Advertisement

ಸಂಬಂಧ ಉಳಿಸಿಕೊಳ್ಳಲು ಗೂಗಲ್‌ ಹುಡುಕಿ

12:35 PM Feb 17, 2018 | |

ಎದರುಮನೆ ಹೆಂಗಸು ಬಂದು ನಿಮ್ಮ ಹೆಂಡತಿಗೂ, ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ಹುಡುಗನಿಗೂ ತುಂಬಾ ಗೆಳತನತ್ತು ಎಂದಾಗ ಅವನು ಅಷ್ಟು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ತನ್ನ ಹೆಂಡತಿ ಅಂತಹವಳಲ್ಲ ಎಂದು ಬೈದು ಕಳುಸಿರುತ್ತಾನೆ. ಯಾವಾಗ ರಾತ್ರಿ ಹತ್ತಾದರೂ ಹೆಂಡತಿ ಮನೆಗೆ ಬರುವುದಿಲ್ಲವೋ, ಪರಿಚಯದವರ್ಯಾರನ್ನು ಕೇಳಿದರೂ ಸುಳಿವು ಸಿಗುವುದಿಲ್ಲವೋ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಇಟ್ಟಿದ್ದ ಐದು ಲಕ್ಷ ಮತ್ತು ಒಡವೆಗಳು ಮಾಯವಾಗಿರುತ್ತದೋ ಆಗ ಕ್ರಮೇಣ ಅವನಿಗೆ ತನ್ನ ಹೆಂಡತಿ, ತನ್ನನ್ನೂ, ಮನೆ, ಮಗಳನ್ನು ಬಿಟ್ಟು ಓಡಿ ಹೋಗಿದ್ದಾಳೆಂದು ಸ್ಪಷ್ಟವಾಗುತ್ತದೆ.

Advertisement

ಆ ಹುಡುಗನ ರೂಮ್‌ಮೇಟ್‌ನ ಕೇಳಿದರೆ, ಅವನು ತನ್ನ ಸ್ನೇತ ರಾಯಚೂರಿನ ಬಳಿ ಇರುವ ಗೂಗಲ್‌ ಎಂಬ ಊರಿನಲ್ಲಿರುವ ಇನ್ನೊಬ್ಬ ಸ್ನೇತನ ಮನೆಗೆ ಹೋಗಿರಬಹುದು ಎಂದು ಹೇಳುತ್ತಾನೆ. ಅಲ್ಲಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ತನ್ನ ಹೆಂಡತಿ ಮತ್ತು ಅವಳ ಬಾಯ್‌ಫ್ರೆಂಡ್‌ ಎಲ್ಲಾದರೂ ಹೋಗಿದ್ದರೆ ಅದು ಗೂಗಲ್‌ಗೇ ಹೋಗಿರಬಹುದು ಮತ್ತು ಅದು ದೊಡ್ಡ ವಿಷಯವಾಗುವುದರೊಳಗೆ ಅವಳನ್ನು ಹೇಗಾದರೂ ಮಾಡಿ ಬೆಂಗಳೂರಿಗೆ ವಾಪಸ್ಸು ಕರೆದುಕೊಂಡು ಬರಬೇಕು ಎಂದು ಹೊರಡುತ್ತಾನೆ.

ಅವನ ಜೊತೆಗೆ ಸ್ನೇಹಿತ ಸೇರಿಕೊಳ್ಳುತ್ತಾನೆ. ಅವನು ಮಾತಿ ಕೊಟ್ಟ ಹುಡುಗನನ್ನೂ ಎತ್ತಾಕಿಕೊಳ್ಳುತ್ತಾನೆ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಬಡ್ಡಿಗೆ ಸಾಲ ಕೊಟ್ಟವನು ಸಹ ಬಂದು ಜೊತೆಯಾಗುತ್ತಾನೆ. ಯಾರದೋ ಓಡಿಹೋಗಿರುವ ಹೆಂಡತಿಯನ್ನು ಹುಡುಕುವುದಕ್ಕೆ ಎಲ್ಲರೂ ಹೊರಡುತ್ತಾರೆ. ಹಾಗೆ ಓಡಿಹೋದವಳು ಗೂಗಲ್‌ ಎಂಬ ಊರಿನಲ್ಲಿ ಸಿಗುತ್ತಾಳಾ ಮತ್ತು ಬಾಯ್‌ಫ್ರೆಂಡ್‌ ಬಿಟ್ಟು ಗಂಡನ ಜೊತೆಗೆ ವಾಪಸ್ಸಾಗುತ್ತಾಳಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ, “ಗೂಗಲ್‌’ ನೋಡಬೇಕು.

ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್‌ ಇದುವರೆಗೂ ನಾಲ್ಕೆçದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆ ಚಿತ್ರಗಳ ಪೈಕಿ “ಗೂಗಲ್‌’ ದಿ ಬೆಸ್ಟ್‌ ಚಿತ್ರ ಎಂದರೆ ತಪ್ಪಿಲ್ಲ. ಕಥೆಯ ಷಯದಲ್ಲಾಗಲೀ, ನಿರೂಪಣೆಯಲ್ಲಾಗಲೀ ಅಥವಾ ಸಂದೇಶದಲ್ಲಾಗಲೀ ತಮ್ಮ ಮುಂದಿನ ಚಿತ್ರಗಳಿಗಿಂಥ ಬಹಳ ದೂರ ಸಾಗಿಬಂದಿದ್ದಾರೆ ಮತ್ತು ನಿಜಕ್ಕೂ ನೆನಪಿನಲ್ಲುಳಿಯುವಂತಹ ಚಿತ್ರವನ್ನು ಅವರು ಕೊಟ್ಟಿದ್ದಾರೆ ನಾಗೇಂದ್ರ ಪ್ರಸಾದ್‌. ಓಡಿ ಹೋದ ಹೆಂಡತಿಯನ್ನು ಹುಡುಕಿಕೊಂಡು ಹೊರಡುವಲ್ಲಿಗೆ ಕಥೆ ಶುರುವಾಗಿ, ಕ್ರಮೇಣ ಧ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ಆರಂಭದಲ್ಲಿ ಸ್ವಲ್ಪ ಲಘುವಾಗಿಯೇ ಶುರುವಾಗುವ ಚಿತ್ರ, ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ. ಕಥೆಗೆ ಅಡ್ಡವಾಗಿ ಬೇರೇನನ್ನೋ ಸೇರಿಸುವುದಕ್ಕೆ ಹೋಗುವುದಿಲ್ಲ ನಾಗೇಂದ್ರ ಪ್ರಸಾದ್‌. ಆದರೆ, ಇರುವುದರಲ್ಲೇ ಒಂದಿಷ್ಟು ಕತ್ತರಿಸಬಹುದಿತ್ತು. ಹೆಂಡತಿಯ ಹುಡುಕಾಟದಲ್ಲಿ ಸುಸ್ತಾಗಿರುವ ಗಂಡ ಡಾಭಾದಲ್ಲಿ ಕುಣಿದಾಡುವುದು, ರಾಜಿಯ ಅವಕಾಶವಿದ್ದರೂ ಚಿತ್ರಕ್ಕೊಂದು ವಿಚಿತ್ರ ತಿರುವು ಕೊಡುವುದು ಇವನ್ನೆಲ್ಲಾ ತಪ್ಪಿಸಬಹುದಿತ್ತು. ಆದರೆ, ಕಮರ್ಷಿಯಲ್‌ ಕಾರಣಗಳಿಗೆ ಇವೆಲ್ಲಾ ಚಿತ್ರಕ್ಕೆ ಸೇರಿಸಿರುವ ಸಾಧ್ಯತೆ ಇದೆ.

Advertisement

ವಿಶೇಷವೆಂದರೆ, ಇದು ಯಾವುದೇ ಒಂದು ನೈಜ ಘಟನೆಯನ್ನಾಧರಿಸಿದ ಚಿತ್ರವಲ್ಲ. ಆದರೆ, ಯಾವುದೇ ಮನೆಯಲ್ಲೂ ನಡೆಯಬಹುದಾದ ಒಂದು ಘಟನೆಯನ್ನಾಧರಿಸಿದ ಚಿತ್ರ. ಹಾಗಾಗಿ ಇದು ಎಲ್ಲರಿಗೂ ಸಲ್ಲುವಂತಹ ಒಂದು ಚಿತ್ರ. ಇಂಥದ್ದೊಂದು ಕಥೆಯನ್ನು ಆರಂಭದಲ್ಲಿ ರೋಚಕವಾಗಿ ನಿರೂಪಸಿ, ಎಮೋಷನಲ್‌ ಆಗಿ ಮುಂದುವರೆಸಿ, ಕೊನೆಗೆ ಒಂದು ದೊಡ್ಡ ನೋನೊಂದಿಗೆ ಮುಗಿಸುತ್ತಾರೆ ನಾಗೇಂದ್ರ ಪ್ರಸಾದ್‌. ಬಹುಶಃ ಚಿತ್ರದ ಕ್ಲೆçಮ್ಯಾಕ್ಸ್‌ ಸ್ವಲ್ಪ ಅತಿಯಾುತು ಅಂತನಿಸಬಹುದು ಅಥವಾ ಮಾನಸಿಕವಾಗಿ ತುಂಬಾ ಹಿಂಸಿಸಬಹುದು.

ಚಿತ್ರವನ್ನು ಒಂದೊಳ್ಳೆಯ ರೀತಿಯಲ್ಲೇ ಮುಗಿಸಬಹುದಿತ್ತು. ಆದರೆ, ಇನ್ನೊಂದು ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೂಲಕ, ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ ನಾಗೇಂದ್ರ ಪ್ರಸಾದ್‌. ಒಂದು ಬಗೆಹರಿಯಬಹುದಾದ ಪ್ರಕರಣವು, ಕೆಟ್ಟ ತೀರ್ಮಾನದಿಂದ ಯಾವ ರೀತಿ ಅಂತ್ಯವಾಗಬಹುದು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಗಂಡ, ಹೆಂಡತಿ ಮತ್ತು ಬಾಯ್‌ಫ್ರೆಂಡ್‌ ಪಾತ್ರಗಳು ಎಷ್ಟು ಮುಖ್ಯವೋ, ಹೆಂಡತಿ ಮತ್ತು ಬಾಯ್‌ಫ್ರೆಂಡ್‌ ಓಡಿಹೋದಾಗ, ಅವರನ್ನು ಬೆನ್ನಟ್ಟಿಕೊಂಡು ಹೋಗುವ ಪಾತ್ರಗಳು ಸಹ ಅಷ್ಟೇ ಮುಖ್ಯ.

ಶೋಭರಾಜ್‌, ಮುನಿ, ಸಂಪತ್‌ ಕುಮಾರ್‌, ಜಯದೇವ್‌ ಅವರಿಗೆ ಇಲ್ಲಿ ಪ್ರಮುಖ ಪಾತ್ರಗಳಿವೆ ಮತ್ತು ಅದೇ ಕಾರಣಕ್ಕೆ ನಾಗೇಂದ್ರ ಪ್ರಸಾದ್‌ ಇಲ್ಲಿ àರೋ ಆಗಿದ್ದರೂ ಅವರು àರೋ ಅಂತನಿಸದೆ ಒಂದು ಪಾತ್ರವಾಗಿ ಕಾಣುತ್ತಾರೆ. ಎಲ್ಲರೂ ತಮ್ಮ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಸಿದ್ದಾರೆ. ಶುಭಾ ಪೂಂಜ ಮಾದಕವಾಗಿ ಕಾಣುವುದರ ಜೊತೆಗೆ, ಕ್ಲೆçಮ್ಯಾಕ್ಸ್‌ನಲ್ಲಿ ತಮ್ಮ ಅಭಿನಯದಿಂದ ಗಮಸೆಳೆಯುವುದು ಶೇಷ. ಅಮೃತ ರಾವ್‌ ಮುದ್ದಾಗಿ ಕಾಣುತ್ತಾರೆ. ಚಿತ್ರದ ಹೈಲೈಟ್‌ ಎಂದರೆ ಹಾಡುಗಳು ಮತ್ತು ನ್ನೆಲೆ ಸಂಗೀತ.

ಚಿತ್ರದಲ್ಲಿ ಒಂದೆರೆಡು ಕಾಡುವಂತಹ ಹಾಡುಗಳಿವೆ. ಹಾಗೆಯೇ ಎಣ್ಣೆ ಸಾಂಗ್‌ ಸಹ ತೂರಿಕೊಂಡು ಬರುತ್ತದೆ. ಇಂಥದ್ದೊಂದು ಗಂಭೀರ ಕಥೆಗೆ ಅದು ಬೇಕಾಗಿಲ್ಲ ಎಂದನಿಸುವುದು ಸಹಜ. ಇನ್ನು ಚಿತ್ರದ ಬಹುತೇಕ ಪ್ರಯಾಣ ಇರುವುದರಿಂದ, ಹೆಲಿಕ್ಯಾಮ್‌ ಸಹ ಒಂದು ಪ್ರಮುಖ ಪಾತ್ರವಸುತ್ತದೆ ಮತ್ತು ಇಡೀ ಪರಿಸರವನ್ನು ಬಹಳ ಸುಂದರವಾಗಿ ಹಿಡಿದಿಡಲಾಗಿದೆ. ಕಳೆದು ಹೋದ ಹೆಂಡತಿಯನ್ನು ಹುಡುಕುವುದಕ್ಕೆ ನೋಡಬೇಕೋ ಬೇಡವೋ ಗೊತ್ತಿಲ್ಲ. ಆದರೆ, ಕಳೆದು ಹೋಗುತ್ತಿರುವ ಸಂಬಂಧವನ್ನು ಉಳಿಸಿಕೊಳ್ಳಲು ಒಮ್ಮೆ ಗೂಗಲ್‌ ನೋಡಬಹುದು. 

ಚಿತ್ರ: ಗೂಗಲ್‌
ನಿರ್ದೇಶನ: ವಿ. ನಾಗೇಂದ್ರ ಪ್ರಸಾದ್‌
ನಿರ್ಮಾಣ: ವಿ. ನಾಗೇಂದ್ರ ಪ್ರಸಾದ್‌
ತಾರಾಗಣ: ವಿ. ನಾಗೇಂದ್ರ ಪ್ರಸಾದ್‌, ಶುಭಾ ಪೂಂಜ, ಮುನಿ, ಶೋಭರಾಜ್‌, ಜಯದೇವ್‌, ಸಂಪತ್‌ ಕುಮಾರ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next