Advertisement
ಐಟಿ ಕನ್ನಡಿಗರ ಒಕ್ಕೂಟ ಗುರುವಾರ ಆಯೋಜಿಸಿದ್ದ “ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, “ಒಂದು ದೇಶ, ಒಂದೇ ಭಾಷೆ ಹೆಸರಿನಲ್ಲಿ ಹಿಂದೂ ರಾಷ್ಟ್ರ ಮಾಡಲು ಬಿಜೆಪಿ ಹೊರಟಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವ ಯಾವುದೇ ಕಾರ್ಯಚಟುವಟಿಕೆ ವಿರುದ್ಧ ನಾನು ಹೋರಾಡುತ್ತೇನೆ. ಜಾತಿ ರಾಜಕಾರಣ ನಮ್ಮಲ್ಲಿ ಹೆಚ್ಚುತ್ತಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ಮೆಟ್ಟಿ ನಿಲ್ಲಬೇಕು,’ ಎಂದರು.
Related Articles
Advertisement
“ಇತ್ತೀಚಿನ ದಿನಗಳಲ್ಲಿ ಶಾಸಕರು, ಸಚಿವರುಗಳಿಗೆ ನೂತನ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯೂ ಇರುವುದಿಲ್ಲ. ಯೋಜನೆಗಳನ್ನು ಸಂಕ್ಷಿಪ್ತವಾಗಿ ಅಭ್ಯಾಸ ಮಾಡುವ ಯಾವುದೇ ಗೋಜಿಗೆ ಅವರು ಹೋಗದೆ, ಕಡತಗಳು ತಮ್ಮ ಬಳಿಗೆ ಬಂದಾಗ ಪರಿಶೀಲಿಸಿ ತೀರ್ಮಾನಿಸಬಹುದು ಎಂದು ಬರೆದು ಕೈತೊಳೆದುಕೊಳ್ಳುತ್ತಾರೆ. ಪ್ರಸ್ತುತ ಸಹಿ ಹಾಕಲು ಬಂದರೆ ಸಾಕು ಮಂತ್ರಿಯಾಗಬಹುದು ಎಂಬ ಸ್ಥಿತಿ ಇದೆ. ವಿಧಾನಸೌಧ, ವಿಕಾಸಸೌಧದಲ್ಲಿ ಕನ್ನಡವೇ ಮರೆಯಾಗುತ್ತಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.
ಅನ್ಯಾಯದ ಪಟ್ಟಿ ನನ್ನ ಬಳಿ ಇದೆ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಸಂದಿರುವ ನ್ಯಾಯ ಕುರಿತು ವಿಚಾರ ಮಂಡಿಸಿದ ಶಾಸಕ ವೈಎಸ್‌ವಿ ದತ್ತ, “ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ನ್ಯಾಯದ ಬಗ್ಗೆ ಹುಡುಕಾಡಿದರು ಒಂದೂ ಸಿಗಲಿಲ್ಲ. ಆದರೆ, ಸುಮಾರು 50ಕ್ಕೂ ಹೆಚ್ಚು ಅನ್ಯಾಯಗಳ ಪಟ್ಟಿಯೇ ನನ್ನ ಬಳಿಯಲ್ಲಿದೆ,’ ಎಂದು ಹೇಳಿದರು.
ಹಿಂದಿ ಹೇರಿಕೆ ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮದ ಕುರಿತು ಮಾತನಾಡಿದ ಪತ್ರಕರ್ತ ಎನ್.ಎ.ಎಮ್.ಇಸ್ಮಾಯಿಲ್, “ಹಿಂದಿಯನ್ನು ಸಾಂಸ್ಕೃತಿಕವಾಗಿ ಹೆದರಿಸುವುದಲ್ಲ. ಒಂದು ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಹೆದರಿಸುವ ಅಗತ್ಯವಿದೆ. ಈ ಮೂಡಲ ರಾಜ್ಯದ ಮಾತೃಭಾಷಾ ಉಳಿವಿಗೆ ಪ್ರಾದೇಶಿಕ ಪಕ್ಷದಿಂದಲೇ ಸಾಧ್ಯ,’ ಎಂದರು.
ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡ ಎಚ್ಡಿಡಿಬೆಂಗಳೂರು: ಎಂಬತ್ತೈದನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹುಟ್ಟುಹಬ್ಬದ ದಿನ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ದೇವೇಗೌಡರು ನಂತರ ನಗರಕ್ಕೆ ಆಗಮಿಸಿ ಅಭಿಮಾನಿಗಳು ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪಕ್ಷದ ಸಂಸದರು, ಶಾಸಕರು, ಮುಖಂಡರು, ಕಾರ್ಯರ್ತರು ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬರ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ನನ್ನ ಹುಟ್ಟುಹಬ್ಬ ಸರಳವಾಗಿ ಆಚರಿಸಲು ಮನವಿ ಮಾಡಿದ್ದೆ. 40 ವರ್ಷಗಳಿಂದ ಹುಟ್ಟುಹಬ್ಬದಂದು ತಿರುಪತಿ ವೆಂಕಟೇಶ್ವರನ ದರ್ಶನ ಮಾಡುತ್ತಿದ್ದೇನೆ. ರಾಜ್ಯ, ದೇಶದಲ್ಲಿ ಸನ್ನಿವೇಶ ಸರಿಯಿಲ್ಲ. ಇದನ್ನು ಸರಿಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ನನ್ನ ಹುಟ್ಟುಹಬ್ಬದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ. ಅಧಿಕಾರ ಕಳೆದುಕೊಂಡ ಮೇಲೂ ಇಷ್ಟು ಪ್ರೀತಿ ತೋರುತ್ತಿದ್ದಾರೆ. ಇದಕ್ಕೆ ಧನ್ಯವಾದ ಎಂದರು. ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ: ರಾಷ್ಟ್ರಪತಿ, ಪ್ರಧಾನಿಯವರು ಪತ್ರ ಬರೆದು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು. ಅಪ್ಪಾಜಿ ಕ್ಯಾಂಟೀನ್ ಅಧಿಕೃತ ಘೋಷಣೆ: ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಬಸವನಗುಡಿಯಲ್ಲಿ “ನಮ್ಮ ಅಪ್ಪಾಜಿ ಕ್ಯಾಂಟೀನ್’ ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದರು. ತಿಂಗಳಲ್ಲಿ ಈ ಕ್ಯಾಂಟೀನ್ ಪ್ರಾರಂಭವಾಗಲಿದ್ದು 5 ರೂ.ಗೆ ತಿಂಡಿ, 10 ರೂ.ಗೆ ಊಟ ದೊರೆಯಲಿದೆ.