Advertisement
ಎರಡು ದಿನಗಳ ಹಿಂದೆ ಘನ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಾ.ಹೆ. 75ರಲ್ಲಿನ ದೋರ್ಮೆ ಮಸೀದಿ ಬಳಿಯ ಕಿರು ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಸೇತುವೆ ಒಂದು ಪಾರ್ಶ್ವದ ಕಬ್ಬಿಣದ ತಡೆ ಬೇಲಿ ಸಂಪೂರ್ಣ ಮುರಿದು ಕೆಳಕ್ಕೆ ಬಿದ್ದಿತ್ತು. ಇದರಿಂದಾಗಿ ಇಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾದಂತಾಗಿದೆ. ಮಾತ್ರ ವಲ್ಲದೆ ಈ ಸೇತುವೆಯು ತಿರುವು ರಸ್ತೆಯಲ್ಲಿದ್ದು, ವೇಗವಾಗಿ ಬಂದ ವಾಹನಗಳು ನಿಯಂತ್ರಣಕ್ಕೆ ಬಾರದಿದ್ದರೆ ಬಂಡೆಕಲ್ಲುಗಳಿರುವ ತೋಡಿಗೆ ಬೀಳುವ ಸಾಧ್ಯತೆಯಿದೆ.
ಸ್ಥಿತಿಯ ಬಗ್ಗೆ ಸ್ಥಳೀಯರು ಹಲವು ಬಾರಿ ತಿಳಿಸಿದರೂ ಸಂಬಂಧಪಟ್ಟ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದೆ. ಇದು ತಿರುವುನಿಂದ ಕೂಡಿರುವ ರಸ್ತೆಯಾಗಿರುವುದರಿಂದ ಇಲ್ಲಿ ಅಪಾಯದ ಸಾಧ್ಯತೆ ಮತ್ತಷ್ಟು ಹೆಚ್ಚಿದೆ. ಈ ಹಿನ್ನೆಲೆ ಯಲ್ಲಿ ತುರ್ತಾಗಿ ಇಲ್ಲಿ ರಕ್ಷಣಾ ತಡೆ ಬೇಲಿ ಅಳವಡಿಸುವ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ. ಭೀತಿಯಲ್ಲೇ ದಿನ ಕಳೆಯುವಂತಾಗಿದೆ
ವೇಗವಾಗಿ ಬಂದ ವಾಹನ ಇಲ್ಲಿನ ತಿರುವನ್ನು ಅಂದಾಜಿಸಲು ವಿಫಲವಾದರೆ ತೋಡಿಗೆ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಜೀವ ಹಾನಿಗೆ ಕಾರಣವಾಗಬಹುದಾದ್ದರಿಂದ ನಾವೆಲ್ಲ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ವಿಳಂಬಿಸದೆ ಇಲ್ಲಿ ತಡೆ ಬೇಲಿ ನಿರ್ಮಿಸಬೇಕೆಂದು ಸ್ಥಳೀಯ ಪಂಚಾಯತ್ ಸದಸ್ಯ ಅಬ್ದುಲ್ಲಾ ಆಗ್ರಹಿಸಿದ್ದಾರೆ.
Related Articles
ದೋರ್ಮೆ ಬಳಿ ಸೇತುವೆಗೆ ಲಾರಿ ಢಿಕ್ಕಿ ಹೊಡೆದು ತಡೆಬೇಲಿಗೆ ಹಾನಿಯಾಗಿರುವುದಕ್ಕೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಇರಿಸಲಾಗುವುದು. ಶಾಶ್ವತ ವ್ಯವಸ್ಥೆಯನ್ನು ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
– ತಿಮ್ಮಪ್ಪ ನಾಯಕ್, ವೃತ್ತ ನಿರೀಕ್ಷಕರು, ಪುತ್ತೂರು
Advertisement