Advertisement

ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೂ ಸಿದ್ಧ

05:45 PM Nov 04, 2020 | Suhan S |

ವಿಜಯಪುರ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನ ವೇತನ, ಭತ್ಯೆ ಕೊಡಿಸುವಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘ ಸರ್ಕಾರದೊಂದಿಗೆ ನಿರಂತರ ಒತ್ತಡ ಹೇರುತ್ತಿದೆ. ಸರ್ಕಾರ ನೌಕರರ ಬೇಡಿಕೆ ಈಡೇರಿಕೆ ನಿರ್ಲಕ್ಷ್ಯ ಮಾಡಿದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್‌.ಷಡಕ್ಷರಿ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ನೌಕರರ ಸಮಸ್ಯೆ ಕುರಿತ ಚರ್ಚೆ, ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಸಂಘದ ಅಧ್ಯಕ್ಷನಾದ ಒಂದು ವರ್ಷದ ಅವಧಿಯಲ್ಲಿ ಹಲವು ವರ್ಷಗಳ ಬೇಡಿಕೆಯಾಗಿದ್ದ ಸುಮಾರು 20 ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರ ವೇತನ ತಾರತಮ್ಯ, ಸಿ ಆ್ಯಂಡ್‌ ಆರ್‌, ಸಕಾಲಕ್ಕೆ ವೇತನ ಬಡ್ತಿ ನೀಡದಿರುವುದು, ಪ್ರತಿ ತಿಂಗಳು ವೇತನ ನೀಡಿಕೆಯಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದರು.

ರಾಜ್ಯದ ಸರ್ಕಾರಿ ನೌಕರರು ಒಳ-ಹೊರ ರೋಗಿಯಾಗಿ ಸಂಪೂರ್ಣ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲ ಆಗುವಂತೆ ಆರೋಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ. ಸದರಿ ಯೋಜನೆಯಲ್ಲಿ ಎಲ್ಲ ಔಷ ಧ ಇತರೆ ಆರೋಗ್ಯ ಸೇವೆ ಉಚಿತವಾಗಿ ದೊರೆಯಲಿದೆ. ರೋಗಿಗಳಿಗೆ ವಾಹನ ಸೌಲಭ್ಯವೂ ಸಿಗಲಿದೆ. ಇದೆ ಮೊದಲ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ರಾಜ್ಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ ಮಾತನಾಡಿ, ಸಂಘಗಳು ನೌಕರರ ಹಿತ ಕಾಪಾಡಬೇಕು. ಈ ವಿಷಯದಲ್ಲಿ ಸಂಘ ತನ್ನ ಬದ್ಧತೆ ಮೆರೆಯುತ್ತಿದೆ ಎಂದು ವಿವರಿಸಿದರು.

ವಿಜಯಪುರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಸುರೇಶ ಶೇಡಶ್ಯಾಳ ಮಾತನಾಡಿ, ಎನ್‌ಪಿಎಸ್‌ ಎಂಬುದು ವಿಷಮ ಕಳೆ ಇದ್ದಂತೆ. ಹೀಗಾಗಿ ಕೂಡಲೇ ಸರ್ಕಾರ ಎನ್‌ಪಿಎಸ್‌ ರದ್ದುಗೊಳಿಸಲು ರೂಪಿಸಿರುವ ಸಮಿತಿ ವರದಿಯನ್ನು ತುರ್ತಾಗಿ ಜಾರಿಗೆ ತರಬೇಕು ಎಂದರು.

Advertisement

ಆದರ್ಶ ಶಿಕ್ಷಕ ವೇದಿಕೆ ಸಂಚಾಲಕ ಜಗದೀಶ ಬೋಳಸೂರ ಪ್ರಾಸ್ತಾವಿಕ ಮಾತನಾಡಿದರು.ಸದಾಶಿವ ಹಂಚಲಿ ಮಾತನಾಡಿದರು. ಶ್ರೀಶೈಲ ಅಕ್ಷರ, ಮೋಹನ, ಶಂಭುಲಿಂಗನಗೌಡ, ಜುಬೇರ ಕೆರೂರ, ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಉಮೇಶ ಕವಲಗಿ, ರಾಜು ಬಿಸನಾಳ, ಶಿವಾನಂದ ಮಂಗಾನವರ, ಅಶೋಕ ಪಾಟೀಲ, ರಾಘು ಕುಲಕರ್ಣಿ, ಭೀಮನಗೌಡ ಬಿರಾದರ, ಎಸ್‌.ಬಿ.ಬಿರಾದಾರ, ಆರ್‌.ಎನ್‌. ಅಂಗಡಿ, ಎಂ.ಎನ್‌. ಅಂಗಡಿ, ಎಂ.ಎಸ್‌. ಬೂಸಾಗೊಂಡ, ಎಚ್‌.ಎಂ. ಚಿತ್ತರಗಿ, ಬಸವರಾಜ ಬೇವನೂರ, ಎ.ಎಂ. ಬಗಲಿ, ಎಸ್‌. ಎನ್‌. ಪಡಶೆಟ್ಟಿ, ಬಸವರಾಜ ದೊರನಹಳ್ಳಿ, ಎಚ್‌. ಕೆ. ಬೂದಿಹಾಳ, ಚಿನ್ನಯ್ಯ ಮಠಪತಿ, ಸಂತೋಷ ಕುಲಕರ್ಣಿ, ರವೀಂದ್ರ ಉಗಾರ, ಬಸವರಾಜ ಅಮರಪ್ಪಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next