Advertisement

ಸಾತಂತ್ರ್ಯ ಹೋರಾಟಗಾರರ ಸರಣೆ ನಮ್ಮೆಲ್ಲರ ಕರ್ತವ್ಯ

06:30 PM Aug 16, 2021 | Team Udayavani |

ಗದಗ: 75ನೇ ವರ್ಷದ ಸ್ವಾತಂತ್ರ ಅಮೃತಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರÂದಸ್ವತ್ಛಂದ ತಂಗಾಳಿಯಲ್ಲಿ ಜೀವಿಸಲು ಅವಕಾಶಮಾಡಿಕೊಟ್ಟ ದೇಶದ ಸ್ವಾತಂತ್ರÂ ಹೋರಾಟಗಾರರನ್ನುಸ್ಮರಿಸುವುದು, ಕೃತಜ್ಞಾ ಪೂರ್ವಕ ಗೌರವ ನಮನಗಳನ್ನುಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಲೋಕೊಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ನಗರದ ಕೆ.ಎಚ್‌.ಪಾಟೀಲ ಜಿಲ್ಲಾಕ್ರೀಡಾಂಗಣದಲ್ಲಿ ರವಿವಾರ ನಡೆದ ಸ್ವಾತಂತ್ರೊÂತ್ಸವಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರುಮಾತನಾಡಿದರು.ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟ್ಯಾಗೋರ,ಬಂಕಿಮಚಂದ ಚಟರ್ಜಿ ಮುಂತಾದವರ ಮಾತುಹಾಗೂ ಬರಹಗಳಿಂದ ಸ್ವಾತಂತ್ರÂ ಹೋರಾಟಕ್ಕೆ ಸ್ಫೂರ್ತಿದೊರಕಿತು.

1885ರಲ್ಲಿ ದಾದಾ ಬಾಯಿ ನವರೋಜಿ,ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆಅವರಿಂದ ಆರಂಭಗೊಂಡ ನಮ್ಮ ಸ್ವಾತಂತ್ರÂ ಹೋರಾಟಮುಂದೆ ತೀವ್ರ ಸ್ವರೂಪ ಪಡೆಯಿತು. ಮಹಾತ್ಮ ಗಾಂಧಿàಜಿ ಅವರು ಹೋರಾಟಕ್ಕೆ ಒಂದು ಚೌಕಟ್ಟಿನ ಸ್ವರೂಪನೀಡಿದರು.

ಅವರ ನೇತೃತ್ವದಲ್ಲಿ ಅಹಿಂಸೆ, ಸತ್ಯಾಗ್ರಹದಮೂಲಕ ಸ್ವತಂತ್ರÂ ಹೋರಾಟ ಮುಂದೆ ಸಾಗಿ ನೆಹರು,ವಲ್ಲಭಬಾಯಿ ಪಟೇಲ್‌ ಸಾರ್ಯಥದಲ್ಲಿ ಲಕ್ಷಾಂತರಹೋರಾಟಗಾರರ ಅನನ್ಯ ತ್ಯಾಗ, ಬಲಿದಾನ ಹಾಗೂಸಮರ್ಪನೆಯಿಂದಾಗಿ ನಮಗೆ ಸ್ವಾತಂತ್ರÂ ಲಭಿಸಿತುಎಂದರು.ಸ್ವಾತಂತ್ರÂ ಹೋರಾಟದಲ್ಲಿ ಗದಗ ಜಿಲ್ಲೆ ತನ್ನದೇಆದ ಛಾಪು ಮೂಡಿಸಿದೆ.

1857 ರಿಂದಲೇಜಿಲ್ಲೆಯಲ್ಲಿ ಸ್ವಾತಂತ್ರÂ ಹೋರಾಟ ಆರಂಭಗೊಂಡಿತು.ಪ್ರಥಮ ಸ್ವಾತಂತ್ರÂ ಸಂಗ್ರಾಮದಲ್ಲಿ ನರಗುಂದದಬಾಬಾಸಾಹೇಬ, ಭೀಮರಾಯರು, ದೇಶಕ್ಕಾಗಿಪ್ರಾಣಾರ್ಪಣೆ ಮಾಡಿದರು. ಅನಂತರಾವಜಾಲಿಹಾಳ, ಡಾ|ವೆಂಕಟರಾವ ಹುಯಿಲಗೋಳ,ಡಾ|ವಾಸುದೇವರಾಯ ಉಮಚಗಿ, ಅಂದಾನೆಪ್ಪದೊಡ್ಡಮೇಟಿ, ಕೇಶರವಾ ಕುಲಕರ್ಣಿ ಸೇರಿದಂತೆಮುಂತಾದವರು ಸ್ವಾತಂತ್ರÂ ಸಂಗ್ರಾಮದಲ್ಲಿ ತಮ್ಮದೇಆದಂತಹ ಕೊಡುಗೆ ನೀಡಿದ್ದಾರೆ ಎಂದು ತ್ಯಾಗ,ಬಲಿದಾನವನ್ನು ಸ್ಮರಿಸಿದರು.

Advertisement

ಕೋವಿಡ್‌ ಕರಾಳ ಛಾಯೆಯಲ್ಲೂ ರಾಜ್ಯಅಭಿವೃದ್ಧಿಯತ್ತ ಸಾಗುತ್ತಿದ್ದು, ಜಿಲ್ಲೆಯಲ್ಲಿಲೋಕಪಯೋಗಿ ಇಲಾಖೆ ಮೂಲಕ 2020-21ನೇಸಾಲಿನಲ್ಲಿ 135 ಕೋಟಿ ರೂ. ವೆಚ್ಚದಲ್ಲಿ 105ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.24 ಗ್ರಾಮೀಣ ಪ್ರದೇಶದ 279 ಕಿ.ಮೀ. ಜಿಲ್ಲಾಮುಖ್ಯ ರಸ್ತೆಗಳಾಗಿ ಮೇಲ್ದರ್ಜೆಗೇರಿಸಿದೆ. ತಜ್ಞರಅಭಿಪ್ರಾಯದಂತೆ ಸಂಭವನೀಯ ಮೂರನೇ ಅಲೆಮಕ್ಕಳಿಗೆ ಬಾ ಧಿಸುವ ಭೀತಿ ಇರುವುದರಿಂದಾಗಿಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿರುವ 243ತೀವ್ರ ಅಪೌಷ್ಟಿಕ ಮಕ್ಕಳ ಸುಧಾರಣೆಗಾಗಿ 14 ದಿನಗಳವಿಶೇಷ ಶಿಬಿರಗಳನ್ನು ಆರು ತಾಲೂಕು ಕೇಂದ್ರದಲ್ಲಿಆಯೋಜಿಸಿ 3 ಲಕ್ಷ ರೂ. ವೆಚ್ಚದಲ್ಲಿ ಎಲ್ಲ ಮಕ್ಕಳಿಗೂರೋಗ ನಿರೋಧಕ ಶಕ್ತಿ ವೃದ್ಧಿಸುವ ಇನ್‌ಫೊÉಯೆಂಜಾಲಸಿಕೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಎಚ್‌.ಕೆ.ಪಾಟೀಲ,ವಿಧಾನ ಪರಿಷತ ಸದಸ್ಯ ಎಸ್‌.ವಿ.ಸಂಕನೂರ,ದ್ರಾûಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ,ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾ ಧಿಕಾರದಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಧಿಕಾರಿಎಂ.ಸುಂದರೇಶ್‌ ಬಾಬು, ಜಿಪಂ ಸಿಇಒ ಭರತಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಯತೀಶ್‌ಎನ್‌., ಉಪ ಅರಣ್ಯ ಸಂರಕ್ಷಣಾ ಧಿಕಾರಿ ದೀಪಿಕಾಬಾಜಪೇಯಿ, ಅಪರ ಜಿಲ್ಲಾ ಧಿಕಾರಿ ಸತೀಶ್‌ಕುಮಾರಎಂ., ಉಪ ವಿಭಾಗಾಧಿ ಕಾರಿ ರಾಯಪ್ಪ ಹುಣಸಗಿ,ತಹಶೀಲ್ದಾರ್‌ ಕಿಶನ ಕಲಾಳ, ಸೇರಿದಂತೆ ಗಣ್ಯರು,ಸಾರ್ವಜನಿಕರು, ವಿವಿಧ ಇಲಾಖೆ ಅ ಧಿಕಾರಿ, ಸಿಬ್ಬಂದಿಉಪಸ್ಥಿತರಿದ್ದರು. ವೆಂಕಟೇಶ ಅಲ್ಕೋಡ ಹಾಗೂಸಂಗಡದವರು ನಾಡಗೀತೆ ಪ್ರಚುರ ಪಡಿಸಿದರು.ದತ್ತಪ್ರಸನ್‌ ಪಾಟೀಲ ಹಾಗೂ ಮಂಜರಿ ಹೊಂಬಾಳಿಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next