Advertisement

ಮತ್ತೆ ಗೆಲುವಿನ ಹಳಿಯೇರಿದ ಆಸೀಸ್: ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾಗೆ ಸೋಲು

11:05 AM Aug 08, 2021 | Team Udayavani |

ಢಾಕಾ: ಬಾಂಗ್ಲಾದೇಶದ ವಿರುದ್ದ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಆಸೀಸ್ ಮತ್ತೆ ಗೆಲುವಿನ ಹಳಿಯೇರಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಆಸೀಸ್ ಮೂರು ವಿಕೆಟ್ ಗಳ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ನಯೀಮ್ 18 ರನ್, ಹುಸೈನ್ 20 ರನ್, ಮೆಹದಿ ಹಸನ್ 23 ರನ್ ಗಳಿಸಿದರು. ಆಸೀಸ್ ಪರ ಸ್ವೆಪ್ಸನ್ ಮತ್ತು ಟೈ ತಲಾ ಮೂರು ವಿಕೆಟ್ ಕಿತ್ತರು.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ಗೆ ಇಂದು ತೆರೆ: ಭಾರತದ ಧ್ವಜಧಾರಿಯಾಗಿ ಭಜರಂಗ್ ಪೂನಿಯಾ

ಗುರಿ ಬೆನ್ನತ್ತಿದ ಆಸೀಸ್ ಗೆ ಡ್ಯಾನ್ ಕ್ರಿಸ್ಟಿಯನ್ ನೆರವಾದರು. ಕೇವಲ 15 ಎಸೆತದಲ್ಲಿ 39 ರನ್ ಗಳಿಸಿದರು. ಶಕೀಬ್ ರ ಒಂದು ಓವರ್ ನಲ್ಲಿ ಕ್ರಿಸ್ಟಿಯನ್ ಐದು ಸಿಕ್ಸರ್ ಬಾರಿಸಿದರು. ಕೊನೆಯಲ್ಲಿ ಆಸ್ಟನ್ ಅಗರ್ 27 ರನ್ ಗಳಿಸಿದರು. ಒಂದು ಓವರ್ ಬಾಕಿ ಇರುವಂತೆ 7 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಗೆಲುವು ಸಾಧಿಸಿತು.

ಬಾಂಗ್ಲಾ ಪರ ಮುಸ್ತಫಿಜುರ್ ರಹಮಾನ್ ಮತ್ತು ಮೆಹದಿ ಹಸನ್ ತಲಾ ಎರಡು ವಿಕೆಟ್ ಕಿತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next