Advertisement

ಬೊಬ್ಬರ್ಯಗುಡ್ಡೆ ಬಳಿ ಸಂಪರ್ಕ ರಸ್ತೆ ಕುಸಿತದ ಭೀತಿ

06:00 AM Jul 31, 2018 | Team Udayavani |

ಮಲ್ಪೆ: ಕಡೆಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಸಸಿತೋಟ ಎಂಬಲ್ಲಿ ನದಿ ಕೊರೆತದ ಪರಿಣಾಮವಾಗಿ ಇಲ್ಲಿನ ಹೊಳೆ ತೀರದ ನಿವಾಸಿಗಳು ಬವಣೆ ಪಡುವಂತಾಗಿದೆ.

Advertisement

ನದಿ ಕೊರೆತದ ಪರಿಣಾಮ ಇಲ್ಲಿ ವಿದ್ಯುತ್‌ ಕಂಬ ನೀರು ಉರುಳಿ ಬೀಳುವ ಸ್ಥಿತಿಯಲ್ಲಿದೆ. ಮಾತ್ರವಲ್ಲದೆ ಸಂಪರ್ಕ ರಸ್ತೆಯೂ ಕೂಡ ಕಡಿತಗೊಳ್ಳುವ ಸಾಧ್ಯತೆ ಇದೆ. ನದಿ ಕೊರೆತ ಉಂಟಾಗದಂತೆ ಈ ಭಾಗದಲ್ಲಿ ಶಾಶ್ವತವಾದ ಕಲ್ಲುದಂಡೆಯನ್ನು ನಿರ್ಮಿಸದೇ ಇರುವುದರಿಂದಾಗಿ ಸಮಸ್ಯೆ ಉದ್ಭವಿಸಿದೆ. 

ಮಳೆಗಾಲದಲ್ಲಿ ಭಾರಿ ಮಳೆ ಸುರಿದಾಗ ಹೊಳೆ ನೀರು ತುಂಬಿಕೊಂಡು ನದಿ ಕೊರತದ ಭೀಕರತೆ ಅತಿಯಾಗುತ್ತದೆ. 
ಈಗಾಗಲೇ ರಸ್ತೆಯ ಅಂಚಿನವರೆಗೆ ಕೊರೆತ ಉಂಟಾಗಿದ್ದು ಸಮೀಪದ ಮನೆಗಳಿಗೂ ಭೀತಿ ಉಂಟಾಗುತ್ತಿದೆ. ಶಾಲಾ ಮಕ್ಕಳ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಾಯಕ್ಕೆ ಅಹ್ವಾನ ನೀಡುವಂತಿದೆ.

ಸುಮಾರು 7-8 ವರ್ಷಗಳ ಹಿಂದೆ ಇಲ್ಲಿನ ಅಣೆಕಟ್ಟು ವರೆಗೆ ಶಾಶ್ವತ ತಡೆಗೋಡೆ ರಚನೆ ಮಾಡಲಾಗಿದೆ. ಅಲ್ಲಿಂದ ಮುಂದೆ ಸುಮಾರು 200 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಾಣ ಆಗಬೇಕಾಗಿದ್ದು  ಈ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಎಲ್ಲ ಇಲಾಖೆಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಹೋರಾಟ ಮಾಡುತ್ತಾ ಬಂದಿದ್ದೇವೆ
ಕಳೆದ ಮೂರು ವರ್ಷದಿಂದ ಈ ಬಗ್ಗೆ ನಾವು ಹೋರಾಟವನ್ನು ಮಾಡುತ್ತಾ ಬಂದಿದೇªವೆ. ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದೇªವೆ ಯಾವ ಪ್ರಯೋಜನವೂ ಇಲ್ಲ. ನದಿ ಕೊರೆತದಿಂದ ರಸ್ತೆ ಜರಿದು ಸಮೀಪದ ಮನೆಗಳಿಗೆ ಅಪಾಯ ಕಾದಿದೆ.

– ಪ್ರಶಾಂತ್‌ ಕಾಂಚನ್‌ , ಕುತ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next