Advertisement
ದುರ್ಷರ್ಮಿಗಳು ಹಣಕಾಸಿನ ವಿಚಾರಕ್ಕೆ ಅವರನ್ನು ಬರ್ಬರವಾಗಿ ಕೊಂದು ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಬೇಧಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಕಾಡು ಗೋಡಿ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಮಂಜುನಾಥ್ (35) ಮತ್ತು ಗೋಪಿ(32) ಬಂಧಿತರು. ಆರೋಪಿಗಳು ಸೆ.5ರಂದು ಹಣಕಾಸಿನ ವಿಚಾರವಾಗಿ ನೀಲಕಂಠ ದೀಕ್ಷಿತ್ ಅವರನ್ನು ಹಾರ್ಡ್‌ವೇರ್ ಶಾಪ್‌ನಲ್ಲಿ ಕೊಲೆಗೈದು, ಬಳಿಕ ಕಲ್ಯಾಣ ಮಂಟಪ ಸಮೀಪದಲ್ಲಿ ಹೂತುಹಾಕಿದ್ದರು ಎಂದು ಪೊಲೀಸರು ಹೇಳಿದರು.
Related Articles
Advertisement
ಮತ್ತೂಂದೆಡೆ ದೀಕ್ಷಿತ್ ಕುಟುಂಬ ಸದಸ್ಯರುಕಾಡು ಗೋಡಿ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆಗ, ಸೆ.5ರಂದು ಸಂಜೆ ದೀಕ್ಷಿತ್ ಅವರು ಮಳಿಗೆಗೆ ಬಂದು ಹಣದ ವಿಚಾರವಾಗಿ ಮಾತನಾಡಿದರು. ಒಂದೆರಡು ದಿನಗಳಲ್ಲಿ ಕೊಡುತ್ತೇನೆ ಎಂದು ಹೇಳಿ ಕಳುಹಿಸಿದ್ದೆ ಅಷ್ಟೇ. ಆನಂತರ ಎಲ್ಲಿ ಹೋದರು ಎಂಬುದು ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದ. ಅಷ್ಟರಲ್ಲಿ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಕೆಲ ನೌಕರರಿಗೆ ಲಕ್ಷಾಂತರ ರೂ. ಕೊಟ್ಟು ಊರಿಗೆ ಹೋಗಿ ಬರುವಂತೆ ಕಳುಹಿಸಿದ್ದಾನೆ. ದೀಕ್ಷಿತ್ ಅವರ ಪತ್ತೆಗೆ ಸಾಕಷ್ಟು ಶ್ರಮಿಸಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಸಿಸಿಬಿ ಪೊಲೀಸರು ಸಾಕಷ್ಟು ಕಾರ್ಯಾಚರಣೆ ನಡೆಸಿದರೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕೋವಿಡ್ ರೂಪಾಂತರ; ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ
ಸುಳಿವು ಕೊಟ್ಟ ಲಕ್ಷಾಂತರ ರೂ. ನ ಹೊಸ ಬೈಕ್ :
ಹಾರ್ಡ್‌ವೇರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಲಕ್ಷಾಂತರ ರೂ. ಮೌಲ್ಯದ ಬೈಕ್ ಖರೀದಿಸಿದ್ದ. ಅಲ್ಲದೆ, ಈತನೊಂದಿಗೆ ಕೆಲಸ ಮಾಡುತ್ತಿದ್ದ ಇತರರು ಮಾದಕ ವಸ್ತುಗಳ ವ್ಯಸನಿಯಾಗಿದ್ದರು.ಡ್ರಗ್ಸ್‌ಪ್ರಕರಣದಲ್ಲಿ ಗೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ರಹಸ್ಯ ಬಾಯಿಬಿಟ್ಟಿದ್ದಾನೆ. ಈತನ ಹೇಳಿಕೆ ಆಧರಿಸಿ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಹಣ ಕೊಡುತ್ತೇವೆಂದು ಕರೆದುಕೊಂದರು :
ಸೆ.5ರಂದು ಸಂಜೆ ಐದು ಗಂಟೆ ಸುಮಾರಿಗೆ ದೀಕ್ಷಿತ್, ಆರೋಪಿ ಮಂಜುನಾಥ್ ಅಂಗಡಿಗೆ ಬಂದು ಹಣ ಕೊಡುವಂತೆ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಅದ ರಿಂದ ಕೋಪಗೊಂಡ ಆರೋಪಿ, ತನ್ನ ಅಂಗಡಿಗೆ ಹೊಂದಿಕೊಂಡಂತಿರುವ ಗೋಡೌನ್‌ನಲ್ಲಿ ಹಣ ಕೊಡುವುದಾಗಿ ಕರೆದೊಯ್ದಿದ್ದಾನೆ. ಕಬ್ಬಿಣ ರಾಡ್ ಗಳಿಂದ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರ ಜತೆ ಸೇರಿಕೊಂಡು ಬರ್ಬರವಾಗಿ ಕೊಲೆಗೈದಿದ್ದಾನೆ. ಬಳಿಕ ತಡರಾತ್ರಿ ಕಾಡುಗೋಡಿಯಲ್ಲಿರುವ ತನ್ನ ಕಲ್ಯಾಣ ಮಂಟಪ ಹಿಂಭಾಗದ ಕಸ ವಿಂಗಡಣೆ ಘಟಕ ನಿರ್ಮಾಣ ಮಾಡಲು ಪಾಯ ತೋಡಲಾಗಿತ್ತು. ಅದೇ ಜಾಗದಲ್ಲಿ ದೀಕ್ಷಿತರ ಶವ ಹೂತುಹಾಕಿ, ಕಲ್ಲು, ಸಿಮೆಂಟ್‌ನಿಂದ ಮುಚ್ಚಿ ಪರಾರಿಯಾಗಿದ್ದರು. ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಅರಿವಿಲ್ಲದೆ ಕಸ ವಿಂಗಡಣಾ ಘಟಕ ನಿರ್ಮಾಣ ಮಾಡಿದ್ದಾರೆ.