Advertisement

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

10:30 AM Nov 19, 2024 | Team Udayavani |

ಬೆಂಗಳೂರು: ಕಳೆದ 2021ರಲ್ಲಿ ದ್ವಿಚಕ್ರವಾಹನಕ್ಕೆ ಮಿನಿಬಸ್‌ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಪ್ರಕರಣದಲ್ಲಿ ಬಸ್‌ ಚಾಲಕನಿಗೆ 1 ವರ್ಷ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

Advertisement

ಮಿನಿಬಸ್‌ ಚಾಲಕ ಸುನೀಲ್‌ ಕುಮಾರ್‌ (37) ಅಪರಾಧಿ. ದ್ವಿಚಕ್ರವಾಹನ ಸವಾರ ಕಲ್ಯಾಣ್‌ ಕುಮಾರ್‌ (25) ಮೃತಪಟ್ಟವ. ‌

ಸಂಚಾರ ಪೂರ್ವ ವಿಭಾಗದ ವೈಟ್‌ಫೀಲ್ಡ್ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2021ರ ಸೆ.14ರಂದು ತಡರಾತ್ರಿ 1.10ರಲ್ಲಿ ವರ್ತೂರು ಗುಂಜೂರು ಮುಖ್ಯರಸ್ತೆಯಲ್ಲಿ ಮಿನಿಬಸ್‌ ಚಾಲಕ ತನ್ನ ವಾಹನವನ್ನು ವರ್ತೂರು ಕಡೆಯಿಂದ ಗುಂಜೂರು ಕಡೆಗೆ ರಸ್ತೆಯಲ್ಲಿ ತೀರಾ ಬಲ ಭಾಗಕ್ಕೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ. ಅದೇ ರಸ್ತೆಯಲ್ಲಿ ಗುಂಜೂರು ಕಡೆಯಿಂದ ವರ್ತೂರು ಕಡೆಗೆ ವಿನಾಯಕ ನಗರ ಬಳಿ ರಸ್ತೆಯ ಎಡ ಭಾಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಮಿನಿ ಬಸ್‌ ಡಿಕ್ಕಿ ಹೊಡೆದಿತ್ತು. ರಸ್ತೆಯ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದ. ‌

ವೈಟ್‌ಫೀಲ್ಡ್ ಸಂಚಾರ ಠಾಣಾ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಮಿನಿಬಸ್‌ ಚಾಲಕ ಸುನೀಲ್‌ ಕುಮಾರ್‌ಗೆ 1 ವರ್ಷ 3 ತಿಂಗಳು ಜೈಲು ಶಿಕ್ಷೆ ಹಾಗೂ 9 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫ‌ಲವಾದಲ್ಲಿ ಹೆಚ್ಚುವರಿ 2 ತಿಂಗಳು 10 ದಿನದ ಸಜೆ ವಿಧಿಸಿ ಆದೇಶ ಹೊರಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next