Advertisement

ಮಾಸ್ಕ್ ಧರಿಸದ ನಟ ವಿವೇಕ್ ವಿರುದ್ಧ FIR :  ಎಲ್ಲರಿಗೂ ಕಾನೂನು ಒಂದೇ ಎಂದ ಪೊಲೀಸ್

01:55 PM Feb 20, 2021 | Team Udayavani |

ಮುಂಬೈ : ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ ಆರೋಪದಡಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Advertisement

ವಿವೇಕ್ , ಫೆ.14 ಪ್ರೇಮಿಗಳ ದಿನದಂದು ಪತ್ನಿ ಪ್ರಿಯಾಂಕಾ ಆಳ್ವಾ ಜತೆ ಬೈಕ್ ನಲ್ಲಿ ಔಟಿಂಗ್ ಹೋಗಿದ್ದ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಸಿಕ್ಕಾಪಟ್ಟೆ ವೈರಲ್ ಆಗಿದ್ದ ಈ ವಿಡಿಯೋದಿಂದಲೇ ವಿವೇಕ್ ಅವರಿಗೆ ಕಾನೂನು ಕಂಟಕ ಎದುರಾಗಿದೆ.

ಬೈಕ್ ಓಡಿಸುತ್ತಿದ್ದ ವಿವೇಕ್ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿರಲಿಲ್ಲ. ಕೆಲ ದಿನಗಳಿಂದ ಮುಂಬೈನಲ್ಲಿ ಮತ್ತೆ ಕೋವಿಡ್ 19 ಹೆಚ್ಚಾಗುತ್ತಿರುವುದರಿಂದ ಮಾಸ್ಕ್ ಧರಿಸುವುದು ಸೇರಿದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಆದರೆ, ಈ ನಿಯಮವನ್ನು ವಿವೇಕ್ ಮುರಿದಿದ್ದರಿಂದ  ಐಪಿಸಿ ಸೆಕ್ಷನ್ 188 ಹಾಗೂ 269 ರಡಿ ದೂರು ದಾಖಲಾಗಿದೆ. ಅದರ ಜತೆಗೆ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ನಿನ್ನೆ (ಫೆ.19) ಅವರ ಮನೆಗೆ ದಂಡ ಕಟ್ಟುವಂತೆ ಇ-ಚಲನ್ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next