Advertisement

ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್‌

12:22 PM Sep 18, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ತಾಯಿ ಹೆಸರಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿಕೊಟ್ಟ ಆರೋಪ ಪ್ರಕರಣಕ್ಕೆ ಮರುಜೀವ ನೀಡಿರುವ ಭ್ರಷ್ಟಾಚಾರ ನಿಗ್ರಹ ದಳ, ಮೂವರು ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದೆ.

Advertisement

ಆನೇಕಲ್‌ ತಾಲೂಕಿನ ರಾಮನಾಯಕಹಳ್ಳಿ ಗ್ರಾಮದ ಸರ್ವೇ ನಂಬರ್‌ 29ರಲ್ಲಿರುವ 76.36 ಎಕರೆ ಸರ್ಕಾರಿ ಭೂಮಿಯಲ್ಲಿ, 8.30 ಎಕರೆ ಜಮೀನನ್ನು ಅರವಿಂದ ಜಾಧವ್‌  ತಾಯಿ ತಾರಾಬಾಯಿ ಮಾರುತಿರಾವ್‌  ಜಾಧವ್‌ ಅವರ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲಾಗಿದೆ ಎಬ ಆರೋಪ ಸಂಬಂಧ ದಾಖಲಾದ ದೂರಿನ ಅನ್ವಯ, 2015ರಲ್ಲಿ ಆನೇಕಲ್‌ ತಾಲೂಕು ಕಚೇರಿಯ ಸರ್ವೇ ಚೆಕಿಂಗ್‌ ಸೂಪರ್‌ ವೈಸರ್‌  ಯೋಗಾನಂದ ಗೌಡ,  ಸೂಪರ್‌ ವೈಸರ್‌ ಡಿ.ಬಿ ಗಂಗಯ್ಯ, ಸರ್ವೇಯರ್‌ ಅರುಣ್‌ ವಿರುದ್ಧ  ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿದೆ.

ರಾಜ್ಯಸರ್ಕಾರದ ಅಂದಿನ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌ ತಮ್ಮ  ಅಧಿಕಾರ ದುರುಪಯೋಗ ಪಡಿಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ತಾಯಿ ಹೆಸರಿಗೆ ಸರ್ಕಾರಿ ಜಮೀನು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಅಕ್ರಮದಲ್ಲಿ  ಕಂದಾಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು ಈ ಕುರಿತು ತನಿಖೆ ನಡೆಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಎಸ್‌, ಭಾಸ್ಕರನ್‌ 2016ರಲ್ಲಿ ಎಸಿಬಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next