Advertisement

ಪಟಾಕಿ ಮಾಲಿನ್ಯ ಕಳೆದ ವರ್ಷಕ್ಕಿಂತ ಹೆಚ್ಚಳ

11:28 AM Nov 07, 2021 | Team Udayavani |

ಬೆಂಗಳೂರು: ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಮಾಲಿನ್ಯವು ಸಾಮಾನ್ಯ ದಿನಗಳಿಗಿಂತ ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಹೆಚ್ಚಳವಾಗಿದೆ.

Advertisement

ಕೋವಿಡ್ ದಿಂದ ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಬರುತ್ತಿರುವ ಪರಿಣಾಮ, ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಸರಾಸರಿ 115ರಷ್ಟಿದೆ. ದೀಪಾವಳಿ ವೇಳೆ ಅಂದರೆ ನ.3- 5ರ ವರೆಗೆ 67ಕ್ಕೆ ಕುಸಿದಿದೆ. ಆದರೆ, ದೀಪಾವಳಿ ಸಮಯದಲ್ಲಿನ ದತ್ತಾಂಶಗಳನ್ನು ಹೋಲಿಸಿದರೆ, ಕಳೆದ ವರ್ಷ ಸರಾಸರಿ ಎಕ್ಯೂಐ 54.8ರಷ್ಟಿತ್ತು. ಈ ಬಾರಿ 67.3ರಷ್ಟಾಗಿದೆ. ಇದು ಶೇಕಡಾವಾರು ಪ್ರಮಾಣದಲ್ಲಿ ಶೇ.23 ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳವೇಕೆ?: ಕಳೆದ ವರ್ಷ ಕೊರೊನಾ 2ನೇ ಅಲೆ ಲಾಕ್‌ಡೌನ್‌ ಘೋಷಣೆಯಾಗಿದ್ದ ಪರಿಣಾಮ, ವಾಹನ ಸಂಚಾರಕ್ಕೆ ಅವಕಾಶ ಇರಲಿಲ್ಲ ಮತ್ತು ಪಟಾಕಿ ಸಿಡಿಸಲು ಅವಕಾಶ ಇರಲಿಲ್ಲ. ಹೀಗಾಗಿ, ವಾಯು ಮಾಲಿನ್ಯ ಸಾಮಾನ್ಯ ದಿನಗಳಿಗಿಂತಲೂ ಕಡಿಮೆಯಾಗಿತ್ತು. ಪಟಾಕಿ ಮಾಲಿನ್ಯದ ಜತೆ ವಾಹನಗಳಿಂದ ಗಾಳಿ ಮಲಿನವಾಗಿದೆ. ದೀಪಾವಳಿ ಮೊದಲ ದಿನ ಭರ್ಜರಿ ಮಳೆ ಸುರಿದಿದ್ದರಿಂದ ಪಟಾಕಿ ಹೊಡೆಯಲು ಅವಕಾಶವೇ ನೀಡಲಿಲ್ಲ. 2ನೇ ದಿನ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹೀಗಿದ್ದರೂ ಜನರು ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ: ವಿಡಿಯೋ ವೈರಲ್

Advertisement

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ವೇಳೆ ವಾಯು ಗುಣಮಟ್ಟ ತೀವ್ರ ಕಳೆಪೆಗೆ ಹೋಗಿರುವುದರಿಂದ ಆತಂಕ ವ್ಯಕ್ತವಾಗಿದೆ. ಆದರೆ, ಬೆಂಗಳೂರಿನಲ್ಲಿ ದೀಪಾವಳಿಗೂ ಸಾಮಾನ್ಯ ದಿನಗಳಿಗೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next