Advertisement

ಎಫ್‌ಐಎಚ್‌ ಸಮಾವೇಶ ಮುಂದಕ್ಕೆ: ಬಾತ್ರಾ ಅಧ್ಯಕ್ಷ ಅವಧಿ ವಿಸ್ತರಣೆ

08:27 AM May 10, 2020 | Sriram |

ಲುಸಾನ್ನೆ (ಸ್ವಿಜರ್‌ಲ್ಯಾಂಡ್‌): ನರೀಂದರ್‌ ಬಾತ್ರಾ ಇನ್ನೂ ಒಂದು ವರ್ಷ ಕಾಲ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್‌ಐಎಚ್‌) ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

Advertisement

ಕೋವಿಡ್‌-19 ಕಾರಣದಿಂದ ವಾರ್ಷಿಕ ಎಫ್ಐಎಚ್‌ ಸಮಾವೇಶ ಮುಂದುವರಿದಿರುವುದು ಇದಕ್ಕೆ ಕಾರಣವಾಗಿದೆ. ಈ ಮೊದಲು ನಿಗದಿಯಾದಂತೆ ಈ ಸಮಾವೇಶ ಅ. 28ರಂದು ಹೊಸದಿಲ್ಲಿಯಲ್ಲಿ ನಡೆಯಬೇಕಿತ್ತು. ಆದರೆ ಶುಕ್ರವಾರ ಆನ್‌ಲೈನ್‌ ಮೂಲಕ ಸಭೆ ನಡೆಸಿದ ವಿಶ್ವ ಹಾಕಿ ಮಂಡಳಿ, ಇದನ್ನು 2021ರ ಮೇ ತಿಂಗಳಿಗೆ ಮುಂದೂಡಲು ನಿರ್ಧರಿಸಿತು. ಹೀಗಾಗಿ ನರೀಂದರ್‌ ಬಾತ್ರಾ ಇನ್ನೂ ಒಂದು ವರ್ಷ ಹೆಚ್ಚುವರಿಯಾಗಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಬಾತ್ರಾ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿದ್ದಾರೆ.

“ಭವಿಷ್ಯದಲ್ಲಿ ಬಹಳಷ್ಟು ಹಾಕಿ ಪಂದ್ಯಾವಳಿಗಳನ್ನು ಪುನರ್‌ ಸಂಘಟಿಸಬೇಕಿದೆ. ಇದನ್ನು ಸಂಪೂರ್ಣ ಬದ್ಧತೆಯೊಂದಿಗೆ, ಎಲ್ಲ ದೇಶಗಳ ಹಾಕಿ ಮಂಡಳಿಗಳ ಬೆಂಬಲದೊಂದಿಗೆ ನಡೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ’ ಎಂಬುದಾಗಿ ಈ ಸಂದರ್ಭ ತಿಳಿಸಿದ ಬಾತ್ರಾ ಅವರು ಹಾಕಿ ಸಮಾವೇಶದ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದರು.

ಈಗಿನ ವಿಶ್ವ ಹಾಕಿ ಮಂಡಳಿಯ ಅಧ್ಯಕ್ಷರ ಹಾಗೂ ಸದಸ್ಯರ ಕಾರ್ಯಾವಧಿ 2020ರ ಅಕ್ಟೋಬರ್‌ಗೆ ಕೊನೆಗೊಳ್ಳಲಿತ್ತು. ಬಾತ್ರಾ 2016ರ ನವೆಂಬರ್‌ನಲ್ಲಿ ಎಫ್‌ಐಎಚ್‌ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next