ನವ ದೆಹಲಿ: ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿವೆ. ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಹಂತ ಹಂತವಾಗಿ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಕೇಂದ್ರ(ಫಿಕ್ಕಿ) ಸರ್ಕಾರಕ್ಕೆ ಆಗ್ರಹಿಸಿದೆ.
ಇದನ್ನೂ ಓದಿ : ಸರ್ಕಾರ ಎಲ್ಲ ವರ್ಗಗಳ ಬೆನ್ನೆಲುಬಾಗಿ ನಿಂತಿದೆ : ಸಚಿವ ಪ್ರಭು ಚವ್ಹಾಣ್
ನಿರ್ಬಂಧಗಳನ್ನು ಜಾರಿಗೆ ತರಲು ಬಹಳ ಸಮಯ ಕಾಯುವುದರ ಪರಿಣಾಮವಾಗಿ, ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಅದು ವೈದ್ಯಕೀಯ ಮೂಲಸೌಕರ್ಯದ ಮೇಲೆ ತೀವ್ರ ಒತ್ತಡ ಸೃಷ್ಟಿಸಬಹುದು ಎಂಬುದನ್ನು ಎರಡನೆಯ ಅಲೆಯು ತೋರಿಸಿಕೊಟ್ಟಿದೆ ಎಂದು ಒಕ್ಕೂಟವು ಹೇಳಿದೆ.
ಪತ್ರದ ಮೂಲಕ ಸಲಹೆ ನೀಡಿದ ಒಕ್ಕೂಟ, ಜೀವ ಮತ್ತು ಜೀವನೋಪಾಯದ ನಡುವೆ ಸಮತೋಲನ ಕಾಯ್ದುಕೊಂಡು, ಆರ್ಥಿಕ ಚಟುವಟಿಕೆಗಳನ್ನು ಹಂತ ಹಂತವಾಗಿ ಆರಂಭಿಸುವ ಸಲಹೆಯನ್ನು ನಾವು ಮುಂದಿಡುತ್ತಿದ್ದೇವೆ’ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರಿಗೆ ಹೇಳಿದೆ. ಕನಿಷ್ಠ ಶೇಕಡ 60ರಷ್ಟು ಕಾರ್ಮಿಕರಿಗೆ ಒಂದು ಡೋಸ್ ಲಸಿಕೆ ಹಾಕಿಸಿರುವ ಉದ್ದಿಮೆಗಳನ್ನು ನಿರ್ಬಂಧಗಳಿಂದ ತೆರವುಗೊಳಿಸಬೇಕು ಎಂದು ಕೂಡ ಆಗ್ರಹಿಸಿದೆ.
ಇದನ್ನೂ ಓದಿ : ರೈತರಿಗೆ ವಿತರಿಸಲು ಸಂಗ್ರಹಿಸಿದ್ದ ಬಿತ್ತನೆ ಬೀಜದಲ್ಲಿ ಕಲಬೆರಕೆ: ಶಾಸಕ ಪರಣ್ಣ ಗರಂ