Advertisement
ಇಬ್ಬರಿಗೂ ಇದು ಮೊದಲ ಗ್ರಾನ್‌ಸ್ಲಾಮ್ ಫೈನಲ್ ಆಗಿರುವುದರಿಂದ ಫ್ರೆಂಚ್ ಓಪನ್ ನೂತನ ಚಾಂಪಿ ಯನ್ ಆಟಗಾರ್ತಿಯನ್ನು ಸ್ವಾಗತಿಸಲು ಸಜ್ಜಾಗಿದೆ.
ದ್ವಿತೀಯ ಸೆಮಿಫೈನಲ್‌ನಲ್ಲಿ ವಿಶ್ವದ 33ನೇ ರ್‍ಯಾಂಕಿಂಗ್ ಆಟಗಾರ್ತಿ ಕ್ರೆಜಿಕೋವಾ ಗ್ರೀಸ್‌ನ ಮರಿಯಾ ಸಕ್ಕರಿ ಅವರ ಆಕ್ರಮಣಕಾರಿ ಆಟವನ್ನು ಮೆಟ್ಟಿನಿಂತು 7-5, 4-6, 9-7 ಅಂತರದ ಗೆಲುವು ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ 5-3, 30-40ರ ಹಿನ್ನಡೆಯಲ್ಲಿದ್ದಾಗ ಕ್ರೆಜಿಕೋವಾ ಬ್ಯಾಕ್‌ಹ್ಯಾಂಡ್ ವಿನ್ನರ್ ಒಂದರ ಮೂಲಕ ಹೋರಾಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾದರು. ಸಕ್ಕರಿ ಹಾಲಿ ಚಾಂಪಿಯನ್ ಐಗಾ ಸ್ವಿಯಾಟೆಕ್ ಅವರನ್ನು ಮಣಿಸುವ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದರು. ಕ್ರೆಜಿಕೋವಾ ಕಳೆದ 40 ವರ್ಷಗಳಲ್ಲಿ ಫ್ರೆಂಚ್ ಓಪನ್ ಫೈನಲ್ ತಲುಪಿದ ಮೊದಲ ಜೆಕ್ ಆಟಗಾರ್ತಿಯಾಗಿದ್ದಾರೆ. 1981ರಲ್ಲಿ ಹಾನಾ ಮಂಡ್ಲಿಕೋವಾ ಫೈನಲ್ ಪ್ರವೇಶಿಸುವ ಜತೆಗೆ ಟ್ರೋಫಿಯನ್ನೂ ಎತ್ತಿದ್ದರು.
Related Articles
ಪಾವ್ಲುಚೆಂಕೋವಾ ಕುರಿತು ಹೇಳುವುದಾದರೆ, 2015ರ ಆಸ್ಟ್ರೇಲಿಯನ್ ಓಪನ್ ಬಳಿಕ ರಶ್ಯನ್ ಆಟಗಾರ್ತಿಯೊಬ್ಬರು ಕಾಣುತ್ತಿರುವ ಮೊದಲ ಗ್ರಾನ್‌ಸ್ಲಾಮ್ ಫೈನಲ್ ಇದಾಗಿದೆ. ಅಂದು ಸೆರೆನಾ ವಿಲಿಯಮ್ಸ್ ವಿರುದ್ಧ ರಶ್ಯದ ಮರಿಯಾ ಶರಪೋವಾ ಪರಾಭವಗೊಂಡಿದ್ದರು.
ಇದು ಪಾವ್ಲುಚೆಂಕೋವಾ ಅವರ 50ನೇ ಗ್ರಾನ್‌ಸ್ಲಾಮ್ ಪಂದ್ಯಾವಳಿಯಾಗಿದೆ. ಅತ್ಯಧಿಕ ಗ್ರಾನ್‌ಸ್ಲಾಮ್ ಆಡಿದ ಬಳಿಕ ಫೈನಲ್ ಪ್ರವೇಶಿಸಿದ ದಾಖಲೆಯೂ ಇದಾಗಿದೆ. ಇಟಲಿಯ ರಾಬರ್ಟಾ ವಿನ್ಸಿ 44 ಗ್ರಾನ್‌ಸ್ಲಾಮ್ ಕೂಟದ ಬಳಿಕ ಫೈನಲ್ ತಲುಪಿದ್ದು ದಾಖಲೆಯಾಗಿತ್ತು.
Advertisement