Advertisement
ಸಾಂಪ್ರದಾಯಿಕ ಆಚರಣೆಯಲ್ಲೊಂದಾದ ಹೋಳಿ ಹಬ್ಬದ ಸಂದರ್ಭದಲ್ಲಿ ಕೇಳಬಹುದಾಗಿದ್ದ ಹಲಿಗೆ ನಿನಾದ ಮರೆಯಾಗಿದೆ. ಫೈಬರ್ ನಿರ್ಮಿತ ಹಲಿಗೆಯ ಬಡಿತ ಎಲ್ಲೆಡೆ ಕೇಳುತ್ತಿತ್ತು. ಮನಸ್ಸಿಗೆ ಮುದ ನೀಡುವ ಬದಲಾಗಿದೆ. ತಲೆನೋವು ತರುವಂತಾಗಿದ್ದು ಇದು ಆಧುನೀಕರಣ ತಂದ ಅದ್ವಾನಗಳಲ್ಲೊಂದಾಗಿದೆ.
ಆದರೆ, ಈಗ ಕಾಲ ಬದಲಾಗಿದೆ. ಈಗಲೂ ಹೋಳಿ ಬಂತೆಂದರೆ ಓಣಿ ಓಣಿಗಳಲ್ಲಿ ಚಿಕ್ಕಮಕ್ಕಳಾದಿಯಾಗಿ ದೊಡ್ಡವರವರೆಗೂ ಹಲಿಗೆ ಹಿಡಿದು ಬಡಬಡ ಬಡಿಯುತ್ತಿರುತ್ತಾರೆ. ಅವರು ಎಷ್ಟೇ ಬಡಿದರೂ ಅಲ್ಲಿಂದ ಹೊರಹೊಮ್ಮುವುದು ತರಂಗಗಳನ್ನೊಳಗೊಂಡ ಇಂಪಾದ ಶಬ್ಧವಂತೂ ಅಲ್ಲ.
ಆಧುನಿಕ ಸಮಾಜಕ್ಕೆ ಲಗ್ಗೆ ಇಟ್ಟಿರುವ ಫೈಬರ್ ಹಲಿಗೆಗಳ ಕರ್ಕಶ ಶಬ್ಧದ ಎದುರು ತರಂಗಗಳ ಸುಲಲಿತ ಶಬ್ಧ ಹೊರಹೊಮ್ಮಿಸುವ ಚರ್ಮದ ಹಲಿಗೆಗಳು ಕಾಲ್ಕಿತ್ತಿವೆ. ಹೀಗಾಗಿ ಹೋಳಿ ಎಂದರೆ ಅನೇಕರಿಗೆ ಕರ್ಕಶ ಶಬ್ಧ ಕೇಳುವ ಹಿಂಸೆ ಅನುಭವ ಆಗುತ್ತದೆ. ಹೋಳಿ ಹಬ್ಬದಲ್ಲಿ ಓಕುಳಿಗೆ ಮೆರಗು ನೀಡುವ ಚರ್ಮದ ಹಲಿಗೆಯ ತಾಳಕ್ಕೆ ಹುಲಿವೇಷ, ಇತರ ಮುಖವಾಡ ಧರಿ ಕುಣಿಯುವುದು ವಾಡಿಕೆ. ಹಿಂದಿನ ಕಾಲದಲ್ಲಿ ಅಹೋರಾತ್ರಿ ಹಲಿಗೆಯನ್ನು ಬಾರಿಸುವ ಸ್ಪರ್ಧೆ, ಹೋಳಿ ಹಬ್ಬದ ಪದ ಹೇಳುವ ಸ್ಪರ್ಧೆ ನಡೆಯುತ್ತಿದ್ದವು. ಆಧುನಿಕತೆ ಬಿರುಗಾಳಿಗೆ ಸಿಲುಕಿ ಫೈಬರ್ ಹಲಿಗೆ ಭರಾಟೆಯಲ್ಲಿ ಸ್ಪರ್ಧೆ ಏರ್ಪಡಿಸಿದರೂ ಅದನ್ನು ಕೇಳುವ ಗಟ್ಟಿ ಕಿವಿಯ ಜನರೇ ಇಲ್ಲದಂತಾಗಿದೆ.
ಫೈಬರ್ ಹಲಿಗೆ ಹಾವಳಿ: ಕಳೆದ 4-5 ವರ್ಷಗಳಿಂದ ಮಾರುಕಟ್ಟೆಗೆ ಮಹಾರಾಷ್ಟ್ರ, ಬೆಳಗಾವಿ, ಮಿರಜ್ ಹಾಗೂ ಸಾಂಗ್ಲಿಯ ಫೈಬರ್ ಹಲಿಗೆ ಲಗ್ಗೆ ಇಟ್ಟಿವೆ. ನೋಡಲು ಬಿಳಿಯ ಸುಂದರಿಯಂತೆ ಕಾಣುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿವೆ. ಆದರೆ, ಅದನ್ನು ಬಾರಿಸಿದಾಗ ಹೊರ-ಹೊಮ್ಮುವ ಕರ್ಕಶ ಶಬ್ಧ ಕರ್ಣಗಳಿಗೆ ಸುಡು ಎಣ್ಣೆ ಹಾಕಿದಂತಾಗುತ್ತದೆ. ಆದರೂ ಕಡಿಮೆ ಬೆಲೆ, ನಿರ್ವಹಣೆ ಇಲ್ಲದ ಸುಲಭ ಮಾರ್ಗಿಗಳಿಗೆ ಫೈಬರ್ ಹಲಿಗೆ ಹೆಚ್ಚು ಆಕರ್ಷಿಸುತ್ತಿವೆ.
Related Articles
Advertisement
ಕಾಲಚಕ್ರದ ಸುಳಿಗೆ ಸಿಲುಕಿ ಫೈಬರ್ ಹಲಿಗೆಯಿಂದ ವಂಶಪರಂಪರೆ ಚರ್ಮದ ತಯಾರಿಸುವ ಕುಲಕಸಬು ನಂಬಿದವರ ಬದುಕು ಬೀದಿಗೆ ಬಂದಿದೆ. ಫೈಬರ್ ಹಲಿಗೆ ಮೇಲಿನ ವ್ಯಾಮೋಹ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಚರ್ಮದ ಹಲಿಗೆಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವ ಪ್ರಸಂಗ ಬಂದರೂ ಆಶ್ಚರ್ಯಪಡಬೇಕಿಲ್ಲ ಚರ್ಮದ ಹಲಿಗೆ ಕೇಳುವವರೇ ಇಲ್ಲ ಚರ್ಮದ ಹಲಿಗೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕಾಯಿಸಬೇಕು. ಹದಗೊಳಿಸಿ ಬಡಿತ ಬಡಿಯಬೇಕು. ಇಷ್ಟೆಲ್ಲತೊಂದರೆ ಇಲ್ಲದ ಫೈಬರ್ ಹಲಿಗೆ ಕಡೆ ಜನರು ವಾಲಿದ್ದರಿಂದ ಚರ್ಮದ ಹಲಿಗೆ ಕೇಳುವವರೇ ಇಲ್ಲದಂತಾಗಿದೆ. 8-10 ವರ್ಷಗಳ ಹಿಂದೆ ಮೊದಲು ಪ್ರತಿ ಹಬ್ಬಕ್ಕೆ ಸಣ್ಣ ಹಾಗೂ ದೊಡ್ಡ ಹಲಿಗೆ ಸೇರಿ 500ಕ್ಕೂ ಹೆಚ್ಚು ಹಲಿಗೆ ಮಾರಾಟ ಮಾಡುತ್ತಿದ್ದೇವು. ಈಗ ವ್ಯಾಪಾರ, ತಯಾರಿಕೆ ಎರಡೂ ನಿಂತಿದೆ.
ಚನ್ನಯ್ಯ, ಚರ್ಮದ ಹಲಿಗೆ ತಯಾರಕ. ಎಚ್.ಕೆ. ನಟರಾಜ