Advertisement

Film Chamber; ಫೈರ್‌ಗೂ ನಮಗೂ ಸಂಬಂಧವಿಲ್ಲ: ನಿರ್ಮಾಪಕ ಸಾ.ರಾ.ಗೋವಿಂದು

09:41 PM Sep 10, 2024 | Poornashri K |

ಬೆಂಗಳೂರು: ಫೈರ್‌ ಸಂಸ್ಥೆ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಎಲ್ಲ ಕಲಾವಿದರು ಸಹಿ ಹಾಕಿಲ್ಲ. ನಮಗೂ ಫೈರ್‌ ಸಂಸ್ಥೆಗೂ ಸಂಬಂಧವಿಲ್ಲ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದಾರೆ.

Advertisement

ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆದ ಘಟನೆಗಳು ಇಲ್ಲ. ಒಂದು ವೇಳೆ ಇದ್ದರೆ, ಅವರು ನೇರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು.

ಇಂಥ ನೂರಾರು ಸಮಸ್ಯೆಗಳ ನ್ನು ಬಗೆಹರಿಸಿದ್ದೇವೆ. ಈಗಾಗಲೇ ಮಹಿಳಾ ಆಯೋಗದ ಅಧ್ಯಕ್ಷರು, ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಸಂಪರ್ಕ ಮಾಡಿದ್ದು, ಸೆ. 16ರಂದು ಸಭೆ ಕರೆದಿದ್ದಾರೆ. ಅಲ್ಲಿ ನಾವು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವರು ಸುಮ್ಮನೆ ಹೇಳಿಕೆ ಕೊಟ್ಟಿದ್ದಾರೆ.

ಮನವಿಯಲ್ಲಿ ಎಲ್ಲರೂ ಸಹಿ ಹಾಕಿಲ್ಲ. ಚಿತ್ರರಂಗದ ಸಮಸ್ಯೆಗಳಿಗೆ ವಾಣಿಜ್ಯ ಮಂಡಳಿ ಇದೆ. ಇದನ್ನು ಬಿಟ್ಟು ಹೋಗಿ ಪ್ರತ್ಯೇಕ ಸಂಘ ಕಟ್ಟಿಕೊಳ್ಳುವುದಿಲ್ಲ. ಹಾಗಾಗಿ ಫೈರ್‌ಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next