Advertisement

ಫೆಡರರ್‌ ಜಾಹೀರಾತು ನೋಡಿ ಹೆದರಿದ ಅಭಿಮಾನಿಗಳು!

08:45 PM Aug 27, 2022 | Team Udayavani |

ಸ್ವಿಜರ್ಲೆಂಡ್‌: ವಿಶ್ವವಿಖ್ಯಾತ ಟೆನಿಸಿಗ ರೋಜರ್‌ ಫೆಡರರ್‌ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ಅಭಿಮಾನಿಗಳಿಗೆ ಮಾತ್ರ ಅವರೆಂದೂ ಆಡುತ್ತಲೇ ಇರಬೇಕು ಎಂಬ ಹಂಬಲ. 20 ಪುರುಷರ ಸಿಂಗಲ್ಸ್‌ ಗ್ರ್ಯಾನ್‌ಸ್ಲಾéಮ್‌ಗಳನ್ನು ಗೆದ್ದಿರುವ ಫೆಡರರ್‌, ಇತ್ತೀಚೆಗೆ ಒಂದು ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು.

Advertisement

ಅದರ ಆರಂಭದ ವಾಕ್ಯಗಳನ್ನು ನೋಡಿ ಅಯ್ಯೋ ನಮ್ಮ ಮೆಚ್ಚಿನ ತಾರೆ ನಿವೃತ್ತಿಯಾಗಿಯೇ ಬಿಟ್ಟರಲ್ಲ ಎಂದು ಕೆಲವರು ಗಾಬರಿಯಾಗಿದ್ದರು. ಕೆಲವರಿಗಂತೂ ಇನ್ನೇನು ಹೃದಯಾಘಾತವಾಗುವುದೊಂದು ಬಾಕಿ ಎಂಬ ಸ್ಥಿತಿ! ಹಾಗಂತ ಅವರೇ ಬರೆದುಕೊಂಡಿದ್ದಾರೆ. ಕಡೆಗೆ ಗೊತ್ತಾಗಿದ್ದೇನೆಂದರೆ ಫೆಡರರ್‌ ಒಂದು ಶೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು ಪ್ರಚಾರ ಮಾಡಲು ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಪ್ರಕಟಿಸಿದ್ದಾರೆ. ವಿಷಯ ಸ್ಪಷ್ಟವಾದ ನಂತರ ಅಭಿಮಾನಿಗಳು ಸಮಾಧಾನ ತಾಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next