Advertisement

ಮಾಸಾಂತ್ಯದೊಳಗೆ ತೊಗರಿ ಬೆಳೆ ವಿಮೆ ಪ್ರೀಮಿಯಂ ತುಂಬಿ

09:48 AM Jul 07, 2020 | Suhan S |

ಕಲಬುರಗಿ: ಪ್ರಸಕ್ತ ಮುಂಗಾರು ಹಂಗಾಮಿಗೆ ಪ್ರಮುಖ ಬೆಳೆಯಾದ ತೊಗರಿ ಬೆಳೆ ವಿಮೆ ನೋಂದಣಿ ಅಂದರೆ ಪ್ರೀಮಿಯಂ ಮೊತ್ತವನ್ನು ರೈತರು ಜು.31ರೊಳಗೆ ತುಂಬುವಂತೆ ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸುಗೂರ ತಿಳಿಸಿದ್ದಾರೆ.

Advertisement

2020-21ನೇ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಯುನಿ ವರ್ಸಲ್‌ ಸೊಂಪೊ ಜನರಲ್‌ಇನ್ಸುರೆನ್ಸ್‌ ಕಂಪನಿ ಲಿ. ಬೆಂಗಳೂರು ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ. ರೈತ ಬಾಂಧವರು ತೊಗರಿ ಜತೆಗೆ ಉಳಿದ ಬೆಳೆಗಳ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕ್‌ ಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ‌ಗಳಿಗೆ ಸಂಪರ್ಕಿಸಿ ಬೆಳೆ ವಿಮೆ ನೋಂದಣಿ ಮಾಡುವಂತೆ ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕಳೆದ ವರ್ಷದ ಬೆಳೆ ವಿಮೆ ಮಂಜೂರಾತಿಗೆ ಮೀನಮೇಷ: ಕಳೆದ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಬೆಳೆ ವಿಮೆ ಮಂಜೂರಾಗಿಲ್ಲ. ಪ್ರತಿವರ್ಷ ಮೇ ತಿಂಗಳಲ್ಲೇ ಬೆಳೆವಿಮೆ ಮಂಜೂರಾಗುತ್ತಿತ್ತು. ಆದರೆ ಜೂನ್‌ ಮುಗಿದು ಜುಲೈ ಬಂದರೂ ಬೆಳೆವಿಮೆ ಮಂಜೂರಾಗಿಲ್ಲ. ಕಳೆದ ವರ್ಷ ಜಿಲ್ಲೆಗೆ ಕೇವಲ 10 ಕೋ.ರೂ ಬೆಳೆವಿಮೆ ಮಂಜೂರಾಗಿತ್ತು. ಅದರ ಹಿಂದಿನ ವರ್ಷ 2017-18ನೇ ಸಾಲಿನ ಬೆಳೆ ಹಾನಿಗೆಂದು ಕೇವಲ 3 ಲಕ್ಷ ರೂ. ಬೆಳೆವಿಮೆ ಮಂಜೂರಾಗಿತ್ತು. ಒಟ್ಟಾರೆ ಇದನ್ನೆಲ್ಲ ಅವಲೋಕಿಸಿದರೆ ಜಿಲ್ಲೆಯ ರೈತರು ಬೆಳೆವಿಮೆಗೆಂದು ಪ್ರಿಮಿಯಂ ತುಂಬಲು ಮಾತ್ರ ಅರ್ಹರು. ಆದರೆ ಬೆಳೆವಿಮೆ ಪಡೆಯಲು ಅನರ್ಹರು ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next