ಬಾಗಲಕೋಟೆ: ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಜೋಡೆತ್ತಿನ ಬಂಡಿ ಒಂದು ನಿಮಿಷದ ಓಟದ ಸ್ಪಧೆಯಲ್ಲಿ ಜಾಲಕಟ್ಟಿಯ ಶ್ರೀ ಲಕ್ಷ್ಮೀದೇವಿ ಜೋಡೆತ್ತಿನ ಬಂಡಿ ಪ್ರಥಮ ಬಹುಮಾನ ಗಳಿಸಿತು. ನಗರದ ರೇಲ್ವೆ ಗೇಟ್ ಹತ್ತಿರದ ಹಳೇ ಹೊಲ್ದೂರ ಕ್ರಾಸ್‌ದಲ್ಲಿ ನಡೆದ ಜೋಡೆತ್ತಿನ ಬಂಡಿ ಸ್ಪರ್ಧೆಗೆ ಶಾಸಕ ಡಾ| ವೀರಣ್ಣ ಚರಂತಿಮಠ ಅವರು ಚಾಲನೆ ನೀಡಿದರು. ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಜೋಡೆತ್ತಿನ
ಬಂಡಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತವಾದ ಜಾಲಕಟ್ಟಿಯ ಶ್ರೀ ಲಕ್ಷ್ಮೀದೇವಿ ಜೋಡೆತ್ತಿನ ಬಂಡಿ ಪ್ರಥಮ ಬಹುಮಾನ 10,001 ರೂ., ನಾಗರಾಳದ ಶ್ರೀ ಮಹಾಲಿಂಗೇಶ್ವರ ಜೋಡೆತ್ತಿನ ಬಂಡಿಗೆ ದ್ವಿತೀಯ ಬಹುಮಾನ 7501, ಚಿತ್ರಭಾನುಕೋಟೆಯ ಶ್ರೀ ಕ್ಷ್ಮೀದೇವಿ ಜೋಡೆತ್ತಿನ ಬಂಡಿಗೆ ತೃತೀಯ ಬಹುಮಾನ 5001 ಹಾಗೂ ಕುಲ್ಲೂರದ ಶ್ರೀ ಶಿವಯೋಗೀಶ್ವರ ಜೋಡೆತ್ತಿನ ಬಂಡಿ ನಾಲ್ಕನೇ ಬಹುಮಾನ 2001 ರೂ. ನೀಡಲಾಯಿತು.
ಜೋಡೆತ್ತಿನ ಬಂಡಿ ಸ್ಪರ್ಧೆಗೂ ಮುನ್ನ ಬೆಳಗ್ಗೆ ಕಿಲ್ಲೆಯ ಶ್ರೀ ದ್ಯಾಮವ್ವ-ಶ್ರೀ ದುರ್ಗವ್ವ ದೇವಸ್ಥಾನದಲ್ಲಿ ಶಾಸಕ ಡಾ| ವೀರಣ್ಣ ಚರಂತಿಮಠ ಅವರು ದೇವರ ದರ್ಶನ ಪಡೆದು ಗೋ ಮಾತೆಗೆ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಅಧ್ಯಕ್ಷ ಬಂಡೇರಾವ್ ಸರ್‌ದೇಸಾಯಿ, ಸಂಗಯ್ಯ ಸರಗಣಾಚಾರಿ, ಸದಸ್ಯರಾದ ಸುರೇಶ ಕುದರಿಕಾರ, ಸದಾನಂದ ನಾರಾ, ಕಾಂತು ಪತ್ತಾರ, ಶ್ರೀನಾಥ ಸಜ್ಜನ, ಸಂಗಪ್ಪ ಸಜ್ಜನ, ರಮೇಶ ಕೋಟಿ, ಪರಶುರಾಮ ದಾವಣಗೇರಿ, ಅಶೋಕ ಪವಾರ, ಸುರೇಶ ಮಜ್ಜಗಿ, ಸುಧಾ ದೇಸಾಯಿ, ಶಶಿಕಲಾ ಮಜ್ಜಗಿ, ರೈತರಾದ ಬಸಪ್ಪ ಯಳ್ಳಿಗುತ್ತಿ, ಬಸಪ್ಪ ಸ್ವಾಗಿ, ಧರಿಯಪ್ಪ ಯಳ್ಳಿಗುತ್ತಿ, ಅಮಾತೆಪ್ಪ ಮಂಕಣಿ, ರಾಮಣ್ಣ ಬೊಮ್ಮಣಗಿ, ಚಿನ್ನಪ್ಪ ಹಾದಿಮನಿ, ಮಹಾಂತೇಶ ಯಳ್ಳಿಗುತ್ತಿ, ಬಸು ಪೂಜಾರಿ, ಈರಣ್ಣ ಯಳ್ಳಿಗುತ್ತಿ, ಶಂಕ್ರಪ್ಪ ಯಳ್ಳಿಗುತ್ತಿ ಪಾಲ್ಗೊಂಡಿದ್ದರು.