Advertisement
ಪ್ರಸ್ತುತ ಹಂತದಲ್ಲಿ ಘಟಕ ಪುನಶ್ಚೇತನಕ್ಕೆ ರಾಜ್ಯ ಸರಕಾರವು ಸೂಕ್ತವಾದ ಅನುದಾನ ಒದಗಿಸಿದರೆ ಖಾಸಗಿ ನೇತೃತ್ವದ ಕಂಪೆನಿಗಳು ನೀರಾ ಯೋಜನೆಯನ್ನು ಅನುಷ್ಠಾನಿಸಲು ಮುಂದೆ ಬರಲಿದೆ ಎಂದು ತಿಳಿದುಬಂದಿದೆ.
ಘಟಕ ಆರಂಭವಾದಾಗ ಕೇರಳ ರಾಜ್ಯದ ಖಾಸಗಿ ಕಂಪೆನಿ ಗುತ್ತಿಗೆ ನಿರ್ವಹಣೆ ವಹಿಸಿತ್ತು. ಕಂಪೆನಿಯನ್ನು ನಿರ್ವಹಿಸುತ್ತಾ ಮೂರು ವರ್ಷಗಳಿಂದ ಸಹಾಯಧನ ಲಾಭ ಪಡೆದ ಕಂಪೆನಿ ಎರಡು ವರ್ಷದ ಹಿಂದೆ ಇಲ್ಲಿನ ಘಟಕಕ್ಕೆ ವಿದಾಯ ಹೇಳಿ ಸದ್ದಿಲ್ಲದೆ ಹೋಗಿಬಿಟ್ಟಿದೆ.
Related Articles
ಕಲ್ಪರಸ ಅಭಿದಾನದ ತೆಂಗಿನ ಮರದ ದ್ರವೋತ್ಪನ್ನ. ನೀರಾ ಸಾಫ್ಟ್ ಡ್ರಿಂಕ್ಸ್ ಎಳನೀರಿನಷ್ಟೆ ಶುದ್ಧ. ರಾಷ್ಟ್ರಮಟ್ಟ
ದಲ್ಲಿಯೇ ಅತ್ಯಂತ ಆಧುನಿಕತೆಯ ಪ್ರಥಮ ಘಟಕ. ಇದು ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ಮೊದಲಿಗೆ ಅಳವಡಿಕೆ ಆಗಿತ್ತು. ಸುದೀರ್ಘ ಎರಡು ವರ್ಷಗಳ ಅವಧಿಯಲ್ಲಿ ನಿರ್ವಹಣೆ ವಿಚಾರದ ತಾಂತ್ರಿಕ ಅಡಚಣೆ ಬಳಿಕ ಅಧಿಕೃತ ಚಾಲನೆಗೆ ದಿನಗಣನೆ ಆರಂಭವಾಗಿತ್ತು. ಪ್ರಾಯೋಗಿಕ ಮಾರಾಟಕ್ಕಾಗಿ 2014 ಮೇ 6ರಂದು ನೀರಾ ತಂಪು ಪಾನೀಯ ಪ್ಯಾಕೆಟ್ ಮಾದರಿಯಲ್ಲಿ ಮಂಗಳೂರು ಹಾಪ್‌ಕಾಮ್ ಘಟಕಕ್ಕೆ ರವಾನೆಯಾಗಿದೆ. ಅಂದು ಬಂಟ್ವಾಳ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದರು. ಆದರೆ ಅವರು ಕೆಲವೊಂದು ಹಿತಾಸಕ್ತಿಗಳಿಗೆ ಒಗ್ಗಿಕೊಳ್ಳದ ಕಾರಣ ಇಲ್ಲಿಂದ ಎತ್ತಂಗಡಿಯಾಗಿಉಡುಪಿಗೆ ವರ್ಗಾವಣೆಗೊಂಡರು. ಇದರೊಂದಿಗೆ ಬಂಟ್ವಾಳದಲ್ಲಿ ನೀರಾ ಘಟಕವು ಹಿಂದಡಿ ಇಡುತ್ತಾ ಅಂತಿಮವಾಗಿ ಮುಚ್ಚುಗಡೆ ಆಯಿತು.
Advertisement
ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್ ತೆಂಗು ಉತ್ಪಾದಕರ ಕಂಪೆನಿ ಜಂಟಿಯಾಗಿ ಘಟಕ ಇಲ್ಲಿನ ಘಟಕವನ್ನು ನಿರ್ವಹಿಸಲು ಒಪ್ಪಿಕೊಂಡು, ಮೂರ್ತೆದಾರರ ಮಹಾ ಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟ ಆರಂಭವಾಗಿತ್ತು.
ತುಂಬೆ ಘಟಕವು ದಿನಕ್ಕೆ ಗರಿಷ್ಠ 2,000 ಲೀ. ಸಂಗ್ರಹ ಮತ್ತು ಸಂಸ್ಕರಣೆ ಸಾಮರ್ಥ್ಯ ಹೊಂದಿತ್ತು. ಕನಿಷ್ಠ ನೂರು ಮಂದಿ ನೀರಾ ಮೂರ್ತೆದಾರರು, ಅಷ್ಟೆ ಸಂಖ್ಯೆಯ ಸಹಾಯಕರು, ಸಂಸ್ಕರಣೆ, ಮಾರಾಟ ಮತ್ತು ವಿತರಣೆಗೆ ಸುಮಾರು ಐವತ್ತು ಮಂದಿ ಸಿಬಂದಿಗಳ ಮೂಲಕ ಹಲವು ಮಂದಿಗೆ ಉದ್ಯೋಗ ಪೂರಕವಾಗಿತ್ತು.
1 ಕೋ.ರೂ. ಅನುದಾನತೆಂಗಿನ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ನೂತನ ಘಟಕ ಯಂತ್ರೋಪಕರಣಗಳ ಅಳವಡಿಕೆ ಆಗಿದೆ. 2011-12ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಒಂದು ಕೋಟಿ ರೂ. ಅನುದಾನವು ಇದಕ್ಕೆ ಬಿಡುಗಡೆ ಆಗಿತ್ತು ಘಟಕ ಎಲ್ಲೆಲ್ಲಿದೆ ಒರಿಸ್ಸಾದಲ್ಲಿ ಖಾಸಗಿ ವ್ಯವಸ್ಥೆ ಯಡಿಯಲ್ಲಿ 2005ರಲ್ಲಿ ನೀರಾ ಘಟಕಕ್ಕೆ ಅನುಮತಿ ದೊರೆತಿದೆ. ತಮಿಳುನಾಡು, ಆಂಧ್ರದಲ್ಲೂ ಖಾಸಗಿ ವ್ಯವಸ್ಥೆ ನಡೆಸುತ್ತದೆ, ಕೇರಳದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ .