Advertisement
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಧರಣಿ ನೇತೃತ್ವವಹಿಸಿರುವ ನವಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್ ಮಾತನಾಡಿ, ಬಿಬಿಎಂಪಿ ಕಸ ಇಲ್ಲಿಗೆ ಬರದಂತೆ 10 ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದವರನ್ನು ಪೊಲೀಸರು ಬಲಪ್ರಯೋಗ ನಡೆಸುವ ಮೂಲಕಶನಿವಾರ ಬಂಧಿಸಿರುವುದು ತೀವ್ರ ಖಂಡನೀಯ. ಆದರೂ, ನಾವು ಕೋವಿಡ್‌ನಿಯಮದಂತೆ ಹೆಚ್ಚು ಜನ ಸೇರದೇಭಾನುವಾರ ಕಸ ವಿಲೇವಾರಿ ಘಟಕದರಸ್ತೆಯುದ್ದಕ್ಕು ವಿವಿಧೆಡೆಗಳಲ್ಲಿ ಐದಾರು ಜನರು ಮಾತ್ರ ಕುಳಿತು ಧರಣಿ ನಡೆಸಲಾಗಿದೆ.
Related Articles
Advertisement
ಶಾಸಕರು ಬಿಡಿಸಿಲ್ಲ: ಧರಣಿಯಲ್ಲಿ ಭಾಗವಹಿಸಿದ್ದವರನ್ನು ಶನಿವಾರಪೊಲೀಸರು ಬಂಧಿಸಿದಾಗ ಶಾಸಕರು ನಮ್ಮನ್ನು ಬಿಡಿಸಿಲ್ಲ. 10 ದಿನ ಧರಣಿಕುಳಿತಿತ್ತಿದ್ರು ಒಮ್ಮೆಯು ಭೇಟಿ ಮಾಡದ ಶಾಸಕರು ಬಂಧಿತರನ್ನು ಬಿಡಿಸಿದ್ದು ನಾನೆ,ಧರಣಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿರುವುದಕ್ಕೆ ಅರ್ಥವಿಲ್ಲ ಎಂದರು.
ಕಸ ತಂದು ರಾಶಿ ಹಾಕುವ ಮೂಲಕ ಜನರ ಆರೋಗ್ಯ.ಇಲ್ಲಿನ ಪರಿಸರವನ್ನುಹಾಳು ಮಾಡುತ್ತಿರುವ ಬಿಬಿಎಂಪಿ ಈ ಭಾಗದ ಗ್ರಾಮಗಳ ಅಭಿವೃದ್ಧಿಗೆಅನುದಾನ ನೀಡಿತ್ತು. ಈ ಅನುದಾನಬಳಕೆಯಲ್ಲೂ ಅವ್ಯವಹಾರ ನಡೆದಿದೆ. ನಮಗೆ ಅನುದಾನವು ಬೇಡ, ಬಿಬಿಎಂಪಿ ಕಸ ಇಲ್ಲಿಗೆ ಬರುವುದೇ ಬೇಕಿಲ್ಲ ಎಂದರು.
ಬಂಧನ ಬಿಡುಗಡೆ: ಧರಣಿಯ ಮುಂದಾಳತ್ವವಹಿಸಿದ್ದ ಭಕ್ತರಹಳ್ಳಿ ಗ್ರಾಪಂಅಧ್ಯಕ್ಷ ಸಿದ್ದಲಿಂಗಪ್ಪ, ಸದಸ್ಯ ಗಂಗಹನುಮಯ್ಯ, ರೈತ ರಂಗಪ್ಪ ಅವರನ್ನುಬೆಳಿಗ್ಗೆಯೇ ಬಂಧಿಸಿ ನಗರದ ಪೊಲೀಸ್ ಠಾಣೆಯಲ್ಲಿಟ್ಟಿದ್ದರು. ಬಂಧಿತರನ್ನು ಬಿಡಿಸಿಕೊಳ್ಳಲು ಬಂದ ಕೆ.ವಿ. ಸತ್ಯಪ್ರಕಾಶ್, ಜಿ.ಎನ್. ಪ್ರದೀಪ್ ಅವರನ್ನು ಸಂಜೆ ಬಂಧಿಸಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಕರೆದೊಯ್ದು ಪಿಟ್ಟಿ ಕೇಸ್ ದಾಖಲಿಸುವ ಮೂಲಕ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಭೇಟಿಮಾಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಸಿಎಂಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.