Advertisement

ಅಸಮಾನತೆ ಹತ್ತಿಕ್ಕಲು ಹೋರಾಡಿ

10:34 AM Jan 28, 2022 | Team Udayavani |

ಆಳಂದ: ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬುದ್ಧ, ಬಸವ, ಡಾ| ಅಂಬೇಡ್ಕರ್‌, ಪೇರಿಯಾರ ರಾಮಸ್ವಾಮಿ, ನಾರಾಯಣಗುರು, ಫುಲೆ, ಶಾಹು ಮಹಾರಾಜರಂತ ಅನೇಕ ಮಹಾ ಪುರುಷರ ತತ್ವಾದರ್ಶಗಳ ವಿರುದ್ಧ ದೇಶದಲ್ಲಿ ಅಸಮಾನತೆ ತಾಂಡವಾಡುತ್ತಿದ್ದು, ಇದನ್ನು ಹತ್ತಿಕ್ಕಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ ಹೇಳಿದರು.

Advertisement

ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಭೀಮ ಆರ್ಮಿ ತಾಲೂಕು ಘಟಕ ಆಯೋಜಿಸಿದ್ದ ಭೀಮಾ-ಕೋರೆಗಾಂವ ವಿಜಯಯೋತ್ಸವ ಮತ್ತು ಸಾವಿತ್ರಿಬಾಯಿ ಫುಲೆ 191ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ವೈರಿಗಳನ್ನು ಮೆಟ್ಟಿನಿಲ್ಲಬೇಕು. ಇತಿಹಾಸದ ಪುಟಗಳಲ್ಲಿ ಭೀಮಾ-ಕೋರೆಗಾಂವದಲ್ಲಿ 500 ಜನ ಮಹಾರ್‌ ಸೈನಿಕರು ಸಾಮಾಜಿಕ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ತ್ಯಾಗಬಲಿದಾನದ ಆದರ್ಶ ಮರೆಯಬಾರದು ಎಂದರು.

ಸಾನ್ನಿಧ್ಯ ವಹಿಸಿದ್ದ ಉಸ್ತುರಿ- ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ಮಹಾ ಪುರುಷರ ವಿಚಾರಧಾರೆಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ| ಅಪ್ಪುಗೇರೆ ಸೋಮಶೇಖರ, ಭೀಮಾಶಂಕರ ಪಾಟೀಲ, ಭೀಮ ಆರ್ಮಿ ರಾಜ್ಯ ಉಸ್ತುವಾರಿ ಎಸ್ಪಾಲ್‌ ಬೋರೆ, ರಾಜ್ಯಾಧ್ಯಕ್ಷ ಮತಿನಕುಮಾರ ಮಾತನಾಡಿದರು.

Advertisement

ಜಿಪಂ ಎಇಇ ನಾಗಮೂರ್ತಿ ಕೆ. ಶೀಲವಂತ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ದಯಾನಂದ ಶೇರಿಕಾರ, ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ್‌ ಅರುಣೋದಯ, ಆನಂದ ಗಾಯಕವಾಡ, ಭೀಮ ಆರ್ಮಿ ರಾಜ್ಯ ಉಸ್ತುವಾರಿ ಎಸ್ಪಾಲ್‌ ಬೋರೆ, ರಾಜ್ಯಾಧ್ಯಕ್ಷ ಮತಿನಕುಮಾರ, ಜಿಲ್ಲಾಧ್ಯಕ್ಷ ಸೂರ್ಯಕಾಂತ ಜಿಡಗಾ, ಉಪಾಧ್ಯಕ್ಷ ಮೊಹ್ಮದ್‌ ಹನೀಫ್‌, ತಾಲೂಕು ಅಧ್ಯಕ್ಷ ಗೌತಮ ಕಾಂಬಳೆ, ಪಿಂಟು ಸಾಲೇಗಾಂವ, ಅಜಯ ಸಿಎಂ, ಸಂಜಯ ಆರ್ಯ, ಕಿಟ್ಟಿ ಸಾಲೇಗಾಂವ, ಬಸವರಾಜ ಹೆಡೆ, ಮಿಥನ್‌ ಕೋಚಿ, ಮಾರುತಿ ಕಾಂಬಳೆ ಮತ್ತಿತರರು ಇದ್ದರು. ರಾಜಶೇಖರ ಕಡಗನ ನಿರೂಪಿಸಿದರು, ಬಾಬು ಬೀಳಗಿ ಸ್ವಾಗತಿಸಿದರು, ಹಣಮಂತ ಕಿಣ್ಣಿಸುಲ್ತಾನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next