ಲಕ್ನೋ: ಮದುವೆ ದಿಬ್ಬಣದ ಮೆರವಣಿಗೆ ವೇಳೆ ಗಂಡಿನ ಕಡೆಯವರು ಕಂತೆ ಕಂತೆ ಹಣದ ಹೊಳೆಯನ್ನೇ ಗಾಳಿಯಲ್ಲಿ ಎಸೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಫ್ಜಲ್ ಮತ್ತು ಅರ್ಮಾನ್ ಎನ್ನುವವರ ಮದುವೆಯಲ್ಲಿ ಈ ರೀತಿ ಅತಿಥಿಗಳು ನೋಟಿನ ಕಂತೆಯನ್ನೇ ಗಾಳಿಯಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
ವರನ ಕಡೆಯಿಂದ ಬಂದ ಅತಿಥಿಗಳು ಮದುವೆಯ ಮೆರವಣಿಗೆಯಲ್ಲಿ 100, 200 ಹಾಗೂ 500 ರೂಪಾಯಿ ನೋಟಿನ ಕಂತೆಯನ್ನು ಎಸೆದಿದ್ದಾರೆ. ಜೆಸಬಿಯಲ್ಲಿ ನಿಂತು, ಮನೆಯ ಟೆರೇಸ್ ಮೇಲೆ ಹತ್ತಿ ತಮ್ಮಿಷ್ಟದಂತೆ ಎಲ್ಲ ಕಡೆ ನೋಟುಗಳನ್ನು ಎಸೆದಿದ್ದಾರೆ. ಒಟ್ಟು 20 ಲಕ್ಷ ರೂಪಾಯಿಯನ್ನು ಈ ರೀತಿಯಾಗಿ ಎಸೆದಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಘಟನೆಯ ದಿನಾಂಕ ಮಾತ್ರ ತಿಳಿದುಬಂದಿಲ್ಲ. ಅದಲ್ಲದೆ ಈ ನೋಟುಗಳು, ಅಸಲಿಯೋ, ನಕಲಿಯೋ ಎನ್ನುವುದು ತಿಳಿದುಬಂದಿಲ್ಲ.
ನೆಟ್ಟಿಗರು ಈ ಬಗ್ಗೆ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. “”ಸಹೋದರ ಈ ರೀತಿ ಹಣವನ್ನು ಎಸೆಯುವ ಬದಲು ಬಡವರಿಗೆ ಹಂಚು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
“ಇಷ್ಟು ಹಣದಲ್ಲಿ ನಾಲ್ವರು ಬಡ ಹುಡುಗಿಯರಿಗೆ ಮದುವೆ ಮಾಡಬಹುದಿತ್ತು” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.