Advertisement
ಉಡುಪಿ ತಾಲೂಕು ಮಟ್ಟದ ತ್ತೈಮಾಸಿಕ ಕೆಡಿಪಿ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಉಡುಪಿ ತಾ|ನಲ್ಲಿ ಈ ಬಾರಿ ಉಂಟಾದ ನೆರೆಗೆ 79 ಮನೆಗಳು ಸಂಪೂರ್ಣ, 130 ಮನೆಗಳು ಭಾಗಶಃ, 135 ಅಲ್ಪಪ್ರಮಾಣ ಸಹಿತ ಒಟ್ಟು 344 ಮನೆಗಳಿಗೆ ಹಾನಿಯಾಗಿದೆ. 2.5 ಲಕ್ಷ ರೂ.ಗೂ ಅಧಿಕ ಪರಿಹಾರ ನೀಡಲಾಗಿದೆ. ಆರ್‌ಟಿಸಿ ಸಮಸ್ಯೆ, ಅಸಮರ್ಪಕ ದಾಖಲೆಯಿಂದಾಗಿ ಕೆಲವರಿಗೆ ಪರಿಹಾರ ವಿತರಣೆ ವಿಳಂಬವಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪ ಉಂಟಾದಾಗ ಅದನ್ನು ಸಮರ್ಥವಾಗಿ ನಿಭಾಯಿ ಸಲು ಜಿಲ್ಲೆಗೆ ಉತ್ತಮ ಟಾಸ್ಕ್ ಪೋರ್ಸ್
ಅತ್ಯಗತ್ಯ. ಈ ಬಾರಿ ನೆರೆಹಾನಿ ಸಂದರ್ಭ ಜಿಲ್ಲಾಡಳಿತ, ಸಂಘ-ಸಂಸ್ಥೆ, ಸ್ಥಳೀಯರು ರಕ್ಷಣ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಕೊರೊನಾದಿಂದಾಗಿ ಆದಾಯ, ಪರಿಹಾರದ ಮೂಲಗಳು ನಿಂತು ಹೋಗಿದ್ದು, ಇಲಾಖೆಗಳು ಇದ್ದ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ವಿನಿಯೋಗ ಮಾಡಬೇಕು ಎಂದು ಶಾಸಕ ಲಾಲಾಜಿ ಮೆಂಡನ್ ತಿಳಿಸಿದರು. ಪೌಷ್ಟಿಕ ತೋಟ ನಿರ್ಮಿಸಿ
ನರೇಗಾ ಯೋಜನೆಯಿಂದ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ ಪೌಷ್ಟಿಕ ತೋಟ ನಿರ್ಮಾಣ ಮಾಡಬೇಕು. ಇದಕ್ಕೆ ಪಂಚಾಯತ್ ನೆರವು ಪಡೆದುಕೊಳ್ಳಬೇಕು. ಈ ಬಗ್ಗೆ ಶೀಘ್ರ ಕಾರ್ಯೋನ್ಮುಖ ವಾಗುವಂತೆ ತಾ.ಪಂ. ಕಾರ್ಯ ನಿರ್ವಹಣ ಅಧಿಕಾರಿ ಮೋಹನ್‌ರಾಜ್ ತಿಳಿಸಿದರು. ಅಲೆವೂರಿನಲ್ಲಿ 1.60 ಕೋ.ರೂ.ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿಯ ಬಗ್ಗೆ ಇದುವರೆಗೂ ವರದಿ ನೀಡಿಲ್ಲ ಶೀಘ್ರದಲ್ಲಿಯೇ ವರದಿ ಸಿದ್ದಪಡಿಸಿ ನೀಡುವಂತೆ ಶಾಸಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
Related Articles
ಶಿಕ್ಷಣ ಇಲಾಖೆಯ ಸೇರ್ಪಡೆ- ಮಾರ್ಪಾಡು ಯೋಜನೆಯಲ್ಲಿ ಶಾಲೆ ಗಳಿಗೆ ಶೌಚಾಲಯ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು 2019ನೇ ಸಾಲಿನಲ್ಲಿ ನಡೆದಿದ್ದು, ಬಿಲ್ ಲ್ಯಾಪ್ಸ್ ಆದ ಕಾರಣ ಹಣ ಇನ್ನೂ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರದಲ್ಲಿ ಹಣ ಬಿಡುಗಡೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಇಒ ಮಂಜುಳಾ ಕೇಳಿಕೊಂಡರು. ಈ ಬಗ್ಗೆ ಪರಿಶೀಲಿಸುವುದಾಗಿ ಕಾರ್ಯ ನಿರ್ವಹಣಾಧಿಕಾರಿಗಳು ತಿಳಿಸಿದರು.
Advertisement
ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಉಪಾಧ್ಯಕ್ಷ ಶರತ್ ಬೈಲಕೆರೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ಕುಡೇಕರ್ ಉಪಸ್ಥಿತರಿದ್ದರು.
ಬಾಲ್ಯವಿವಾಹ: ಜಾಗೃತಿ ಮೂಡಿಸಿವಲಸೆ ಕಾರ್ಮಿಕರು ಅನ್ಯಜಿಲ್ಲೆಯಿಂದ ಬಂದು ಇಲ್ಲಿ ಪ್ರಗ್ನೆನ್ಸಿ ಮಾಡುತ್ತಾರೆ. ಈ ಬಗ್ಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಮಕ್ಕಳು ಪೋಕ್ಸೋ ಕಾಯ್ದೆ ಸಹಿತ ಇತರ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಬಾಲ್ಯವಿವಾಹದ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಸಹಕರಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೇಳಿಕೊಂಡರು. ನರೇಗಾ ಯೋಜನೆಯ ಸದುಪಯೋಗವಾಗಲಿ
ನರೇಗಾ ಯೋಜನೆಯ ಮೂಲಕ ಹಲವು ರೀತಿಯ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸಾಧ್ಯವಿದೆ. ಬಚ್ಚಲುಗುಂಡಿ ನಿರ್ಮಾಣಕ್ಕೆ 1 ಕುಟುಂಬಕ್ಕೆ 14 ಸಾವಿರ ರೂ., ವಸ್ತುಗಳಿಗಾಗಿ 8,300 ರೂ., 5,700 ರೂ. ಕೂಲಿ ಸಿಗುತ್ತದೆ. ಇಂತಹ ಹಲವು ಸೌಲಭ್ಯಗಳಿದ್ದು ಜನರು ಇದನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಚ್ಚಲುಗುಂಡಿ ನಿರ್ಮಾಣದ ಗುರಿಸಾಧನೆಯನ್ನು ಹೆಚ್ಚಳ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.