Advertisement

Shoe ನೆಕ್ಕಲು ಒತ್ತಾಯಿಸಿದ ಆರೋಪ; ಕಾಂಗ್ರೆಸ್ ಶಾಸಕನ ವಿರುದ್ಧ ಎಫ್‌ಐಆರ್

06:29 PM Aug 11, 2023 | Team Udayavani |

ಜೈಪುರ: ದಲಿತ ವ್ಯಕ್ತಿಯೊಬ್ಬನಿಗೆ ಶೂ ನೆಕ್ಕುವಂತೆ ಒತ್ತಾಯಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಮತ್ತು ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Advertisement

ಪೊಲೀಸರು ತಮ್ಮ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ರಾಜಸ್ಥಾನದ ಜಾಮ್ವಾ ರಾಮ್‌ಗಢ ಶಾಸಕ ಆರೋಪಗಳನ್ನು ತಳ್ಳಿಹಾಕಿದ್ದು, ಆಸ್ತಿ ಸಂಬಂಧಿತ ವಿವಾದದಿಂದಾಗಿ ನನ್ನ ವಿರುದ್ಧ ನಕಲಿ ಆರೋಪಗಳನ್ನು ಮಾಡಲಾಗಿದೆ. ಇದು ನನ್ನ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಅಕ್ರಮ ಭೂಮಿ ಒತ್ತುವರಿ ವಿಚಾರದಲ್ಲಿ ನನಗೆ ಸಹಾಯ ಮಾಡಬೇಕೆಂದು ಕೆಲವರು ಬಯಸುತ್ತಿದ್ದಾರೆ. ಈ ಪ್ರಕರಣವನ್ನು ದಾಖಲಿಸಿದ ವ್ಯಕ್ತಿ ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

ಜೂನ್ 30 ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಎತ್ತಿಕೊಂಡು ಶಾಸಕರ ಶೂ ನೆಕ್ಕಲು ಒತ್ತಾಯಿಸಿದ ಸ್ಥಳಕ್ಕೆ ಕರೆದೊಯ್ದ ಘಟನೆಯ ನಂತರ ಸರ್ಕಲ್ ಆಫೀಸರ್ ಶಿವಕುಮಾರ್ ಭಾರದ್ವಾಜ್ ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next