Advertisement

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

11:32 AM Nov 21, 2024 | Team Udayavani |

ಬೆಂಗಳೂರು: ರಾಜಾಜಿನಗರದ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮೈ ಇವಿ ಸ್ಟೋರ್‌ ಹೆಸರಿನ ಶೋರೂಂನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟ ಪ್ರಕರಣ ಸಂಬಂಧ ಶೋರೂಂ ಮಾಲಿಕ ಹಾಗೂ ವ್ಯವಸ್ಥಾಪಕನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಯಶವಂತಪುರದ ನಿವಾಸಿ, ಶೋರೂಂ ಮಾಲಿಕ ಪುನೀತ್‌ ಗೌಡ ಅಲಿಯಾಸ್‌ ಎಚ್‌.ಜಿ.ಪುನೀತ್‌(36) ಹಾಗೂ ರಾಜಾಜಿನಗರದ ಆರನೇ ಬ್ಲಾಕ್‌ ನಿವಾಸಿ ಹಾಗೂ ಶೋರೂಮ್‌ನ ವ್ಯವಸ್ಥಾಪಕ ಜಿ.ಯುವರಾಜ್‌ (30) ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹಾಸನ ಮೂಲದ ಪುನೀತ್‌ಗೌಡ ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿ ಇ.ವಿ ಎಲೆಕ್ಟ್ರಿಕ್‌ ಬೈಕ್‌ ಶೋರೂಂ ನಡೆಸುತ್ತಿದ್ದರು. ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓಕಳಿಪುರದ ನಿವಾಸಿ, ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ (27) ಸಜೀವದಹನ ಆಗಿದ್ದರು. ದಿಲೀಪ್‌ ಸೇರಿ ಮೂವರು ಗಾಯಗೊಂಡಿದ್ದರು. ಘಟನೆಯಲ್ಲಿ 25ಕ್ಕೂ ಎಲೆಕ್ಟ್ರಿಕ್‌ ಬೈಕ್‌ಗಳು ಬೆಂಕಿಗಾಹುತಿಯಾಗಿದ್ದವು.

ಎಫ್ಎಸ್‌ಎಲ್‌ನಿಂದ ಪರಿಶೀಲನೆ: ಪ್ರಕರಣ ಸಂಬಂಧ ಬುಧವಾರ ಅಗ್ನಿಶಾಮಕ ದಳ, ಪೊಲೀಸ್‌ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌)ದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಎಫ್ಎಸ್‌ಎಲ್‌ ಅಧಿ ಕಾರಿಗಳು ಕೆಲವು ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರಿಶೀಲನೆಗೆ ಕೊಂಡೊಯ್ದರು. ಪ್ರಾಥಮಿಕವಾಗಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂಬುದು ಗೊತ್ತಾಗಿದೆ. ಆದರೆ, ಯಾವ ರೀತಿ ಶಾರ್ಟ್‌ ಸರ್ಕಿಟ್‌ ಆಗಿದೆ. ಬೈಕ್‌ಗಳ ಬ್ಯಾಟರಿಯಿಂದ ಘಟನೆ ಉಂಟಾಗಿದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮತ್ತೂಂದೆಡೆ ಚಾರ್ಜ್‌ಗೆ ಹಾಕಿದ್ದ ಬ್ಯಾಟರಿ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜೋರು ಶಬ್ದ ಬಂದಾಗ ಹೊರಕ್ಕೆ ಓಡಿಬಂದು ವೀಕ್ಷಿಸಿದಾಗ ಶೋರೂಂ ಹೊತ್ತಿ ಉರಿಯುತ್ತಿತ್ತು. ನಂತರ, ಕೆಲವರು ಹೊರಕ್ಕೆ ಬಂದರು. ಅದಾದ ಮೇಲೆ ಬ್ಯಾಟರಿಗಳು ಸ್ಫೋಟವಾಗುವ ಶಬ್ದ ಕೇಳಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದರು.

Advertisement

ಮನೆಯ ಜವಾಬ್ದಾರಿ ಹೊತ್ತಿದ್ದ  ಪ್ರಿಯಾ: ತಂದೆ ಕಣ್ಣೀರು:

ಅಗ್ನಿ ಅನಾಹುತದಲ್ಲಿ ಸಜೀವ ದಹನವಾದ ಪ್ರಿಯಾ ಮೃತದೇಹ ಮರಣೋತ್ತರ ಪರೀಕ್ಷೆಯು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ನಡೆಯಿತು. ಬಳಿಕ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಬುಧವಾರ ಸಂಜೆ ಅವರ ಅಂತ್ಯಕ್ರಿಯೆ ನಗರದಲ್ಲಿ ನಡೆಯಿತು. ಇನ್ನು ಮಗಳು ಸಿ.ಎ ಓದುವ ಕನಸು ಕಂಡಿದ್ದಳು. ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದಳು. ಈಗ ನಮಗೆ ಯಾರು ಇಲ್ಲದಂತಾಗಿದ್ದಾಗೆ ಎಂದು ಪ್ರಿಯಾ ತಂದೆ ಕಣ್ಣೀರು ಹಾಕಿದರು.

 

Advertisement

Udayavani is now on Telegram. Click here to join our channel and stay updated with the latest news.

Next