Advertisement

ಡಿ.ಕೆ.ಬ್ರದರ್‌ ಸೋಲಿಸಲು ಯೋಗೇಶ್ವರ್‌ ಬರ್ತಾರಾ?

01:00 AM Mar 11, 2019 | |

ರಾಮನಗರ: ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿ ಜೆಡಿಎಸ್‌-ಕಾಂಗ್ರೆಸ್‌-ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಆದರೆ, ರಾಜ್ಯದಲ್ಲಿನ ಮೈತ್ರಿ ರಾಜಕಾರಣದಿಂದಾಗಿ ಕ್ಷೇತ್ರದಲ್ಲೀಗ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಈ ಹಿಂದೆ ಬದ್ದ ವೈರಿಗಳಾಗಿದ್ದ ಎಚ್‌. ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‌ ಇಂದು ಆಪ್ತಮಿತ್ರರಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಿಗೆ ಬಿಜೆಪಿ ಈಗ ಕಾಮನ್‌ ಎನಿಮಿ. ರಾಜ್ಯ ರಾಜಕಾರಣದಲ್ಲಿ ಸದ್ಯ ಅತ್ಯಂತ ಪ್ರಭಾವಿ ಸಹೋದರರಾಗಿರುವ ಡಿ.ಕೆ.ಬ್ರದರ್ ಮುಷ್ಠಿಯಲ್ಲಿರುವ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್‌ ಮತ್ತೆ ಕಣಕ್ಕಿಳಿಯಲಿ ದ್ದಾರೆ. ಸದರಿ ಕ್ಷೇತ್ರದಲ್ಲೊಮ್ಮೆ ಗೆಲುವು ಸಾಧಿಸಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಯಲ್ಲಿದೆ. ಕ್ಷೇತ್ರದಲ್ಲಿ ಸಂಚರಿಸಿ, ಜನ ಸಾಮಾನ್ಯರೊಂದಿಗೆ ಬೆರೆತು, ನೆಲಗಟ್ಟಿ ಮಾಡಿಕೊಂಡಿ ರುವ ಡಿ.ಕೆ.ಸುರೇಶ್‌ ಅವರನ್ನು ಮಣಿಸಲು ಬಿಜೆಪಿ ಅತ್ಯಂತ ಎಚ್ಚರಿಕೆ ಯಿಂದ ಹೆಜ್ಜೆ ಇಡುತ್ತಿದೆ. ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬಿಜೆಪಿಯಿಂದ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌, ಮಾಜಿ ಸಿಎಂಗಳಾದ ಆರ್‌. ಅಶೋಕ್‌, ಸದಾನಂದಗೌಡ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಹೆಸರುಗಳು ಚಾಲ್ತಿಯಲ್ಲಿವೆ.

ಜಾತಿಯೇ ನಿರ್ಣಾಯಕ
2014ರ ಉಪಚುನಾವಣೆಯಲ್ಲಿ ಗೆದ್ದು ಬಂದ ಡಿ.ಕೆ.ಸುರೇಶ್‌ ಅವರದು ಇಡೀ ಕ್ಷೇತ್ರ ದಲ್ಲಿ ಪರಿಚ ಯದ ಮುಖ. ಕಳೆದ ಚುನಾವಣೆ ಯಲ್ಲಿ ಜೆಡಿಎಸ್‌ನ ಪ್ರಭಾಕರ ರೆಡ್ಡಿ, ಬಿಜೆಪಿಯ ಮುನಿ ರಾಜು ಗೌಡ, ಆಮ್‌ ಆದ್ಮಿಯ ರವಿಕೃಷ್ಣಾರೆಡ್ಡಿ ವಿರುದ್ಧ  ಸ್ಪರ್ಧಿಸಿ, ಶೇ.45ರಷ್ಟು ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕಳೆದ ಬಾರಿಯೂ ಜಾತಿಯೇ ನಿರ್ಣಾಯಕವಾಗಿತ್ತು. ಈ ಬಾರಿಯೂ ಜಾತಿ ವಿಚಾರವೇ ನಿರ್ಣಾಯಕವಾಗಲಿದೆ. ರಾಮ ನಗರ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬ ಲ್ಯವಿದೆ. ಹೀಗಾಗಿ, ಡಿ.ಕೆ.ಸುರೇಶ್‌ ಅವರು ಜಿಲ್ಲೆಯಲ್ಲಿ ಗರಿಷ್ಠ ಮತ ಗಳನ್ನು ಗಳಿಸುವ ತಂತ್ರ ಹೂಡಲಿ ದ್ದಾರೆ. ಇನ್ನು, ರಾಜ್ಯದಲ್ಲಿ ರಾಮ ನಗರ ಜಿಲ್ಲೆ ನರೇಗಾ ಯೋಜ ನೆಯಡಿಯಲ್ಲಿ ಅಂಕಿ-ಅಂಶಗಳಲ್ಲಿ ಮುಂಚೂಣಿ ಯಲ್ಲಿದ್ದು, ಇದು ಸಂಸದರಿಗೆ ಪ್ಲಸ್‌ ಪಾಯಿಂಟ್‌. ಇನ್ನು, ವಿಧಾನಸಭಾ ಚುನಾ ವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದ ಡಿ.ಕೆ.ಬ್ರದರ್ ಮತ್ತು ಎಚ್‌. ಡಿ.ಕುಮಾರಸ್ವಾಮಿ ವಿರುದ್ಧ  ರಾಜಕೀಯ ಸೇಡು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಸಿ.ಪಿ.ಯೋಗೇಶ್ವರ್‌, ತಮ್ಮದೇ ಆದ ತಂತ್ರಗಳನ್ನು ಹೆಣೆಯಲಿದ್ದಾರೆ.

ಮೈತ್ರಿ ತೆಕ್ಕೆಯಲ್ಲಿದೆ 7 ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್‌ ವಿಧಾನಸಭಾ ಕ್ಷೇತ್ರಗಳು ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ಮತದಾರರಿದ್ದು, ಒಕ್ಕಲಿಗರದೆ ಪ್ರಾಬಲ್ಯ. 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಯಲ್ಲಿ, 3 ಕ್ಷೇತ್ರಗಳು ಜೆಡಿಎಸ್‌ ತೆಕ್ಕೆಯಲ್ಲಿ ಮತ್ತು ಒಂದು ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next