Advertisement
ಬೆಂಗಳೂರು ದಕ್ಷಿಣ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪರ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯಸಭೆ ಸದಸ್ಯರಾದ ಪ್ರೊ.ರಾಜೀವ್‌ಗೌಡ, ಕೆ.ಸಿ.ರಾಮಮೂರ್ತಿ ರೋಡ್ ಶೋ ನಡೆಸಿ ಮತ ನೀಡುವಂತೆ ಮನವಿ ಮಾಡಿದರು.
Related Articles
Advertisement
ಬೆಂಗಳೂರು ಕೇಂದ್ರ: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಗಾಂಧಿನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಪಾಲಿಕೆ ಸದಸ್ಯರ ಜತೆಗೂಡಿ ಶಿವಾಜಿನಗರ, ಚಾಮರಾಜಪೇಟೆ, ಶಾಂತಿನಗರ, ಸರ್ವಜ್ಞನಗರದಲ್ಲಿ ಪಾದಯಾತ್ರೆ ನಡೆಸಿ ಪ್ರಧಾನಿ ನರೇಂದ್ರಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಮತ ನೀಡುವಂತೆ ಮನವಿ ಮಾಡಿದರು.
ಬೆಂಗಳೂರು ಉತ್ತರ: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಜತೆಗೂಡಿ ರಾಮಮೂರ್ತಿ ನಗರ ವಾರ್ಡ್‌ನ ಕೌದೇನಹಳ್ಳಿ, ಶಾಂತಿ ಲೇಔಟ್, ಅಂಬೇಡ್ಕರ್‌ನಗರ, ಸರ್ ಎಂ.ವಿ ಬಡಾವಣೆ ಸೇರಿ ಹರಾಮಮೂರ್ತಿನಗರ ವಾರ್ಡ್‌ನ ಕೌದೇನಹಳ್ಳಿ, ಶಾಂತಿ ಲೇಔಟ್, ಅಂಬೇಡ್ಕರ್‌ನಗರ, ಸರ್ ಎಂ.ವಿ ಬಡಾವಣೆ ಸೇರಿ ಹಸುತ್ತಮುತ್ತಲ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಬೆಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸು ಕಂಡಿದ್ದು, ಬೆಂಬಲ ನೀಡಿ ಎಂದು ಕೃಷ್ಣ ಬೈರೇಗೌಡರು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನೇಗೌಡ, ಕೃಷ್ಣಮೂರ್ತಿ, ಇಟಾಚಿ ಮಂಜುನಾಥ್, ಕೆ.ಸಿ.ಬೀರಪ್ಪ ಜತೆಯಲ್ಲಿದ್ದರು.
ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡರು, ಯಶವಂತಪುರ, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಹಲವೆಡೆ ನಟ ಜಗ್ಗೇಶ್, ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಮುಖಂಡರ ಜತೆಗೂಡಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.