಕೆರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1365 ಪಾಸಿಟಿವ್ ‍ಪ್ರಕರಣ ಪತ್ತೆ ;1558 ಸೋಂಕಿತರು ಗುಣಮುಖ

ಕೆರೆಯಲ್ಲಿ ನೀರು ಕಡಿಮೆಯಾಗಿರುವುದು ಈ ಪ್ರಾಂತ್ಯಗಳಲ್ಲಿ ನೀರಿನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ವರ್ಷ, ಕೆರೆಯಲ್ಲಿ ಮತ್ತಷ್ಟು ನೀರು ಮಾಯವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿರುವುದರಿಂದ ಸರ್ಕಾರ ಈ ಸಮಸ್ಯೆ ನಿರ್ಮೂಲನೆಗೆ ಮುಂದಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next