ಭುವನೇಶ್ವರ: ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತದ ವನಿತೆಯರು ದ್ವಿತೀಯ ದರ್ಜೆಯ ನೆದರ್ಲೆಂಡ್ಸ್ ವಿರುದ್ಧ ಶೂಟೌಟ್‌ನಲ್ಲಿ ಸೋಲನುಭವಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1 ಸಮಬಲ ಸಾಧಿಸಿದ್ದವು. ರಾಜ್ವಿಂದರ್ ಕೌರ್ ಮೊದಲ ನಿಮಿಷದಲ್ಲೇ ಭಾರತದ ಖಾತೆ ತೆರೆದರು.
53ನೇ ನಿಮಿಷದಲ್ಲಿ ಡಚ್ ನಾಯಕಿ ಜಾನ್ಸೆನ್ ಯಿಬ್ಬಿ ಗೋಲು ಸಿಡಿಸಿದರು. ಪಂದ್ಯ ಶೂಟೌಟ್‌ನತ್ತ ಮುಖ ಮಾಡಿತು. ಇದರಲ್ಲಿ ಭಾರತೀಯರ ಗುರಿ ತಪ್ಪಿತು.
ಪಂದ್ಯ 3-1 ಗೋಲುಗಳಿಂದ ನೆದರ್ಲೆಂಡ್ಸ್ ಪಾಲಾಯಿತು.ಇದು ಅನನುಭವಿ ಡಚ್ ತಂಡವಾಗಿತ್ತು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ತಂಡದಿಂದ ಬಹುತೇಕ ಮಂದಿ ಹೊರಗುಳಿದಿದ್ದರು.
ತಂಡದಲ್ಲಿ 10ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ ಕೇವಲ 4 ಆಟಗಾರ್ತಿ ಯರಷ್ಟೇ ಇದ್ದರು. 24 ಪಂದ್ಯವಾಡಿದ ನಾಯಕಿ ಜಾನ್ಸೆನ್ ಅವರೇ ಹೆಚ್ಚಿನ ಅನುಭವಿಯಾಗಿದ್ದರು.